ಹೊಸ ಬಿಡುಗಡೆ

ಹೊಸ ಅವತಾರದಲ್ಲಿ ಅಂದಿನ ಶಾರುಖ್ ‘ಡರ್’ ಸಿನಿಮಾ
0
1 year ago blogpost


1993ರಲ್ಲಿ ತೆರೆಕಂಡ ಬ್ಲಾಕ್ ಬ್ಲಾಸ್ಟರ್ ಸಿನಿಮಾ ಶಾರುಖ್ ಖಾನ್ ಅಭಿನಯದ ‘ಡರ್’. ಅದು ರೊಮ್ಯಾಂಟಿಕ್ ಸೈಕಾಲಜಿ ಚಿತ್ರವಾಗಿದ್ದು, ಈಗ ಅದೇ ಹೆಸರಿನಲ್ಲಿ ‘ಡರ್ 2.0’ ಎಂಬ ಚಿತ್ರ ಬರ್ತಿದೆ. ವೈ ಫಿಲಮ್ಸ್ ನಡಿಯಲ್ಲಿ ಈ ಚಿತ್ರ ರೆಡಿಯಾಗಿದ್ದು ವಿಕಾಸ್ ಚಂದ್ರ ನಿರ್ದೇಶನ ಮಾಡಿದ್ದಾರೆ.

ವಿಶೇಷ ಅಂದ್ರೆ ಈ ಡರ್ ಚಿತ್ರವನ್ನು 5 ಸಣ್ಣ ಸಣ್ಣ ಸರಣಿಯಲ್ಲಿ ತಯಾರು ಮಾಡಿ ರಿಲೀಸ್ ಮಾಡಲಿದ್ದಾರೆ. ಈಗ ಇದರ ಟ್ರೇಸರ್ ರಿಲೀಸ್ ಆಗಿದ್ದು “ಯು ಹ್ಯಾವ್ ಒನ್ ನ್ಯೂ ಫಾಲೊವರ್” ಎಂಬ ಟ್ಯಾಗ್ ಲೈನ್ನಿಂದ ಸಖತ್ ಕುತೂಹಲ ಹುಟ್ಟಿಸ್ತಿದೆ.

ಈ ಚಿತ್ರದಲ್ಲಿ ರಾಹುಲ್, ಕಿರಣ್ ಹಾಗು ಸುನಿಲ್ ಮೈನ್ ರೋಲ್ ನಲ್ಲಿದ್ದಾರೆ. ಸಂಪೂರ್ಣವಾಗಿ ಈಗಿನ ಸಮಾಜದಲ್ಲಿ ನಡೆಯುತ್ತಿರುವ ಅಪರಾಧಗಳು, ಸೈಬರ್ ಕ್ರೈಮ್ ಮುಂತಾದ ವಿಷಯಗಳನ್ನು ಹೊತ್ತ ಒಂದು ಪಕ್ಕಾ ಥ್ರಿಲ್ಲರ್ ಕಥೆ ಇದಾಗಿದೆ.

ಚಿತ್ರದ ಕಥೆಯನ್ನು ನಿಕಿಲ್ ತನೆಜ ಬರೆದಿದ್ದು ಆಶಿಶ್ ಪಾಟಿಲ್ ನಿರ್ಮಿಸಿದ್ದಾರೆ. ಸದ್ಯ ಟ್ರೇಲರ್ ಅಂತು ಸಖತ್ ಹೈಪ್ ಕ್ರಿಯೇಟ್ ಮಾಡಿದ್ದು ಈ ಆಧುನಿಕ ಜಗತ್ತಿಗೆ ಚಿತ್ರದ ಮೂಲಕ ಒಂದೊಳ್ಳೆ ಸಂದೇಶ ನಿಡೋದಂತು ಖಂಡಿತ.


ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್