ಮುನ್ನೋಟ


ಮುನ್ನೋಟ : ರಿಕ್ತ
0
7 months ago preview


ಗಾಂಧಿನಗರದಲ್ಲಿ ಇತ್ತೀಚೆಗೆ “ರಿಕ್ತ” ಅನ್ನೊ ಚಿತ್ರದ ಹೆಸರು ಎಲ್ಲೆಲ್ಲೂ ಕೇಳಿಬರ್ತಿದೆ, ಹೌದು  ಸೈಲೆಂಟ್ ಆಗೆ ಸುದ್ದಿ ಆಗ್ತಿರೊ ಈ ಚಿತ್ರ ಹಲವಾರು ವಿಶೇಷತೆಗಳಿಂದ ಕೂಡಿದೆ,ಅದರ ಬಗ್ಗೆ ಒಂದಿಷ್ಟು ಸ್ಫೆಷಲ್ ನ್ಯೂಸ್  ಇಲ್ಲಿದೆ.

ಇದೊಂದು ಹಾರರ್ ಚಿತ್ರವಾಗಿದ್ದು ರಾಷ್ಟ್ರ ಪ್ರಶಸ್ತಿ ವಿಜೇತ “ಸಂಚಾರಿ ವಿಜಯ್” ಮೈನ್ ರೋಲ್ ನಲ್ಲಿ ಕಾಣಿಸಿಗೊಂಡಿದ್ದಾರೆ. ಅನೇಕ ಶ್ರಮ ವಹಿಸಿ ಕಷ್ಟವನ್ನು ಇಷ್ಟಪಟ್ಟು ಮಾಡಿದ ಚಿತ್ರ “ರಿಕ್ತ”. ದಿನದ 24 ಘಂಟೆಗಳಲ್ಲಿ ಸುಮಾರು 20 ಘಂಟೆ ಶೂಟಿಂಗ್‌ನಲ್ಲೆ ತೊಡಗಿರ್ತಿತ್ತಂತೆ ಚಿತ್ರ ತಂಡ. ಅದರಲ್ಲು ಸಂಚಾರಿ ವಿಜಯ್ ಕೆಲವೊಮ್ಮೆ ಶೂಟಿಂಗ್ ಮುಗಿಸಿ ಮೇಕಪ್ ತೆಗೆಯದೆ ರೂಮ್ ಗೆ ಹೋಗಿ ಮರುದಿನ ಅದೇ ಮೇಕಪ್ ನಲ್ಲಿ ಬಂದು ಶೂಟಿಂಗ್ ನಲ್ಲಿ ಬಾಗವಹಿಸಿದ ದಿನ ಕೂಡ ಇದೆಯಂತೆ.

ಇನ್ನು ಈ ಚಿತ್ರ ಸೆಟ್ ಏರಿದ ಬಗೆಯಂತು ವಿಶೇಷವಾಗಿದೆ.ಮೊದಲು ಒಂದು ಹಾಡನ್ನು ಮಾಡಿ ಅದನ್ನು ನಿರ್ಮಾಪಕರಾದ ಅರುಣ್ ಕುಮಾರ್ ಬಳಿ ಹೋದರು, ಹಾಡನ್ನು ಕೇಳಿ ಅವರು ಒಕೆ ಅಂದು ಇದನ್ನು ಸಿನಿಮಾ ಮಾಡೋಣ ಎಂದು ಗ್ರೀನ್ ಸಿಗ್ನಲ್ ಕೊಟ್ರಂತೆ.ನಂತರ ಚಿತ್ರದ ನಾಯಕ ಯಾರೆಂದು ತಲೆಕೆಡಿಸ್ತಿರುವಾಗ ಹೊಳ್ದಿದ್ದೆ “ನಾನು ಅವನಲ್ಲಾ ಅವಳು” ಚಿತ್ರದ ಖ್ಯಾತಿಯ ಸಂಚಾರಿ ವಿಜಯ್, ಅವರ ಬಳಿ ಹೋಗಿ ಹಾಡನ್ನು ಕೇಳಿಸಿ, ಕಥೆ, ಚಿತ್ರಕಥೆ ಹೇಳಿದ್ರು. ಅವರು ಚೆನ್ನಾಗಿದೆ, ಹೊಸ ರೀತಿಯ ಕಥೆ ವಿಭಿನ್ನವಾಗಿದ್ದು ಸರಿ ಎಂದು ಅವ್ರುನು ಗ್ರೀನ್ ಸಿಗ್ನಲ್ ಕೊಟ್ರು, ವಿಜಯ್ ಗೆ ಜೊತೆಯಾಗಿ ಅದ್ವಿಕ ಕೂಡ ಪ್ರಮುಖ ಪಾತ್ರ ವಹಿಸಿದ್ದಾರಂತೆ.

