ಹೊಸ ಲುಕ್ ನಲ್ಲಿ ಪಾನಾವಿಷನ್ ಕ್ಯಾಮರ!
0
9 months ago blogpost


ಮಾರುಕಟ್ಟೆಯಲ್ಲಿ ಈಗಾಗಲೇ ಹವಾ ಸೃಷ್ಟಿಸಿರುವ "ಪಾನಾವಿಷನ್" ಇದೀಗ ಹೊಸ ವರ್ಷನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಹೊಸ ತಂತ್ರಜ್ಞಾನ ಹಾಗೂ ಲೆನ್ಸ್ ಕ್ಲಾರಿಟಿಯಿಂದಾಗಿ ಬೇಡಿಕೆ ಹೆಚ್ಚಿಸಿಕೊಂಡಿದೆ.ಪ್ಯಾನ್ ವಿಷನ್,ಮೋಷನ್ ಪಿಕ್ಟರ್ ಇಂಡಸ್ಟ್ರೀಯಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಕ್ಯಾಮಾರ. ಇದೀಗ ಪ್ಯಾನ್ ವಿಷನ್ ನೂತನವಾಗಿ ಅಭಿವೃದ್ಧಿಪಡಿಸಿರುವ  ಕ್ಯಾಮಾರವನ್ನು ಮಾರುಕಟ್ಟೆಗೆ ಪರಿಚಯಿಸಿದ್ದು,  ಅದರಲ್ಲಿ ಮಿಲೇನಿಯ್ ಡಿಎಕ್ಸ್ ಎಲ್ 8ಕೆ ಕ್ಯಾಮಾರಾ ಮತ್ತು ಟಿ ಸಿರೀಸ್ ಅನಮೋರ್ಪಿಕ್ ಲೆನ್ಸ್ ಗೆ ಹೆಚ್ಚು ಅಡ್ವಾನ್ಸ್ ಆಗಿದೆ.

ಮಿಲೇನಿಯ್ ಡಿಎಕ್ಸ್ ಎಲ್ 8ಕೆ ಕ್ಯಾಮಾರಾ ಮತ್ತು ಟಿ ಸಿರೀಸ್ ಅನಮೋರ್ಪಿಕ್ ಲೆನ್ಸ್ ,2016ರ ಕ್ಯಾಮಾರಾಇಮೇಜ್ ಇಂಟರ್ ನ್ಯಾಷನಲ್ ಪಿಲ್ಮ್ ಪೆಸ್ಟಿವಲ್ ನಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದು, ಎಕ್ಸಿಬೀಷನಲ್ ನಲ್ಲಿ ಕ್ಯಾಮಾರದ ವಿಶೇಷತೆ ಕುರಿತಂತೆ ವಿಚಾರ ಸಂಕೀರ್ಣವೂ ನಡೆಯಲಿದೆ. ನವೆಂಬರ್ 12ರಿಂದ 19ರವರೆಗೆ ಪೋಲಾಂಡ್ ನಲ್ಲಿ ನಡೆಯುವ ಫಿಲ್ಮ್ ಪೆಸ್ಟಿವಲ್ ನಲ್ಲಿ ಈ ವಿಶೇಷ ತಂತ್ರಜ್ಞಾನವನ್ನು ಒಳಗೊಂಡ ಕ್ಯಾಮಾರಾ ಹಾಗೂ ಲೆನ್ಸ್ ಗಳ ಪ್ರದರ್ಶನ ನಡೆಯಲಿದೆ. ಪಾನಾನಿಷನ್ ಮಿಲೇನಿಯ್ ಡಿಎಕ್ಸ್ ಎಲ್ 8ಕೆ ಕ್ಯಾಮಾರಾ  ಮಾತ್ರವಲ್ಲದೆ, ಟಿ–ಸಿರೀಸ್ ಲೆನ್ಸ್ ಗಳನ್ನು ಕೂಡ ಮಾರುಕಟ್ಟೆಗೆ ಪರಿಚಯಿಸಿದೆ.

ಈ ವರ್ಷದಮೊದಲಭಾಗದಲ್ಲಿಪಾನಾವಿಷನ್ಮಿಲೇನಿಯಮ್ಡಿಎಕ್ಸ್ಎಲ್, ಇತರ ಮೂರು ಕಂಪೆನಿಗಳೊಂದಿಗೆ ಕೈಜೋಡಿಸಿ, ವಿನೂತನ ಅಪ್ಟಿಕ್ಸ್ ಮತ್ತು ಪಾನಾವಿಷನಲ್ ನ ಮಾಡ್ಯೂಲಾರ್ ಅಕ್ಸೇಸರೀಸ್ ಅನ್ನು ಅಬಿವೃದ್ದಿಪಡಿಸಿತ್ತು. ಇದೀಗ ಅಭಿವೃದ್ದಿ ಪಡಿಸಿರುವ ಮಿಲೇನಿಯ್ ಡಿಎಕ್ಸ್ ಎಲ್ 8ಕೆ ಕ್ಯಾಮಾರಾ ಮತ್ತು ಟಿ ಸಿರೀಸ್ ಅನಮೋರ್ಪಿಕ್ ಲೆನ್ಸ್ 2017ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದೀಗ ವಸ್ತುಪ್ರದರ್ಶನದಲ್ಲಿ ಭಾಗಿಯಾಗಲಿದೆ.

 

Related Articles

ನಿಮ್ಮ ಅಭಿಪ್ರಾಯಗಳು


Balkani News Polls

ನಿಮ್ಮ ಇಷ್ಟ ಅದ ಚಿತ್ರಯಾವುದು .?
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್

A PHP Error was encountered

Severity: Notice

Message: Undefined variable: newpost

Filename: views/polls_page.php

Line Number: 286