ವಿಮರ್ಶೆ


ಭಕ್ತಿ-ಶಕ್ತಿ-ಯುಕ್ತಿ ಜೊತೆಯಾದಾಗ ಉದ್ಭವಿಸುವುದೇ 'ಉರ್ವಿ': ನಾಯಕನಿಲ್ಲದೆ ನಾರಿಯರ ಸುತ್ತು
0 rating
1 year ago filmreview


ಗಾಂಧೀನಗರ ತುಂಬೆಲ್ಲಾ ಇದೀಗ “ಉರ್ವಿ”ಯದ್ದೇ ಮಾತು. ಪುರುಷ ಪ್ರಧಾನ ಸಮಾಜದಲ್ಲಿ, ಮಹಿಳೆಯರೂ ಸಾಮ್ರಾಜ್ಯ ಕಟ್ಟಬಹುದು ಎಂಬುದಕ್ಕೆ ಹಲವಾರು  ನಿದರ್ಶನಗಳು ಕಣ್ಣ ಮುಂದೆ ಬಂದಿವೆ. ಇದೀಗ ನಾಯಕ ಪಾತ್ರಕ್ಕೆ ಹೆಚ್ಚು ಒತ್ತುನೀಡುವ ಬದಲು ನಾಯಕಿಯರ ಸಮೂಹವನ್ನೇ ಮುಂಚೂಣಿಯಲ್ಲಿರಿಸಿ "ಉರ್ವಿ"ಯನ್ನು ತೆರೆಗೆ ಬರಿಸಲಾಗಿದೆ.

ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮಾ ಪುತ್ರ ಪ್ರದೀಪ್ ವರ್ಮಾ ಅವರ ನಿರ್ದೇಶನದಲ್ಲಿ ಈ ಚಿತ್ರ ತೆರೆಕಂಡಿದೆ.  ಇದು ಪ್ರದೀಪ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, ಸೆಟ್ಟೇರಿದ ದಿನದಿಂದಲೇ ಭರ್ಜರಿ ಪ್ರಚಾರವನ್ನು ಗಿಟ್ಟಿಸಿತ್ತು. ಟೀಸರ್ ಬಿಡುಗಡೆಯಾದ ನಂತರವಂತೂ ‘ಉರ್ವಿ ಹವಾ’ ಎಲ್ಲೆಡೆ ವ್ಯಾಪಿಸಿ, ಚಿತ್ರದ ಬಗ್ಗೆ ಕುತೂಹಲವನ್ನು ಈ ಟೀಸರ್ ನೂರು ಪಟ್ಟು ಹೆಚ್ಚಿಸಿತ್ತು.  

‘ಇದು ಯಾವ ಕಾರಣಕ್ಕೆ ಕೌತುಕ ಮೂಡಿಸಿದೆ’ಎಂಬ ಪ್ರಶ್ನೆಯೂ ಎಲ್ಲರಲ್ಲಿ ಮೂಡಿತ್ತು. ಅದಕ್ಕೆ ಉತ್ತರ ಮೂವರು ಹುಡುಗಿಯರು. ‘ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ’ ಎಂಬ ನಾಣ್ಣುಡಿಗೆ ಈ ಚಿತ್ರ ಉದಾಹರಣೆಯಾಗಿದೆ .

ಏನಿದು ಉರ್ವಿ..?

“ಉರ್ವಿ” ಅಂದರೆ ಏನು, ಯಾಕಾಗಿ ಈ ಟೈಟಲ್ ಆಯ್ಕೆ ಮಾಡಲಾಗಿದೆ ಎಂಬ ಪ್ರಶ್ನೆಗಳು ಒಂದರ ಹಿಂದೊಂದರಂತೆ  ಈಗಲೂ ಕೇಳಿಬರುತ್ತಲೇ ಇದೆ. ಭಕ್ತಿ-ಶಕ್ತಿ-ಯುಕ್ತಿ ಜೊತೆಯಾದಾಗ ಉದ್ಭವಿಸುವುದೇ “ಉರ್ವಿ". ಅಂದರೆ ತ್ರಿಮೂರ್ತಿಗಳ ಶಕ್ತಿ ಎಂದೂ ಬಣ್ಣಿಸಬಹುದು.

ಈ “ಉರ್ವಿ”  ಚಿತ್ರವೂ ಮೂವರ ಶಕ್ತಿ ಸಂಗಮವಾಗಿ ಮಹಿಳೆಯರ ಪರವಾಗಿ ಸಮಾಜವನ್ನು ಬಡಿದೆಬ್ಬಿಸುತ್ತದೆ. ಸಮಾಜದ ವಿವಿಧ ಸ್ತರದ ಸ್ತ್ರೀಯರ ಬದುಕನ್ನು, ಅವರ ಸಮಸ್ಯೆಗಳನ್ನು ನೈಜವಾಗಿ ಈ ಚಿತ್ರ ತೆರೆದಿಟ್ಟಿದೆ. ತಮ್ಮ ತಮ್ಮ ಕಷ್ಟದ ಸಂದರ್ಭಗಳಲ್ಲಿ ಬೇರ್ಪಟ್ಟಿರುವ ಮೂರು ಜೀವಗಳು ಮತ್ತೆ ಜೊತೆ ಸೇರಿ, ಒಂದು ದೊಡ್ಡ ಪಿಡುಗಿನ ವಿರುದ್ಧ ಹೋರಾಡುವ ಇಡೀ ಕಥಾನಕವನ್ನು ಈ ಚಿತ್ರ ಚಿಕ್ಕದಾಗಿ ಚೊಕ್ಕದಾಗಿ ವಿವರಿಸಿದೆ.

ಬಹುಸಮಯದ ನಂತರ ಕನ್ನಡದಲ್ಲಿ ನಾಯಕಿ ಪ್ರಧಾನ ಚಿತ್ರವೊಂದು ತೆರೆಕಂಡಿರುವುದು. 

 ‘ಯು ಟರ್ನ್’ ಖ್ಯಾತಿಯ ಸುಂದರಿ ಶ್ರದ್ಧಾ ಶ್ರೀನಾಥ್ , ಶ್ರುತಿ ಹರಿಹರನ್ ಹಾಗೂ ಶ್ವೇತ ಪಂಡಿತ್ ಈ ಅಪರೂಪದ ಚಿತ್ರವೆನಿಸಿರುವ “ಉರ್ವಿ” ಯಲ್ಲಿ ನಟಿಸಿದ್ದು , ನಾಯಕನಿಲ್ಲದೆಯೂ ಚಿತ್ರ ಹಿಟ್ಟಾಗಬಹುದು ಎಂಬುದನ್ನು ಸಾಬೀತು ಮಾಡಲಾಗಿದೆ. ಭವಾನಿ ಪ್ರಕಾಶ್, ಜಾಹ್ನವಿ ಸೇರಿದಂತೆ ಇನ್ನೂ ಹಲವರೂ ಬಣ್ಣಹಚ್ಚಿದ್ದು, ಅಚ್ಚುತಕುಮಾರ್ ಅವರು ವಿಲನ್ ರೋಲ್ ನಲ್ಲೂ ಮನೋಜ್ಞವಾಗಿ ಅಭಿನಯಿಸಿ ತಮ್ಮ ಪಾತ್ರಕ್ಕೆ ನೈಜತೆಯ ಜೀವ ತುಂಬಿದ್ದಾರೆ. ನಿಮ್ಮ ಅಭಿಪ್ರಾಯಗಳುRelated Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್