ವಿಮರ್ಶೆ


ಚಿತ್ರ ವಿಮರ್ಶೆ: ಅಜರಾಮರದ ಸಮರ
0 rating
11 months ago filmreview


ಆತ ಬಿಡುಬೀಸಾಗಿ ಬೆಳೆದ ಹುಡುಗ. ಗೊತ್ತು ಗುರಿ ಇಲ್ಲದೆ ಬೆಳೆದವನು. ಆತ ಹೇಗೆ ಮಹತ್ತರವಾದದ್ದನ್ನು ಸಾಧಿಸಿ ತೋರಿಸುತ್ತಾನೆ ಎಂಬುದೇ ಅಜರಾಮರದ ಹೂರಣ. ನಾಯಜ ತಾರಕ್‌ಗೆ ಇದು ಹೊಸ ಚಿತ್ರ. ಆದರೆ ನೋಡುಗರಿಗೆ ಇದು ಸ್ವಲ್ಪ ಮಟ್ಟಿನ ಬೇಸರ ತರಿಸುವುದಂತೂ ನಿಜ. 

ಮೊದಲರ್ಧವನ್ನು ಒಂದು ಹಂತಕ್ಕೆ ಸಹಿಸಿಕೊಂಡರೆ ದ್ವಿತೀಯಾರ್ಧದಲ್ಲಿ ಕಥೆ ಹಿಡಿತಕ್ಕೆ ಬರುತ್ತದೆ. ಅನಾಥಾಶ್ರಮದಿಂದ ಹೊರಬಂದ ಹುಡುಗ, ಸಾಫ್ಟ್‌ವೇರ್ ಇಂಜಿನಿಯರ್ ಎಂದು ಸುಳ್ಳು ಹೇಳಿ ನಾಯಕಿ ಮನೆ ಸೇರಿಕೊಳ್ಳುತ್ತಾನೆ. ಕೀಟಲೆ ಹುಡುಗನನ್ನು ಮನೆ ಸೇರಿಸಿಕೊಂಡ ನಾಯಕಿ ಸಹಿಸಿಕೊಳ್ಳಲಾಗದ ಹಂತಕ್ಕೆ ಬರುತ್ತಾಳೆ. ನಾಯಕನ ಕೀಟಲೆ, ತರಲೆ ಮಾತು ಪ್ರೇಕ್ಷಕರಲ್ಲೂ ಮಂದಹಾಸ ಮೂಡಿಸುತ್ತದೆ. ಇನ್ನೇನು ಮನೆಯಿಂದ ಹೊರಹಾಕಬೇಕು ಎನ್ನುವಷ್ಟರ ಮಟ್ಟಿಗೆ ಒಂದು ಮಹತ್ವದ ಘಟನೆ ನಡೆಯುತ್ತದೆ. ಈ ಘಟನೆ ನಾಯಕನನ್ನು ನಾಯಕಿ ಕಣ್ಣಲ್ಲಿ ಹೀರೋನನ್ನಾಗಿಸುತ್ತದೆ. ಇಷ್ಟು ಕಥೆ ಹೇಳಲು ನಿರ್ದೇಶಕರು ಹರಸಾಹಸ ಮಾಡಿದಂತೆ ಪ್ರೇಕ್ಷಕರಿಗೆ ಭಾಸವಾಗುತ್ತದೆ.

ನಾಯಕನಾಗಿ ನಟಿಸಿದ ತಾರಕ್‌ ನಟನೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ತರಲೆ ಹುಡುಗನಾಗಿ, ಭಾವನಾತ್ಮಕ ದೃಶ್ಯಗಳಲ್ಲಿ ಆಪ್ತವಾಗುತ್ತಾರೆ. ನೃತ್ಯ, ಸಾಹಸದಲ್ಲೂ ಸೂಪರ್. ನಾಯಕಿ ರೋಷಿನಿ ಕ್ಲೈಮ್ಯಾಕ್ಸ್‌ನಲ್ಲಿನ ನಟನೆಯಿಂದಾಗಿ ಮನಸಿನಲ್ಲಿ ಉಳಿಯುತ್ತಾರೆ. ಚಿತ್ರದ ಒನ್‌ಲೈನ್‌ ಸ್ಟೋರಿ ಚೆನ್ನಾಗಿದೆಯೆನಿಸಿದರೂ, ಕಥನ ಶೈಲಿ ಬೇಸರವೆನಿಸುತ್ತದೆ.

ಚಿತ್ರದಲ್ಲಿ ಸುಚೇಂದ್ರ ಪ್ರಸಾದ್‌, ರಮೇಶ್‌ ಭಟ್‌, ಮಧುಸೂಧನ್‌ ಪ್ಲಸ್‌ ಪಾಯಿಂಟ್‌. ನಾಲ್ಕು ಹಾಡುಗಳ ಪೈಕಿ ಒಂದು ಹಾಡು ಕಿವಿಗೆ ತಂಪೆನಿಸುತ್ತದೆ. 


ನಿಮ್ಮ ಅಭಿಪ್ರಾಯಗಳುRelated Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್