ಹೊಸ ಬಿಡುಗಡೆ


‘ರಾಮಾ ರಾಮಾ ರೇ’… ಹೇ ಬಹುತ್ ಅಚ್ಚಾ ಫಿಲಂ ಹೈ ರೇ!
0
1 year ago blogpost


ಈಗ ಚಿತ್ರರಂಗದಲ್ಲಿ ಏನಿದ್ದರು ಹೊಸಬರದ್ದೆ ಕಾರುಬಾರು. ಚಿತ್ರ ರಿಲೀಸ್ ಆಗಿ ಹಿಟ್ ಆಗೋವಾಗ್ಲೆ ಆ ಚಿತ್ರದ ಬಗ್ಗೆ ನಮ್ಗೆ ಗೊತ್ತಾಗೋದು. ಈಗ ಸ್ಯಾಂಡಲ್ವುಡ್ಡಲ್ಲಿ ಅಂತದ್ದೆ ಹೊಸಬರ ಚಿತ್ರವೊಂದು ಸೈಲೆಂಟ್ ಆಗೆ ಚಿತ್ರೀಕರಣ ಮುಗಿಸಿ ಟ್ರೇಲರನ್ನು ಬಿಟ್ಟು ಸೌಂಡ್ ಮಾಡ್ತಿದೆ. ಅದು ಯಾವ ಚಿತ್ರ ಅಂತೀರಾ? ಅದೇ ಡಿ. ಸತ್ಯಪ್ರಕಾಶ್ ನಿರ್ದೇಶನದ ‘ರಾಮಾ ರಾಮಾ ರೇ’.

ಈ ಹಿಂದೆ ಸತ್ಯಪ್ರಕಾಶ್ ‘ಜಯನಗರ 4 ಬ್ಲಾಕ್’ ಎಂಬ ಕಿರುಚಿತ್ರ ನಿರ್ದೇಶಿಸಿದ್ದು ಇದಕ್ಕೆ ಯೂಟ್ಯೂಬ್ ನಲ್ಲಿ ಒಳ್ಳೆಯ ರೆಸ್ಪಾನ್ಸ್ ಕೇಳಿಬಂದಿತ್ತು. ಈಗ ಯಾರ ನಿರ್ಮಾಪಕರ ಸಹಾಯ ಕೇಳದೆ ತಮ್ಮದೇ ಖರ್ಚಿನಲ್ಲಿ ರಾಮಾ ರಾಮಾ ರೇ ಚಿತ್ರವನ್ನು ಸತ್ಯಪ್ರಕಾಶ್ ನಿರ್ದೇಶಿಸಿದ್ದಾರೆ. ಬರೀ ಹೊಸಬರೇ ಸೇರಿ ಈ ಚಿತ್ರವನ್ನು ಮಾಡಿದ್ದು ಸಿನಿಮಾದ ಶೇ.80 ರಷ್ಟು ಭಾಗ ರಸ್ತೆ ಮೇಲೆ ನಡೆಯುವ ಕಥೆಯಾಗಿದೆ. ಹುಟ್ಟು-ಸಾವಿನ ನಡುವೆ ನಡೆಯುವ ಅನೇಕ ಸೂಕ್ಷ್ಮ ವಿಷಯಗಳೇ ’ರಾಮಾ ರಾಮಾ ರೇ’ ಚಿತ್ರ ಆಗಿದ್ಯಂತೆ. ಬಿಜಾಪುರ ಬಳಿ ಈ ಚಿತ್ರದ ಶೂಟಿಂಗ್ ಮಾಡಿದ್ದು ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದಾರೆ.

ಚಿತ್ರದಲ್ಲಿ ಕೆ. ಜಯರಾಮ್, ನಟರಾಜ್, ಧರ್ಮಣ್ಣ, ಬಿಂಬಶ್ರೀ ನೀನಾಸಂ, ಹೀಗೆ ಇನ್ನೂ ಅನೇಕ ಪ್ರಮುಖ ಕಲಾವಿದರು ನಟಿಸಿದ್ದು ಎಲ್ಲರು ರಂಗಭೂಮಿ ಹಿನ್ನೆಲೆಯಿಂದ ಬಂದವರೇ ಆಗಿದ್ದಾರೆ. ಇನ್ನು ಈ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಹಿರಿಯ ಸಾಹಿತಿ ಬಿ. ಸಿದ್ದಲಿಂಗಯ್ಯ ಕಂಬಾಳು ಬರೆದಿದ್ದು ಲವಿತ್ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತವನ್ನು ಸಂಯೋಜಿಸಿದ್ದಾರೆ. ನಮ್ಮದೇ ಚಿತ್ರ ಮತ್ತು ಕನ್ನಡ ಕಲರ್ಸ್ ಸಂಸ್ಥೆಯಡಿಯಲ್ಲಿ ಚಿತ್ರ ತಯಾರಾಗ್ತಿದ್ದು ಸೆಪ್ಟೆಂಬರ್ 2ಕ್ಕೆ ಆಡಿಯೋವನ್ನು ರಿಲೀಸ್ ಮಾಡಲಿದೆ ಚಿತ್ರತಂಡ.


ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್