ಹೊಸ ಬಿಡುಗಡೆ


ಸಿಪಾಯಿ ಚಿತ್ರದ “ಮುದ್ದು ಪೋರಿ” ಸಾಂಗ್ ಸೂಪರ್ :
0
1 year ago blogpost


ಸ್ಯಾಂಡಲ್ ವುಡ್ ನಲ್ಲಿ ಈಗಂತೂ ಹೊಸಬರು ಸಿನಿಮಾ ಮಾಡ್ತಿದ್ದಾರೆ ಅಂದ್ರೆ ಅಲ್ಲಿ ನೂರೆಂಟು ನಿರೀಕ್ಷೆಗಳು ಗರಿಗೆದರಿರುತ್ತವೆ. ಅದೇ ನಿರೀಕ್ಷೆಯನ್ನ ಹುಟ್ಟುಹಾಕಿರುವಂತ ಸಿನಿಮಾ “ಸಿಪಾಯಿ”. ಈಗಾಗ್ಲೇ ಟ್ರೇಲರ್ ರಿಲೀಸ್ ಆಗಿದ್ದು ಸೂಪರ್ಬ್ ರೆಸ್ಪಾನ್ಸ್ ಸಿಕ್ಕಿದೆ. ಅದರ ಹಿಂದೆನೇ ಚಿತ್ರದ ರೊಮ್ಯಾಂಟಿಕ್ ಸಾಂಗ್ ಹೊರಬಿದ್ದಿದ್ದು ಕಿಕ್ ಏರಿಸ್ತಿದೆ.

“ಮುದ್ದು ಪೋರಿ” ಅನ್ನೋ ಈ ಹಾಡನ್ನ ಕೇಳ್ತಿದ್ರೆ, ಮೈಮರೆಯೊದಂತು ಗ್ಯಾರೆಂಟಿ. ಕೇಳಲು ಎಷ್ಟು ಇಂಪಾಗಿದೆಯೊ ನೋಡುವುದಕ್ಕೂ ಕೂಡ ಕಲರ್ ಫುಲ್ ಆಗಿದೆ. ಸಿದ್ದಾರ್ಥ ಮಹೇಶ್ ರ ಸ್ಟೈಲೀಶ್ ಸ್ಟೆಪ್ಸ್ ಗೆ ಹುಡುಗಿರು ಫಿದಾ ಆದ್ರೆ, ಶೃತಿ ಹರಿಹರನ್ ಬ್ಯೂಟಿಗೆ ನವಯುವಕ್ರು ಬೋಲ್ಡ್ ಆಗೋದು ಗ್ಯಾರೆಂಟಿ.

ಸದ್ಯ ಕನ್ನಡದಲ್ಲಿ ಬರವಸೆ ಮೂಡಿಸಿರೊ ಅಜನೀಶ್ ಲೋಕನಾಥ್ ಮ್ಯೂಸಿಕ್ ಫ್ರೆಶ್ ಅನ್ನಿಸುತ್ತೆ. ಇಲ್ಲಿನ ಸ್ಪೆಷಾಲಾಲಿಟಿ, ಈ ಹಾಡನ್ನ ಬೆಂಗಳೂರಿನ ಮಿನರ್ವ್ ಮಿಲ್ ನಲ್ಲಿ ಚಿತ್ರೀಕರಿದ್ದು, ಸಿಕ್ಕಾಪಟ್ಟೆ ರಿಚ್ ಫೀಲ್ ಕೊಡುತ್ತೆ. ಅಂದಹಾಗೆ ಇದು ಫಸ್ಟ್ ಟೈಂ ನಾಯಕ ನಾಯಕಿಯನ್ನ ನೋಡಿದಾಗ ಕನಸಿಗೆ ಜಾರೊ ಸಾಂಗ್ ಅಂತೆ.

ನವ ನಿರ್ದೇಶಕ ಮಹೇಶ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಸಿಪಾಯಿ ಥಿಯೇಟರ್ ಗಳಿಗೆ ದಾಳಿ ಮಾಡಲಿದ್ದಾನೆ. ಹಾಗಾದ್ರೆ ಅಲ್ಲಿ ವರೆಗೂ ಈ ಹಾಡನ್ನ ಕೇಳ್ತಾ ಕನಸಲಿ ನಿಮ್ಮ್ ಹುಡುಗಿನ ನೆನೆಯುತಾ ಎಂಜಾಯ್ ಮಾಡ್ತಿರಿ.ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್