ಹೊಸ ಬಿಡುಗಡೆ


ಬಿಟೌನಲ್ಲಿ ಹೊಸ ಅಲೆ ಎಬ್ಬಿಸ್ತಿದೆ ‘ಎ ದಿಲ್ ಹೈ ಮುಷ್ಕಿಲ್’
0
1 year ago blogpost


ಎ ದಿಲ್ ಹೈ ಮುಷ್ಕಿಲ್, ಸಿನಿಮಾ ಸೆಟ್ಟೇರಿದಾಗಿಂದಲೂ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿರುವಂತ ಸಿನಿಮಾ. ಬರ್ಫಿ ಬಾಯ್ ರಣ್ಬಿರ್ ಕಪೂರ್, ಅನುಷ್ಕಾ ಶರ್ಮಾ ಹಾಗು ಕರಣ್ ಜೋಹರ್ ಒಂದಾಗ್ತಿದ್ದಾರೆ ಅಂದಾಗಲೇ ಅಲ್ಲೊಂದು ಸೆನ್ಸೇಷನಲ್ ಕ್ರಿಯೇಟ್ ಆಗಿತ್ತು. ಈ ನಡುವೆ ಬ್ಯೂಟಿ ಕ್ವೀನ್ ಐಶ್ ನಾಯಕಿ ಅಂದ್ಮೇಲಂತು ಸಿನಿಮಾ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾದ್ವು.

ಈ ನಡುವೆ ಫಸ್ಟ್ ಲುಕ್ ರಿವೀಲ್ ಮಾಡಿ ಕ್ಯೂರಿಯಾಸಿಟಿ ಹೆಚ್ಚಿಸಿದ್ದ ಚಿತ್ರತಂಡ ಈಗ ಟೀಸರ್ ರಿಲೀಸ್ ಮಾಡಿದೆ. ಸಾಂಗ್ ಬಿಟ್ ಮೇಲೆ ವಿಜ್ಯೂವಲ್ ಫ್ಲೋ ಮಾಡಿದ್ದು, ಸಖತ್ ಕಲರ್ಫುಲ್ ಆಗಿದೆ. ಮೊದಲ ನೋಟಕ್ಕೆ ಟ್ರಯಾಂಗಲ್ ಲವ್ ಸ್ಟೋರಿ ಅನ್ನಿಸಿದ್ರು. ರಣ್ಬಿರ್, ಅನುಷ್ಕಾ ಅಂಡ್ ಐಶ್ ನಡುವಿನ ದೃಶ್ಯವಾಳಿಗಳು ಸಂಥಿಂಗ್ ಇಂಟ್ರೆಸ್ಟಿಂಗ್ ಅನ್ನಿಸದಿರದು. ಜೊತೆಗೆ ಅಷ್ಟೇ ಕ್ಯೂರಿಯಾಸಿಟಿ ಮೂಡಿಸುತ್ತೆ.

ರಾಕ್ಸ್ಟಾರ್, ಯೇ ಜವಾನಿ ಹೇ ದಿವಾನಿ ಸಿನಿಮಾಗಳ ರಣ್ಬಿರ್ ಮತ್ತೆ ಇಲ್ಲಿ ನೆನೆಪಾಗುತ್ತಾನೆ. ಐಶ್ನ ಮತ್ತೆ ಮತ್ತೆ ನೋಡ್ಬೇಕು ಅನ್ನಿಸಿದ್ರೆ, ಆಜ್ ಯೂಜ್ವಲ್ ಅನುಷ್ಕಾ ಎಲ್ಲರಿಗೂ ಇಷ್ಟವಾಗ್ತಾರೆ. ಇಲ್ಲಿ ಗಮನ ಸೆಳೆಯುತ್ತಿರೊ ಮೋಸ್ಟ್ ಇಂಟ್ರೆಸ್ಟರಿಂಗ್ ಕ್ಯಾರೆಕ್ಟರ್ ಫವಾದ್ ಖಾನ್ನ ಕಿಲ್ಲಿಂಗ್ ಲುಕ್.

ಬಿಟೌನ್ನ ಚಿತ್ರ ಕಲಾಕಾರ್ ಕರಣ್ ಜೋಹಾರ್, ಸ್ಟುಡೆಂಟ್ ಆಪ್ ದಿ ಇಯರ್ ನಂತ್ರ ನಿರ್ದೇಶಿಸ್ತಿರೊ ಸಿನಿಮಾ ಇದಾಗಿದ್ದು, ಫಸ್ಟ್ ಟೈಂ ನೋಡುಗರಿಗೆ ಇಂಪ್ರೇಸ್ಸಿವ್ ಅನ್ನಿಸಲ್ಲ. ಯಾಕೆಂದ್ರೆ ಸಾಂಗ್ ಲಿರಿಕ್ ಅಂಡ್ ಮ್ಯೂಸಿಕ್ ಸಖತ್ ಕ್ಯಾಚಿ ಆಗಿರೋದ್ರಿಂದ, ಎಲ್ಲರ ಗಮನ ಅತ್ತ ಸೆಳೆಯುತ್ತೆ.

ಆದ್ರೆ ಟೀಸರ್ ಮೂಲಕನೇ ಎಲ್ಲಾವನ್ನ ಹೇಳೋ ಆಗಿಲ್ಲಾ ಯಾಕೆಂದ್ರೆ ಕರಣ್ ಸಿನಿಮಾಗಳು ಸಂಥಿಂಗ್ ಸ್ಪೆಷಲ್ ಆಗಿರುತ್ತವೆ ಅನ್ನೋದನ್ನ ಮರೆಯೋ ಆಗಿಲ್ಲಾ. ಎ ದಿಲ್ ಹೈ ಮುಷ್ಕಿಲ್ ಇದೇ ದೀಪಾವಳಿಗೆ ರಿಲೀಸ್ ಆಗಲಿದ್ದು, ಎಲ್ಲದಕ್ಕೂ ಉತ್ತರ ಕೊಡಲಿದೆ.


ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್