ಮುನ್ನೋಟ : ಸಿಪಾಯಿ
0
11 months ago blogpost


ಚಿತ್ರದ ನಾಯಕ ಪದವಿ ಮುಗಿಸಿ ಕೆಲಸ ಹುಡುಕುತ್ತಿರುತ್ತಾನೆ. ನಾಯಕನ ತಂದೆ ಟಿ.ವಿ. ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ಕೆಲಸಮಾಡುತ್ತಾ ಟಿ.ವಿ. ವಾಹಿನಿಯ ಮುಖ್ಯಸ್ಥನೊಡನೆ ಸೇರಿ ಒಂದು ದೊಡ್ಡ ಮಾಫಿಯ ತಂಡದ ಅಕ್ರಮ ಕೆಲಸಗಳನ್ನು ಬಯಲು ಮಾಡಲು ಕಾಯುತ್ತಿರುತ್ತಾನೆ. ಆದರೆ ಮಾಫಿಯ ತಂಡಕ್ಕೆ ಕೆಲ ಭ್ರಷ್ಟ ಪೋಲೀಸ್ ಅಧಿಕಾರಿಗಳು, ರಾಜಕಾನಣಿಗಳು, ಉನ್ನತ ಹುದ್ದೆಯಲ್ಲಿರುವ ಕೆಲ ಅಧಿಕಾರಿಗಳು ಅಕ್ರಮ ಕೆಲಸ ಮಾಡಲು ಸಹಾಯ ಮಾಡುತ್ತಿರುತ್ತಾರೆ. ಇದರಿಂದ ಅವರ ಚಟುವಟಿಕೆಗಳು ಹೊರಗಿನವರಿಗೆ ಗೊತ್ತಾಗುತ್ತಿರುವುದಿಲ್ಲ.

ಟಿ.ವಿ. ವಾಹಿನಿಯ ಮುಖ್ಯಸ್ಥ ಕೆಲಸ ಹುಡುಕುತ್ತಿದ್ದ ನಾಯಕನನ್ನು ಟಿ.ವಿ. ವಾಹಿನಿಗೆ ರಹಸ್ಯ ವರದಿಗಾರನಾಗಿ ನೇಮಿಸಿ ಮಾಫಿಯಾ ತಂಡಕ್ಕೆ ಸೇರಿಕೊಳ್ಳುವ ಹಾಗೆ ಮಾಡುತ್ತಾನೆ. ನಾಯಕ ಮಾಫಿಯ ತಂಡದ ಜೊತೆ ಕೆಲಸ ಮಾಡುತ್ತಾ ಅವರ ಒಂದೊಂದು ಕೆಲಸಗಳನ್ನು ಸಾಕ್ಷ್ಯಾಧಾರಗಳ ಮೂಲಕ ಟಿ.ವಿ. ವಾಹಿನಿಗೆ ತಿಳಿಸುತ್ತಿರುತ್ತಾನೆ.

ಈ ಹಂತದಲ್ಲಿ ಮಾಫಿಯ ತಂಡದವರಿಗೆ ನಾಯಕ ಮತ್ತು ಅವನ ತಂದೆಯ ಬಗ್ಗೆ ಗೊತ್ತಾಗಿ ಅವರನ್ನು ಕೊಲೆ ಮಾಡಲು ಸಂಚು ಹೂಡಿ ಅಪಘಾತ ಮಾಡಿಸುತ್ತಾರೆ. ಅಪಘಾತದಲ್ಲಿ ತಂದೆ ಸತ್ತು ಮಗ ಬದುಕುಳಿಯುತ್ತಾನೆ. ಆದರೆ ತಲೆಗೆ ತೀವ್ರವಾದ ಪೆಟ್ಟು ಬಿದ್ದು ನಾಯಕ ತನ್ನ ಜ್ಞಾಪಕ ಶಕ್ತಿಯನ್ನು ಕಳೆದುಕೊಂಡು ಹಿಂದಿನದೆಲ್ಲಾ ಮರೆತು ಹೋಗುತ್ತಾನೆ. ನಂತರ ನಾಯಕ ಹೇಗೆ ಮಾಫಿಯ ತಂಡದ ವಿರುದ್ದ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಥೆಯ ತಿರುಳು.

ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಆರೆಂಜ್ ಪಿಕ್ಸೆಲ್ಸ್ ನಿರ್ಮಿಸುತ್ತಿದ್ದು ಸಿದ್ದಾರ್ಥ್ ಗೆ ನಾಯಕಿಯಾಗಿ ಶೃತಿಹರಿಹರನ್ ಕಾಣಿಸಿಗೊಂಡಿದ್ದಾರೆ. ಹಾಗೆ ಮುಖ್ಯ ಪಾತ್ರದಲ್ಲಿ ಸಂಚಾರಿ ವಿಜಯ್, ಅಚ್ಯುತ್ ಕುಮಾರ್, ಕೃಷ್ಣ ಎಚ್, ಭರತ್ ಸಿಂಗ್. ಗೌರೀಶ್ ಅಕ್ಕಿ ನಟಿಸಿದ್ದಾರೆ. ಅಜ್ನೀಶ್ ಲೋಕ್ನಾಥ್ ಸಂಗೀತ, ಪರಮೇಶ್ ಛಾಯಾಗ್ರಹಣ, ಅಕ್ಷಯ್ ಪಿ ರಾವ್ರ ಸಂಕಲನ ಚಿತ್ರಕ್ಕಿದೆ. ಧನಕುಮಾರ್ ನೃತ್ಯನಿರ್ದೇಶನ ಮಾಡಿದ್ದು ವಿನೋದ್ ಹಾಗು ವಿಕ್ರಮ್ ಸಾಹಸ ನಿರ್ದೆಶನ ಮಾಡಿದ್ದಾರೆ. ಇದೇ ಸೆ.16ಕ್ಕೆ ಸಿಪಾಯಿ ತೆರೆಕಾಣುತ್ತಿದ್ದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಹಾಕಿದೆ.


Related Articles

ನಿಮ್ಮ ಅಭಿಪ್ರಾಯಗಳು


Balkani News Polls

ನಿಮ್ಮ ಇಷ್ಟ ಅದ ಚಿತ್ರಯಾವುದು .?
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್

A PHP Error was encountered

Severity: Notice

Message: Undefined variable: newpost

Filename: views/polls_page.php

Line Number: 286