ಈ ಸಿನಿಮಾವನ್ನು ಶಿವಮೊಗ್ಗ ಬಳಿಯ ಸುಳ್ಳಳ್ಳಿ ಎಂಬ ಗ್ರಾಮದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಚಿತ್ರದ ಮೈನ್ ಪ್ಲಸ್ ಪಾಯಿಂಟ್ ಅಂದರೆ ಕಥೆ, ಚಿತ್ರಕಥೆ ಮತ್ತು ಸಂಗೀತ. ವಿಶೇಷವೆನೆಂದರೆ “ಮುಂಗಾರು ಮಳೆ” ಚಿತ್ರದಲ್ಲಿ ಸತ್ತ ದೇವದಾಸ್ ಮೊಲ ಈ ಚಿತ್ರದಲ್ಲಿ ಆತ್ಮವಾಗಿ ಸಂಚಾರಿ ವಿಜಯ್’ಗೆ ಸಿಗುತ್ತಂತೆ ಇವರಿಬ್ಬರ ಕಾಂಭಿನೇಷನ್ ಸಖತ್ ಆಗೆ ಮೂಡಿಬಂದಿದೆ ಅಂತಿದೆ ಚಿತ್ರ ತಂಡ.

ಇಷ್ಟಕ್ಕು “ರಿಕ್ತ” ಎಂದರೇನು? ಅನ್ನುವ ಪ್ರಶ್ನೆ ಕೆಲವರಲ್ಲಿ ಮೂಡಿರುತ್ತೆ. ರಿಕ್ತ ಎಂದರೆ “ಶೂನ್ಯ” ಎಂದರ್ಥ. ಚಿತ್ರದ ಟೈಟಲ್ ವಿಶೇಷವಾಗಿದ್ದು ಚಿತ್ರವು ಅಷ್ಟೆ ವಿಭಿನ್ನವಾಗಿದ್ಯಂತೆ.ಈ ಚಿತ್ರಕ್ಕೆ ರಾಕಿ ಸೋನು ಸಂಗೀತ ನೀಡಿದ್ದು ಅದ್ಭುತ ರೀತಿಯಲ್ಲಿ ಹಾಡುಗಳನ್ನು ರೀರೆಕಾರ್ಡಿಂಗ್ ಕಂಪೊಸ್ ಮಾಡಿಲಾಗಿದೆ. ಅದರಲ್ಲು  “ಮಿಸ್’ಡು ವಾಟ್’ಡು” ಸಾಂಗ್ ನ್ನು ಬೆಂಗಳೂರಿನ ಚಾಮರಾಜಪೇಟೆ ಸುತ್ತಮುತ್ತ ಶೂಟಿಂಗ್ ಮಾಡಿದ್ದು ಮುರಳಿ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಸಖತ್ ಆಗೆ ಮೂಡಿ ಬಂದಿದ್ಯಂತೆ. ಇನ್ನೆರಡು ಹಾಡುಗಳನ್ನು ಜೈ ಹಾಗು ನಾಗರಾಜು ಕೊರಿಯೊಗ್ರಾಫ್ ಮಾಡಿದ್ದಾರೆ.
ನಿಮ್ಮ ಅಭಿಪ್ರಾಯಗಳು


Balkani News Polls

ನಿಮ್ಮ ಇಷ್ಟ ಅದ ಚಿತ್ರಯಾವುದು .?
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್

A PHP Error was encountered

Severity: Notice

Message: Undefined variable: newpost

Filename: views/polls_page.php

Line Number: 286