ಹೊಸ ಬಿಡುಗಡೆ

‘ಅವಧಿ’ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಶಿವಣ್ಣ
0
1 year ago blogpost


ಸ್ಯಾಂಡಲ್ವುಡ್‌ನಲ್ಲಿ ಈಗೀಗ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ಸರಣಿ ಜಾಸ್ತಿಯಾಗ್ತಿವೆ. ಹಾಗೇನೆ ಈಗ ಕನ್ನಡದಲ್ಲಿ ಫಿಕ್ಷನ್ ಥ್ರಿಲ್ಲರ್ ಚಿತ್ರವೊಂದು ತುಂಬಾನೆ ನಿರೀಕ್ಷೆ ಹುಟ್ಟಿಸ್ತಿದೆ. ಅದೇ ಸಾಯಿಕಿರಣ ಮಕಮಲ ನಿರ್ದೇಶನದ ‘ಅವಧಿ’. ಈ ಚಿತ್ರದ ಟ್ರೇಲರನ್ನು ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ.

ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿರೊ ಈ ಚಿತ್ರದಲ್ಲಿ ಇದೆ ಮೊದಲ ಬಾರಿಗೆ ರಂಜಿತ್ ನಾಯಕನಾಗಿ ನಟಿಸಿದರೆ ನಾಯಕಿಯಾಗಿ ಅರ್ಚನಾ ಕಾಣಿಸಿಗೊಂಡಿದ್ದಾರೆ. ಶಿವಣ್ಣ ನಿಂದಲೆ ಅವಧಿ ಚಿತ್ರದ ಟ್ರೇಲರ್ ರಿಲೀಸ್ ಮಾಡಬೇಕೆಂದು ಚಿತ್ರತಂಡ ಬಯಸಿತ್ತಂತೆ, ಅದರಂತೆ ಶಿವಣ್ಣ ಟ್ರೇಲರ್ ರಿಲೀಸ್ ಮಾಡೊಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಚಿತ್ರಕಲಾವಿದನೊಬ್ಬನ ಜೀವನದಲ್ಲಿ ನಡೆದ ನೈಜ ಘಟನೆಯನ್ನು ನಿರ್ದೇಶಕ ಸಾಯಿಕಿರಣ್ ಸಿನಿಮಾ ಮಾಡಿದ್ದು ಕನ್ನಡ ಹಾಗು ತೆಲುಗಿನಲ್ಲಿ ಚಿತ್ರ ಮೂಡಿಬರುತ್ತಿದೆ. ಚಿತ್ರಕ್ಕೆ ಸಾಬುವರ್ಗಿಸ್ ಸಂಗೀತ ನೀಡಿದ್ದು ರಮೇಶ್ ಭಟ್, ಜೈ ಜಗದೀಶ್ ಸೇರಿದಂತೆ ಅನೇಕ ಪ್ರಮುಖ ನಟರು ನಟಿಸಿದ್ದಾರೆ.


ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್