ಹೊಸ ಬಿಡುಗಡೆ


ಸಖತ್ ರಗಡ್ ಆಗಿದೆ ‘ಹೆಬ್ಬುಲಿ’ ಟೀಸರ್ :
0
1 year ago blogpost


ಕಿಚ್ಚ ಸುದೀಪ್ ಕೋಟಿಗೊಬ್ಬನಾಗಿ ಟೈಟಲ್ ತಕ್ಕಂತೆ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿರುವಾಗಲೆ,  ಸುದೀಪ್ ಫ್ಯಾನ್ಸ್ ಗೆ ಮತ್ತೊಂದು ಸ್ವೀಟ್ ನ್ಯೂಸ್ ಹೊರಬಿದ್ದಿದೆ. ಹೌದು ಕಿಚ್ಚ ಸುದೀಪ್ ಅಭಿನಯದ ಮುಂದಿನ ಬಹುನೀರಿಕ್ಷಿತ “ಹೆಬ್ಬುಲಿ” ಚಿತ್ರದ ಫಸ್ಟ್ ಲುಕ್ ಟೀಸರ್ ಔಟ್ ಆಗಿದೆ. ಕಿಚ್ಚ, ಕೈಯಲ್ಲಿ ಗನ್ ಹಿಡಿದು  ಸಖತ್ ರಗಡ್ ಲುಕ್ ನಲ್ಲಿ, ಸಖತ್ ಸ್ಟೈಲಿಶ್ ಆಗಿ ಘರ್ಜಿಸಿದ್ದಾರೆ..

ಹೈಲೆಟ್ ಅಂದ್ರೆ ಕಿಚ್ಚನ ಕಣ್ಣುಗಳು ಎಷ್ಟು ಇಂಟೇನ್ಸಿವ್ ಆಗಿವೆ ಅಂದ್ರೆ, ವಿಲನ್ ಗಳ ಮೇಲೆ ಬುಲೆಟ್ ಗನ್ ನಿಂದ ಅಲ್ಲ ಕಣ್ಣುಗಳಿಂದ ಹಾರುತ್ವೆ ಅನ್ನೋ ತರ ಇದೆ. ಟೋಟಲ್ ಆಗಿ  ಹೇಳ್ಬೆಕಂದ್ರೆ ಸಖತ್ ಆಗಿದೆ ಟೀಸರ್ ಮೋಷನ್ ಪೋಸ್ಟರ್. ಇನ್ನು ಈ ಟೀಸರ್ ನಿಂದ್ಲೇ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆಗಳು ಗರಿಗೆದರುವುದಂತು ಖಂಡಿತ.

ಹೆಬ್ಬುಲಿಗೆ ಮುಂಗಾರು ಮಳೆ ಸಿನಿಮಾ ಖ್ಯಾತಿಯ ಕ್ಯಾಮರಮ್ಯಾನ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದು. ಕಿಚ್ಚನ ಅಣ್ಣನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಅಭಿನಯಿಸಿದ್ದಾರೆ. ಅಭಿನಯ ಚಕ್ರವರ್ತಿ ಹಾಗು ಕ್ರೇಜಿಸ್ಟಾರ್ ಕಾಂಬಿನೇಷನ್ ನ ಎರಡನೇ ಚಿತ್ರವಾಗಿದ್ದು ಹೆಬ್ಬುಲಿ ಕನ್ನಡದ ಮತ್ತೊಂದು ಮಾಣಿಕ್ಯ ಆಗೋದಂತು ಖಂಡಿತ.


ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್