ವಿಮರ್ಶೆ


ಹೆಣ್ಣಿನ ನಿಗೂಢ ಕೊಲೆಯ ಸುತ್ತ.. 'ರೂಪಾ' ಸುತ್ತಾಟದ ಥ್ರಿಲ್..
0 rating
11 months ago filmreview


ಈ ವಾರ ಕನ್ನಡ ಚಿತ್ರರಂಗದಲ್ಲಿ ಹೊಸತನವಿಲ್ಲದ ವಾರ ಎಂಬ ವಿಶ್ಲೇಷಣೆ ಸಾಗಿದೆ. ಯಾಕೆಂದರೆ ಈವರೆಗೆ ಸಾಲು ಸಾಲು ಸರಣಿ ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಆದರೆ ಈ ಬಾರಿ ಅಷ್ಟೇನೂ ಹೊಸ ಚಿತ್ರಗಳು ಬಿಡುಗಡೆಯಾಗಿಲ್ಲ. ಆದರೂ ಥ್ರಿಲ್ಲರ್ ಕತೆಗೆ ಹೊಸ 'ರೂಪ' ನೀಡುತ್ತಾ, ಕನ್ನಡ ಚಿತ್ರರಂಗದಲ್ಲಿ 'ರೂಪ' ಲಾವಣ್ಯವಾಗಿ ಬಂದಿದೆ 'ರೂಪ' ಚಿತ್ರ.

ನಿಗೂಢ ಕೊಲೆಯ ಸುತ್ತ..?

ಕರ್ನಾಟಕದ್ಯಾಂತ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ರೂಪ' ಕಮಾಲ್ ಪ್ರದರ್ಶಿಸುತ್ತಿದ್ದಾಳೆ. ರೋಜರ್ ಪ್ರೋಡಕ್ಷಣ್ ಲಾಂಚನದಲ್ಲಿ ನೆಲ್ಸನ್ ರೋಜರ್ಸ್ ನಿರ್ಮಾಣ ಮಾಡಿರುವ ಈ ಚಿತ್ರ ಒಂದು ನಿಗೂಢ ಕೊಲೆಯ ಸುತ್ತ ಸಾಗಿದೆ. ಯುವತಿಯೊಬ್ಬಳನ್ನು ಹಂತಕರು ನಿಗೂಡವಾಗಿ ಕೊಲೆ ಮಾಡುತ್ತಾರೆ. ಈ ಕೊಲೆ ಪ್ರಕರಣ ನಾನಾ ದಿಕ್ಕಿನತ್ತ ಸಾಗಿ ಪ್ರಕರಣವನ್ನೇ ಮುಚ್ಚಿಹಾಕುವ ಪ್ರಯತ್ನ ನಡೆದಾಗ ಚಾಲಾಕಿ ತನಿಖೆಯ ಮಜಲನ್ನು ಬೆನ್ನತ್ತಿದ್ದ ತಂಡ ರಹಸ್ಯವನ್ನೇ ಬೇದಿಸುವುದೇ 'ರೂಪಾ' ಸುತ್ತ ಸುತ್ತುವ ಕಥಾನಕ.

ಇದು ಒಂಥಾರ ವಿಭಿನ್ನ ಕಥಾಹಂದರವನ್ನು ಹೊಂದಿರುವ ಚಿತ್ರ. ಸಸ್ಪೇನ್ಸ್ ಥ್ರಿಲ್ಲರ್ ಕಥಾನಕದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ರೇಖಾ ವಿ ಕುಮಾರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಮಮತಾ ರಾವತ್  ಅವರ ತಾಯಿಯ ಪಾತ್ರವನ್ನು ಮನೋಜ್ಞಾವಾಗಿ ಅಭಿನಯಿಸಿರುವ ಅವರು ಹೊಟೇಲ್ ಉದ್ಯಮಿಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ತಾಯಿ ಮಗಳ ಭಾಂದವ್ಯದ ಪ್ರತಿಬಿಂಬವಾಗಿರುವ ಈ ಚಿತ್ರದಲ್ಲಿ ರೋಮ್ಯಾನ್ಸ್, ಸಂಗೀತ, ಎಲ್ಲಾವೂ ಪ್ರೇಕ್ಷಕರಿಗೆ ಮುದ ನೀಡುವಂತಿದೆ. ಕೊಲೆಯನ್ನು ಯಾರೂ ಮಾಡಿದರೂ ಎಂಬ ತನಿಖೆಯ ಕಠಿಣ ಹಾದಿಯಲ್ಲಿ ಸಿಗುವ ಮಿಲಿಯನ್ ಡಾಲರ್ ಪ್ರಶ್ನೆಗಳು ಕೂಡ ಈ ಕಥೆಯನ್ನು ಹೆಚ್ಚಿಸುತ್ತಲೇ ಸಾಗಿದೆ. ಆರಂಭದಿಂದ ಕೊನೆಯವರೆಗೆ ಒಂದು ರೀತಿಯ ಥ್ರಿಲ್ ಎನ್ನುತ್ತಾ ಪ್ರೇಕ್ಷಕರು ಮುಳುಗಿ ಹೋಗುತ್ತಾರೆ. 


ಟ್ಯಾಗ್ಗಳು : #ರೂಪಾ #-ಕನ್ನಡ-
ನಿಮ್ಮ ಅಭಿಪ್ರಾಯಗಳುRelated Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್