ವಿಮರ್ಶೆ

ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಾ ಟೈಗರ್! ಇಂದು ತೆರೆಗೆ ಅಪ್ಪಳಿಸಿದ ಟೈಗರ್.
0 rating
9 months ago filmreview


ಟೈಗರ್ ಎಂದಾಕ್ಷಣ ಎಲ್ಲರಿಗೂ ಭಯ, ಹೆದರಿಕೆ ಆಗುವುದಂತೂ ಸಾಮಾನ್ಯ. ಹುಲಿ ಯಾರದೇ ಭಯವಿಲ್ಲದೆ ಕಾಡಿನಲ್ಲಿ ಒಂಟಿ ಸಲಗದಂತೆ ಇರುತ್ತದೆ. ಅಷ್ಟಕ್ಕೂ ಈಗ ಟೈಗರ್ ವಿಷಯ ಮಾತನಾಡುತ್ತಿರುವುದು ಯಾಕೆ ಅಂತೀರಾ? ವಿಷಯ ಇದೆ ಸ್ವಾಮಿ. ಈ ವಾರ ರಾಜ್ಯಾದ್ಯಂತ ಟೈಗರ್ ಸಿನಿಮಾ ರಿಲೀಸ್ ಆಗುತ್ತಿದೆ.

ಹೊಸ ಲುಕ್, ಹೊಸ ಸಬ್ಜೆಕ್ಟನೊಂದಿಗೆ ಕಾಲಿಡುತ್ತಿದ್ದಾನೆ ಟೈಗರ್. ಲವರ್‌ ಬಾಯ್‌ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರದೀಪ್, ಇದೇ ಮೊದಲ ಬಾರಿಗೆ ಖಡಕ್ ಗೆಟಪ್ ನಲ್ಲಿ ಕಾಣಿಕೊಂಡಿದ್ದಾರೆ. ಅದು ಅಲ್ಲದೇ ಪಾತ್ರಕ್ಕಾಗಿ ಸಿಕ್ಸ್ ಪ್ಯಾಕ್ ಕೂಡಾ ಮಾಡಿದ್ದಾರೆ. ಟೈಗರ್ ಸಿನಿಮಾಗಾಗಿಯೇ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.

ಟೈಗರ್ ಸಿಂಪಲ್ ಕಥೆಯನ್ನು ಒಳಗೊಂಡಿರುತ್ತದೆ. ನಾಯಕ ಪ್ರದೀಪ್ ಪೊಲೀಸ್‌ ಅಧಿಕಾರಿಯಾಗಬೇಕು ಎನ್ನುವ ಕನಸು ಕಾಣುತ್ತಿರುತ್ತಾನೆ. ಮಗ ಬ್ಯಾಂಕ್‌ ಮ್ಯಾನೇಜರ್‌ ಆಗಬೇಕು ಎಂಬ ಆಸೆಯನ್ನು ನಾಯಕನ ತಂದೆ ಹೊಂದಿರುತ್ತಾನೆ. ಮಗನ ಕನಸು ಈಡೇರುತ್ತದೆಯೋ ಅಥವಾ ಅಪ್ಪನ ಆಸೆ ಗೆಲ್ಲುತ್ತದೆಯೋ ಎಂಬುದೇ ಸಿನಿಮಾದ ಕಥಾಹಂದರ. ಆ್ಯಕ್ಷನ್‌ ಕಮ್‌ ಫ್ಯಾಮಿಲಿ ಸಬ್ಜೆಕ್ಟ್ ಇರುವ ಚಿತ್ರ ಟೈಗರ್‌ ಈ ವಾರ ತೆರೆಗೆ ಅಪ್ಪಳಿಸಿದ್ದು, ಪ್ರೇಕ್ಷಕ ಎಷ್ಟರಮಟ್ಟಿಗೆ ಒಪ್ಪಿಕೊಳ್ಳುತ್ತಾನೆ ಎಂದು ಕಾದು ನೋಡಬೇಕಾಗಿದೆ.

ಪ್ರದೀಪ್ ಗೆ ನಾಯಕಿಯಾಗಿ ಮಧುರಿಮಾ ಮತ್ತು ನಾಯಕನ ತಂದೆಯ ಪಾತ್ರದಲ್ಲಿ ಕೆ.ಶಿವರಾಮ ಕಾಣಿಸಿಕೊಂಡಿದ್ದಾರೆ. ಚಿಕ್ಕಣ್ಣ,ಸಾಧು ಕೋಕಿಲ ಸೇರಿದಂತೆ ಹಲವಾರು ತಾರಾಗಣದಲ್ಲಿದ್ದಾರೆ. ಟೈಗರ್ ಚಿತ್ರಕ್ಕೆ ತರುಣ್‌ ಸುಧೀರ್‌ ಕತೆ ಬರೆದಿದ್ದಾರೆ.  ನಂದಕಿಶೋರ್‌ ನಿರ್ದೇಶನ ಮಾಡಿದ್ದಾರೆ. ಅರ್ಜುನ ಜನ್ಯ ಸಂಗೀತ ನಿರ್ದೇಶನ ನೀಡಿದ್ದಾರೆ.

- ನಾಗಪ್ಪ.ಕೆ.ಮಾದರ 


ನಿಮ್ಮ ಅಭಿಪ್ರಾಯಗಳುRelated Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್