ಹೊಸ ಬಿಡುಗಡೆ


’ತರ್ಲೆ ವಿಲೇಜ್’ ಟ್ರೇಲರ್
0
1 year ago blogpost


"ತಿಥಿ" ಚಿತ್ರ ಎಷ್ಟು ಪ್ರಶಸ್ತಿಗಳನ್ನು ಬಾಚಿಕೊಳ್ತು ಅಂತ ಲೆಕ್ಕ ಸಿಗೋದು ಕಷ್ಟ. ಕಲಾವಿದರಲ್ಲದವರ ಕೈಲಿ ನಟನೆ ತೆಗೆಸಿ ಸಿನಿಮಾ ಮಾಡಿದ್ದು ನಿಜಕ್ಕೂ ಸಾಹಸ ಅಂತ ಹೇಳಬಹುದು. ಇದೀಗ ಆ ಚಿತ್ರದ ಗಡ್ಡಪ್ಪ, ಸೆಂಚುರಿ ಗೌಡ, ತಮ್ಮಣ್ಣ, ಅಭಿ ಪಾತ್ರಗಳನ್ನು ಹಾಕ್ಕೊಂಡು ಮತ್ತೊಂದು ಚಿತ್ರ ತೆರೆಗೆ ಬರ್ತಿದೆ.

 

ಈ ಚಿತ್ರದ ಹೆಸರು "ತರ್ಲೆ ವಿಲೇಜ್". ಹೆಸರು ಕೇಳಿದರೆ ನಿಮಗೆ ಇದೊಂದು ಪಕ್ಕಾ ಕಾಮಿಡಿ ಮಲಾಸೆ ಬರಿತ ಚಿತ್ರ ಅನ್ನಿಸುತ್ತದೆ. ವಿಶೇಷ ಅಂದ್ರೆ ಹಳ್ಳಿ ಭಾಷೆಯಲ್ಲಿ ಯಾವುದೇ ಡಬಲ್ ಮೀನಿಂಗ್ ಇರಲ್ಲ. ಅದು ಏನಿದ್ರೂ ನೇರಾನೇರ.ಜೀವಿತಾ ಕ್ರಿಯೇಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ಶಿವ ಎಸ್ ಬಿ ನಿರ್ಮಿಸುತ್ತಿದ್ದಾರೆ. ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಕೆ ಎಂ ರಘು. ವೀರ್ ಸಮರ್ಥ್ ಅವರ ಸಂಗೀತ, ಕೆ ಎಂ ಪ್ರಕಾಶ್ ಅವರ ಸಂಕಲನ ಇದ್ದು, ಕಥೆ ಸಿದ್ದೇಗೌಡ ಬಿ ಎಸ್ ಅವರದು.

 

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್