ವಿಮರ್ಶೆ

ವಿರ್ಮಶೆ :ತಾರಕ್, ಇದು ಫಕ್ಕಾ ನಿರ್ದೇಶಕನ ಚಿತ್ರ
0 rating
3 months ago filmreview


ಬದಲಾದ ಗೆಟಪ್ ನಲ್ಲಿ ದರ್ಶನ್.

ತಾರಕ್ ಚಿತ್ರ ಬಿಡುಗಡೆಯಾಗಿದೆ. ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಸಹ ಕಾಣುತ್ತಿದೆ. ನಮ್ಮ ಗಾಂಧಿನಗರದ ಸಿನಿ ಪಂಡಿತರ ಲೆಕ್ಕಾ ಚಾರದ ಪ್ರಕಾರ, ಮತ್ತೆ ದರ್ಶನ್ ಅವರು ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುತ್ತಾರೆ. ಅದು ನಿಜ. ಏಕೆಂದರೆ ಈ ಹಿಂದಿನ ಚಿತ್ರಗಳಲ್ಲಿದ್ದ ಅಬ್ಬರ ಇಲ್ಲಿಲ್ಲ, ಇಲ್ಲಿ ದರ್ಶನ್ ಯಾರಿಗೂ ಚಾಲೆಂಜ್ ಹಾಕುವುದಿಲ್ಲ. ಬದಲಾಗಿ ಬದಲಾಗಿ, ತನಗೆ ಎದುರಿ ಬರುವ ಕೌಟಂಭಿಕ ಚಾಲೆಂಜ್ ಗಳನ್ನು ಗೆಲ್ಲುತ್ತಾರೆ. ಇಲ್ಲಿ ದರ್ಶನ್ ಅವರ ದರ್ಶನ ಸಿಗುವುದು ತಾರಕ್ ರಾಮ್ ಆಗಿ ಮಾತ್ರ.

ವಿದೇಶದಲ್ಲಿ ನೆಲೆಸಿದ ತಾರಕ್ ರಾಮ್ ನಿಗೂ, ಬೆಂಗಳೂರಿನ ಶ್ರೀಮಂತ "ಚಟ್ನಿ ಪುಡಿ" ಮಾರಾಟದ ಉದ್ಯಮಿಗೂ , ತಾತ ಮೊಮ್ಮಗನ ಸಂಭಂದ. ತನ್ನ ತಂದೆ ತಾಯಿಯ ಸಾವಿಗೆ ಕಾರಣ ತನ್ನ ತಾತನೇ ಎಂಬುದು ತಾರಕ್ ನ ಮೊಂಡು ವಾದ. ಈ ವಾದವೇ ಅವನನ್ನು ತಾತನ ಜೊತೆಗೆ ಕಳೆಯಲೆಂದೇ ಎರಡು ತಿಂಗಳ ಅವಕಾಶ , ಪ್ರೇಯಸಿ ಮೀರಾಳಿಂದ ಒದಗಿ ಬರುತ್ತದೆ. ಅಲ್ಲಿಂದ ಕಥೆ ಮತ್ತೊಂದು ಮಗ್ಗಲಿಗೆ ಒರಳುತ್ತದೆ. ಮಾಡರ್ನ್ ತಾತನಾಗಿ ದೇವರಾಜ ಅವರ ಅಭಿನಯದ ಜೊತೆಗೆ ದರ್ಶನ್ ಖಡಕ್ ಆಗಿಯೂ ಅಬ್ಬರಿಸಿದ್ದಾರೆ. ಶೃತಿ ಹರಿಹರನ್ ಅವರದ್ದು ಮರೆಯಾರದ ಅಭಿನಯ.

ಸ್ನೇಹ ಹಾಗೂ ಮೀರಾ, ಈ ಇಬ್ಬರೂ ಹುಡುಗಿಯರ ಪೈಕಿ, ಇಬ್ಬರೂ ನೋಡುಗರ ಮನ ಗೆಲ್ಲುವುದು ಇಷ್ಟವಾಗುತ್ತದೆ. ಅದರಂತೆ ಅಬ್ಬರದ ದರ್ಶನ್ ಇಲ್ಲಿ ಕಾಣ ಸಿಗುವುದೇ ಇಲ್ಲ. ಅವರ ಅಭಿಮಾನಿಗಳಿಗೂ ಇದೊಂಥರ ಟ್ವಿಸ್ಟ್. ಈ ಹಿಂದೆ ಬೇರೆ ಬೇರೆಯಾಗುವ ಕುಟುಂಬಗಳನ್ನು ಒಂದು ಮಾಡುವ ಚಿತ್ರಗಳನ್ನೇ ಕೊಟ್ಟಂತ ಪ್ರಕಾಶ್ ಅವರ ಈ ಚಿತ್ರವೂ ಸಹ ತಾತ ಮೊಮ್ಮಗನ ಮಿಲನದ ಕತೆಯಾಗಿದೆ.

ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಎರಡು ಹಾಡುಗಳು ಓಕೆ. ಯೂರೋಪಿನ ಸುಂದರ ಜಾಗಗಳನ್ನು ಸೆರೆ ಹಿಡಿದಿರುವ ಛಾಯಾಗ್ರಹಣ ಸುಂದರವಾಗಿದ್ದು, ಅಲ್ಲಲ್ಲಿ ಬರುವ ಕಾಮಿಡಿ ಟ್ರ್ಯಾಕ್ ಗಳು ತಕ್ಕ ಮಟ್ಟಿಗೆ ನಗಿಸುತ್ತವೆ. ಇನ್ನೇನು ಚಿತ್ರ ಸ್ವಲ್ಪ ನಿಧಾನ ಅನಿಸಿದರೂ, ಸೆಕೆಂಡ್ ಹಾಫ್ ನಲ್ಲಿನ ಭಾವತೀವ್ರತೆಯ ಸನ್ನಿವೇಶಗಳು ಎಲ್ಲವನ್ನೂ ಮರೆಸಿಬಿಡುತ್ತದೆ. ಹಾಗೂ ಎಲ್ಲರನ್ನೂ ಅಳಸಿಬಿಡುತ್ತದೆ.

 ಯಾವುದೇ ಅಶ್ಲೀಲತನ, ಕೌಂಟರ್ ಡೈಲಾಗ್, ಡಬಲ್ ಮೀನಿಂಗ್ ಡೈಲಾಗ್, ಐಟಂ ಸಾಂಗ್ ಗಳಿಲ್ಲದ ಈ ತಾರಕ್ ಫಕ್ಕಾ ಕೌಟಂಭಿಕ ಚಿತ್ರ. ಹಾಗೂ ನಿರ್ದೇಶಕನ ಚಿತ್ರ..

ನಿಮ್ಮ ಅಭಿಪ್ರಾಯಗಳುRelated Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್