ಹೊಸ ಬಿಡುಗಡೆ

ವರ್ಣಿಕ ಕನ್ನಡದಲ್ಲಿ ಬರ‍್ತಿದೆ ಮೂಕಿ ಸಿನಿಮಾ
0 rating
4 months ago blogpost


ವರ್ಣಿಕ ಅನ್ನೋ ಕನ್ನಡ ಮೂಕಿ ಸಿನಿಮಾ ಒಂದು ಇದೀಗ ತನ್ನ ಟ್ರೇಲರ್ ಮೂಲಕ ಹವಾ ಕ್ರಿಯೇಟ್ ಮಾಡಿದೆ. ದರ್ಶನ್ ಸೇರಿ ಕೆಲ ಸ್ಟಾರ್ ನಟರ ಜತೆಗೆ ನಟಿಸಿದ್ದ ಪೂಣಿರ್ಮಾ ಗೌಡ ಈ ಸಿನಿಮಾ ಮೂಲಕ ನಿರ್ದೇಶಕಿಯಾಗಿದ್ದಾರೆ. ಪುಷ್ಪಕ ವಿಮಾನ ಚಿತ್ರದ ನಂತರ ’ವರ್ಣಿಕ’ ಎಂಬ ಮೂಕಿ ಚಿತ್ರ ಕನ್ನಡದಲ್ಲಿ ಬರುತ್ತಿದ್ದು, ಕನ್ನಡದ ಹುಡುಗಿಯೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶಿಸಿದ್ದ ಪುಷ್ಪಕ ವಿಮಾನ ಭಾರತೀಯ ಚಲನ ಚಿತ್ರರಂಗದಲ್ಲಿಯೇ ಮಾತು ರಹಿತವಾಗಿರುವ ಕಾರಣಕ್ಕೆ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಇದೀಗ ಪೂರ್ಣಿಮಾ ಗೌಡ ಅಂತದ್ದೇ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಇದೊಂದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಹಾನಿಯ ಸಿನಿಮಾವಾಗಿದ್ದು, ತರುಣ ತರುಣಿಯರ ಗುಂಪೊಂದು ಬೆಂಗಳೂರಿನಿಂದ ಮಡಿಕೇರಿಗೆ ಸಾಗುವ ಹಾದಿಯಲ್ಲಿ ಒಬ್ಬೊಬ್ಬರೇ ಕಾಣಿಯಾಗುತ್ತಾರೆ. ಸಾವುಗಳಾಗುತ್ತವೆ. ಆ ರಹಸ್ಯಬೇಧಿಸುವ ಚಿತ್ರಕತೆಯನ್ನು ಇಲ್ಲಿದೆ. ಟೈಟಲ್‌ನಿಂದಾಗಿಯೇ ಸಿನಿಮಾ ಕುತೂಹಲ ಮೂಡಿಸಿದೆ. ತಾವು ಹೋಗುವ ದಾರಿಯಲ್ಲಿ ಆಕಸ್ಮಿಕವಾಗಿ ಏನೆಲ್ಲಾ ಘಟನೆಗಳು ನಡೆಯುತ್ತವೆ. ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಅನ್ನೋದು ಸಿನಿಮಾದ ಥೀಮ್. ವರ್ಣಿಕ ಅನ್ನುವುದು ಸಂಸ್ಕೃತ ಪದ. ಮಾಸ್ಕ್ ಇದರ ಅರ್ಥ. ಈ ಮಾಸ್ಕ್ ಹಿಂದೆ ಏನೆಲ್ಲ ಕರಾಳ ಅಧ್ಯಾಯಗಳು ಇರಲಿದೆ. 

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್