ವಿಮರ್ಶೆ

ಹೊಸತನದೊಂದಿಗೆ ಖುಷಿ ‘ನ್ಯೂ ಇಯಾರ್’ ಬಗ್ಗೆ ಎಲ್ಲರೂ ಹ್ಯಾಪೀ
0 rating
10 months ago filmreview


‘ಹ್ಯಾಪಿ ನ್ಯೂ ಇಯಾರ್’ ಚಿತ್ರ ಸ್ಯಾಂಡಲ್ ವುಡ್ ಗೆ ಹೊಸ ಸಂಬ್ರಮವನ್ನೇ ಕರುಣಿಸಿಕೊಟ್ಟಿದೆ. ನವವವೀನ ವೈಶಿಷ್ಯಗಳ ‘ಹ್ಯಾಪಿ ನ್ಯೂಇಯರ್’ ತೆರೆ ಕಂಡು ಕೆಲವು ದಿನಗಳೇ ಕಳೆದಿದೆ. ಚಿತ್ರ ನೋಡಿದವರಿಗೆ ಬೇಸರವಾಗಿಲ್ಲ. ದುಡ್ಡು ಕೊಟ್ಟವರಿಗೂ ನಿರಾಸೆಯಾಗಿಲ್ಲ. ಅದಕ್ಕೆ ತಕ್ಕಂತೆ ಮನರಂಜನೆ ಉಣ ಬಡಿಸಿರುವುದರಿಂದಲೇ ಈ ಚಿತ್ರ ನೋಡುಗರನ್ನು ಹ್ಯಾಪಿಯಾಗಿಸಿದೆ. ‘ಹ್ಯಾಪಿ ನ್ಯೂ ಇಯರ್’ ಚಿತ್ರ ನೋಡುಗರ ವಿಮರ್ಶೆ ಭಿನ್ನ ವಿಭಿನ್ನ.

ವಿಭಿನ್ನ ರೀತಿಯ ಪ್ರಯೋಗಕ್ಕೆ ಸಾಕ್ಷಿಯಾಗಿರುವ ‘ಹ್ಯಾಪಿ ನ್ಯೂ ಇಯರ್’ 5 ಕತೆಗಳ ಒಂದು ದೃಷ್ಯಪುಂಜ. ನಿರ್ದೇಶಕ ಪನ್ನಾಗಾಭರಣ ಗರಡಿಯ ಸುತ್ತ ಸುತ್ತಿದ ತಾರೆಯರೂ ಕೂಡ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. 5 ಕತೆ, 5 ನಾಯಕ ನಾಯಕಿ ಜೋಡಿ ಈ ಸಮರ್ಥ ತಂಡ ಚಿತ್ರದ ಅಂತಿಮ ಹಂತದ ವರೆಗೂ ನಾಚೂಕಾಗಿಯೇ ಮುನ್ನಡೆದಿದೆ.

ಹಲವು ಕಥೆಗಳ ಒಂದೇ ಸಿನಿಮಾವನ್ನು ಅಂತಾಲಾಜಿ ಎಂದೂ ಕರೆಯುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಇದೇಮೊದಲ ಬಾರಿಗೆ ಎಂಬಂತೆ 5 ವಿಭಿನ್ನ ಕತೆಗಳನ್ನು ಥಳುಕು ಹಾಕಿಸಿ ಒಂದು ಚಿತ್ರಕಥೆಯನ್ನಾಗಿಸಿದ ಪನ್ನಾಗಾಭರಣ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಎಲ್ಲಾಕಥೆಗಳನ್ನು ಜಾಣ್ಮೆಯಿಂದಲೇ ಪೋಣಿಸಿ ಅದಕ್ಕೆ ತಕ್ಕಂತೆ ಸಂಭಾಷಣೆಯನ್ನು ಹೆಣೆದು ಬಹುತೇಕ ಪ್ರಸಂಗಗಳಿಗೆ ಪ್ರೀತಿಯನ್ನೆ ಹೆಣೆದು ಒಂದು ಸುಂದರ ದೃಶ್ಯವ್ಯೂಹವನ್ನು ಪನ್ನಾಗಾಭರಣ ನಿರ್ಮಿಸಿದ್ದಾರೆ. ಈ ದೃಶ್ಯವ್ಯೂಹ ನೋಡುಗರ ನೋಟವನ್ನು ಸೆಳೆದು ಅಲ್ಲೇ ಬಚ್ಚಿಡುವುದೇ ‘ಹ್ಯಾಪಿ ಇಯಾರ್’ ಸೂತ್ರವಾಗಿತ್ತು. ಈ ಪನ್ನಾಗಭರಣ ಅವರ ಈ ವ್ಯೂಹಕ್ಕೆ ಬೆಂಗಾವಲಾಗಿ ನಿಂತವರು ಹಿರಿಯ ನಟ ಬಿಸಿ ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್.

ಬದುಕಲ್ಲಿ ಕಂಡು ಬರುವ ವಿವಿಧ ನೋವಿನ ಅದ್ಯಾಯಗಳನ್ನು ಮರೆತು ಅಂತಿಮವಾಗಿ ಖುಷಿಯ ಹಂತ ತಲುಪುವ ಕ್ಷಣವೇ ವಿಜಯೋತ್ಸವ ಸಂಭ್ರಮ. ಬದುಕಿನಲ್ಲಿ ಏನೇನೂ ಆಗಬೇಕೋ ಅದೆಲ್ಲವೂ ನಡೆದು ಕೊನೆಗೆ ಎದುರಾಗುವ ಒಳ್ಳೆಯ ಸಂದರ್ಭಮವೇ ನವಯುಗ. ಈ ಹೊಸತನದ ಕ್ಷಣವನ್ನು ಸಂತಸದ ರೂಪದಲ್ಲಿ ಕೊಡುವವ ಪ್ರಯತ್ನಕ್ಕಾಗಿಯೇ ಈ ಚಿತ್ರಕ್ಕೆ ‘ಹ್ಯಾಪಿ ನ್ಯೂ ಇಯರ್’ ಎಂದು ಹೆಸರಿಡಲಾಗಿದೆಯಂತೆ. ಇದು ನಿಜಕ್ಕೂ ಅರ್ಥಪೂರ್ಣ ಎಂದವರು ಅನೇಕರು


ನಿಮ್ಮ ಅಭಿಪ್ರಾಯಗಳುRelated Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್