ವಿಮರ್ಶೆ

'ಸಿಲಿಕಾನ್ ಸಿಟಿ': ಇದು ಫ್ಯಾಮಿಲೀ ಎಂಟರ್ಟೈನ್ ಮೆಂಟ್ ಚಿತ್ರ
0 rating
9 months ago filmreview


ಕನ್ನಡ ಚಿತ್ರರಂಗ ನಿರೀಕ್ಷಿಸುತ್ತಿರುವ 'ಸಿಲಿಕಾನ್ ಸಿಟಿ' ಚಿತ್ರ ಈ ವಾರದಿಂದ ಕನ್ನಡ ಸಿನಿರಸಿಕರಿಗೆ ಭರ್ಜರಿ ಮನೋರಂಜನೆಯನ್ನು ಉಣಬಡಿಸುತ್ತಿದೆ. ಶ್ರೀನಗರ ಕಿಟ್ಟಿ ಅಭಿನಯದ 'ಸಿಲಿಕಾನ್ ಸಿಟಿ' ಚಿತ್ರ ಈ ವಾರದಿಂದ ಪ್ರದರ್ಶನ ಆರಂಭಿಸಿದ್ದು, ಇದು ಫ್ಯಾಮಿಲೀ ಎಂಟರ್ಟೈನ್ ಮೆಂಟ್ ಚಿತ್ರಎನಿಸಿದೆ.  

'ತಮಿಳು ರಿಮೇಕ್ ಆದ್ರೂ ಬಹುತೇಕ ಕನ್ನಡಿಗರೇ ನಟಿಸಿರುವ ಚಿತ್ರ ಇದಾಗಿದೆ. ತಮಿಳಿನ ಸೂಪರ್ ಹಿಟ್ ಸಿನಿಮಾವಾಗಿರುವ 'ಮೆಟ್ರೋ' ವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗಿದೆ.

ಸಿಲಿಕಾನ್ ಸಿಟಿ ಎಂದರೆ ಬೆಂಗಳೂರು. ಹಾಗಾಗಿ ಸಿಲಿಕಾನ್ ಸಿಟಿ ಹೆಸರಿಗೆ ತಕ್ಕಂತೆ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಶೂಟಿಂಗ್ ನಡೆದಿತ್ತು.

ಮುರುಳಿಗುರಪ್ಪ ನಿರ್ದೇಶನದ 'ಸಿಲಿಕಾನ್ ಸಿಟಿ' ಚಿತ್ರ ಮಾಧ್ಯಮ ವರ್ಗದ ಕುಟುಂಬದ ವೇದನೆಯ ಕಥೆಯಾಗಿದೆ. ಕುಟುಂಬವೊಂದರಲ್ಲಿ ನಡೆಯುವ  ಅಹಿತಕರ ಘಟನೆ, ಬಳಿಕ  ಸಹೋದರರ ನಡುವೆ ಆಗುವ  ಬದಲಾವಣೆ, ನಂತರ ಆ ಕುಟುಂಬ ಎದುರಿಸುವ ಸವಾಲುಗಳೇಆಹುಹೋಗುಗಳ ಈ ಚಿತ್ರದ ತಿರುಳಾಗಿದೆ.

 ಶ್ರೀನಗರ ಕಿಟ್ಟಿ, ನಟಿ ಕಾವ್ಯಶೆಟ್ಟಿ, ಸುರೇಶ್ ಬಾಬು ಮೊದಲಾದವರು ನಟಿಸಿರುವ 'ಸಿಲಿಕಾನ್ ಸಿಟಿ' ರಾಜ್ಯದಾದ್ಯಂತ ಸುಮಾರು 180 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಮನೆಮಂದಿ ಕುಟುಂಬಸಮೇತರಾಗಿ ನೋಡಬಹುದಾದ ಸಿನಿಮಾವಾಗಿದೆ ಎಂದು ನಿರ್ದೇಶಕ ಮುರುಳಿಗುರಪ್ಪ ಹೇಳಿಕೊಂಡಿದ್ದಾರೆ.   

ನಿಮ್ಮ ಅಭಿಪ್ರಾಯಗಳುRelated Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್