ರಾಮ್ ಚರಣ್ ರ ‘ಧ್ರುವ’ ಚಿತ್ರದ ಫಸ್ಟ್ ಲುಕ್ ರಿಲೀಸ್ :
0
1 year ago blogpost


ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅಭಿನಯದ ‘ಧ್ರುವ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಅಲ್ಲು ಅರವಿಂದ್ ಮತ್ತು ಎನ್ವಿ ಪ್ರಸಾದ್ ನಿರ್ಮಿಸುತ್ತಿರುವ ಚಿತ್ರ ಇದು.ಹಲವಾರು ಹಿಟ್ ಚಿತ್ರಗಳಿಗೆ ಹೆಸರುವಾಸಿಯಾಗಿರೋ ಗೀತಾ ಆರ್ಟ್ಸ್ ಲಾಂಛನದಲ್ಲಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಸುರೇಂದರ್ ರೆಡ್ಡಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ತಮಿಳಿನ ‘ತನಿ ಒರುವನ್’ ರೀಮೇಕ್.

ರಾಕುಲ್ ಪ್ರೀತ್ ಸಿಂಗ್ ಚಿತ್ರದ ನಾಯಕಿ. ಬಹಳ ವರ್ಷಗಳ ಬಳಿಕ ಅರವಿಂದ ಸ್ವಾಮಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ. ಪವರ್ ಫುಲ್ ಐಪಿಎಸ್ ಆಫೀಸರ್ ಕುರಿತಾದ ಕಥೆ ಇದು. ಈ ಪಾತ್ರದಲ್ಲಿ ಲೀನವಾಗಲು ರಾಮ್ ಚರಣ್ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರಂತೆ.

ಅರವಿಂದ ಸ್ವಾಮಿ ಅವರ ಪಾತ್ರ ಚಿತ್ರದಲ್ಲಿ ಪ್ರಮುಖವಾಗಿ ನಿಲ್ಲಲಿದೆ. ನಾಜರ್, ಪೋಸಾನಿ ಕೃಷ್ಣ ಮುರಳಿ ಸಹ ಪಾತ್ರವರ್ಗದಲ್ಲಿದ್ದಾರೆ. ಸುರೇಂದರ್ ರೆಡ್ಡಿ ಸ್ಟೈಲಿಶ್ ಡೈರೆಕ್ಷನ್ ಚಿತ್ರದ ಹೈಲೈಟ್ ಗಳಲ್ಲಿ ಒಂದು ಅಂತಿದೆ ಟಾಲಿವುಡ್.


Related Articles

ನಿಮ್ಮ ಅಭಿಪ್ರಾಯಗಳು


Balkani News Polls

ನಿಮ್ಮ ಇಷ್ಟ ಅದ ಚಿತ್ರಯಾವುದು .?
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್

A PHP Error was encountered

Severity: Notice

Message: Undefined variable: newpost

Filename: views/polls_page.php

Line Number: 286