ಹೊಸ ಬಿಡುಗಡೆ


ಕಿಚ್ಚನ ಅಭಿಮಾನಿಗಳಿಗೆ ಹೆಬ್ಬುಲಿ ಟೀಸರ್
0
1 year ago blogpost


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರ ಅಂದ್ರೆ ಆ ಚಿತ್ರದಲ್ಲಿರೋ ಗತ್ತು ಗಮ್ಮತ್ತೆ ಬೇರೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುದೀಪ್ ಇದೇ ಸಂಭ್ರಮದಲ್ಲಿ ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಚಿತ್ರವಾದ ‘ಹೆಬ್ಬುಲಿ’ ಟೀಸರ್ ನ್ನು ರಿಲೀಸ್ ಮಾಡಲಾಗಿದೆ.ಹೌದು ಸುದೀಪ್ ಈಗ 43ನೇ ವಸಂತಕ್ಕೆ ಕಾಲಿಟ್ಟಿದ್ದು ಹಾಗಾಗಿ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಹೆಬ್ಬುಲಿ ಟೀಸರ್ ನ್ನು ಉಡುಗರೆಯಾಗಿ ನೀಡಿದ್ದಾರೆ. ಟೀಸರ್ ಅಂತೂ ಸಖತ್ ರಗಡ್ ಆಗಿದ್ದು ಸುದೀಪ್ ವಿಭಿನ್ನ ಲುಕ್ ನಲ್ಲಿ ಭರ್ಜರಿ ಆಕ್ಷನ್ ನಲ್ಲಿ ಮಿಂಚಿದ್ದಾರೆ.

ಈ ಚಿತ್ರವನ್ನು ಕೃಷ್ಣ ನಿರ್ದೇಶಿಸುತ್ತಿದ್ದು ಸುದೀಪ್ ಗೆ ನಾಯಕಿಯಾಗಿ ಅಮಲಾ ಪೌಲ್ ಕಾಣಿಸಿದ್ದಾರೆ. ಹಾಗೆ ಮುಖ್ಯ ಪಾತ್ರದಲ್ಲಿ ರವಿಚಂದ್ರನ್ ಇದ್ದರೆ ರವಿಶಂಕರ್, ಚಿಕ್ಕಣ್ಣ ಜೊತೆಗೆ ನಟಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು ಇದೇ ಡಿಸೆಂಬರ್ ಗೆ ಥಿಯೇಟರ್ ನಲ್ಲಿ ಕಿಚ್ಚನ ‘ಹೆಬ್ಬುಲಿ’ ಗರ್ಜನೆ ಮಾಡಲಿದೆ.

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್