ಹೊಸ ಬಿಡುಗಡೆ


ದೊಡ್ಮನೆ ಹುಡ್ಗನ ಮೊದಲ ಸಾಂಗ್ ರಿಲೀಸ್ :
0
1 year ago blogpost


ಪವರ್ ಸ್ಟಾರ್ ಫ್ಯಾನ್ಸ್ ಸುಮಾರು ದಿನಗಳಿಂದ ಈ ಹಾಡನ್ನ ಕೇಳೊದಕ್ಕಾಗಿ ಕಾದು ಕುಳಿತಿದ್ರು. ಕೊನೆಗೂ ಆ ಟೈಮ್ ಬಂದೇ ಬಿಟ್ಟಿದೆ. ಹೌದು ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರದ “ಅಭಿಮಾನಿಗಳೇ ನಮ್ಮನೆ ದೇವ್ರು…” ಆಡಿಯೋ ಸಾಂಗ್ ರಿಲೀಸ್ ಆಗಿದೆ.

ಇಂದು ಸಿದ್ದ ಗಂಗಾ ಮಠದಲ್ಲಿ ಶ್ರೀ ಸಿದ್ದಗಂಗಾ ಸ್ವಾಮೀಜಿಯ ಆಶೀರ್ವಾದವನ್ನ ಪಡೆದ ನಂತ್ರ ಚಿತ್ರದ ಧ್ವನಿ ಸುರಳಿಯನ್ನ ಬಿಡುಗಡೆ ಮಾಡಿದ್ದಾರೆ. ವಿಶೇಷ ಅಂದ್ರೆ ಈ ಹಾಡನ್ನ ಪುನೀತ್ ರಾಜ್ ಕುಮಾರ್ ಹಾಗು ಶಿವಣ್ಣ ಹಾಡಿರೋದು. ಇನ್ನು ಅಭಿಮಾನದ ಸಾಂಗ್ ಕೇಳೊದಕ್ಕೆ ಸಖತ್ತಾಗಿದೆ. ಈಗಾಗ್ಲೇ ದೊಡ್ಮನೆ ಫ್ಯಾನ್ಸ್ ಅಭಿಮಾನಿಗಳೇ ನಮ್ಮನೆ ದೇವ್ರು ಅಂತ ಹಾಡ್ಕೋಂಡು ಹೆಜ್ಜೆ ಹಾಕ್ತಿದ್ದಾರೆ.

ಅಲ್ದೆ ಇದೇ 16 ರಂದು ಶಿವಣ್ಣನ ಕೈಯಲ್ಲಿ ಚಿತ್ರದ ಸಾಂಗ್ ಒಂದನ್ನ ರಿಲೀಸ್ ಮಾಡ್ತಿದ್ದು. ಆಗಸ್ಟ್ 23 ರಂದು ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಸಾಂಗ್ ನ ಬಿಡುಗಡೆ ಮಾಡ್ತಿದ್ದಾರೆ, ಮತ್ತೊಂದು ಹಾಡನ್ನ ಕಿಚ್ಚಾ ಸುದೀಪ್ ಲೋಕಾರ್ಪಣೆ ಮಾಡಲಿದ್ದಾರೆ.

ಹೀಗೆ ತಲಾ ಒಂದೊಂದು ಹಾಡನ್ನ ಒಬ್ಬೋಬ್ಬ ಸ್ಟಾರ್ ಕೈಯಲ್ಲಿ ರಿಲೀಸ್ ಮಾಡೋ ಪ್ಲ್ಯಾನ್ ಚಿತ್ರತಂಡದ್ದು.


ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್