ಹೊಸ ಬಿಡುಗಡೆ

ಹಲವು ವಿಶೇಷಗಳ ‘ಕೋಟಿಗೊಬ್ಬ 2’ ಲೇಟೆಸ್ಟ್ ಸ್ಟಿಲ್ಸ್ ನೋಡಿ :
0
1 year ago blogpost


ಕಿಚ್ಚ ಸುದೀಪ್ ಅಭಿನಯದ ಚಿತ್ರ ಅಂದ್ರೆ ಅಭಿಮಾನಿಗಳು ತುದಿಗಾಗಲಲ್ಲಿ ನಿಂತು ನಿರೀಕ್ಷಿಸುತ್ತಾರೆ. ಅವರ ನಿರೀಕ್ಷೆಗಳಿಗೆ ತೆರೆ ಎಳೆಯುವ ಸಮಯ ಬಂದೆಬಿಟ್ಟಿದೆ. ಇದೇ ಆಗಸ್ಟ್ 12ಕ್ಕೆ ಕೋಟಿಗೊಬ್ಬ 2 ಬಿಡುಗಡೆಯಾಗುತ್ತಿದೆ.

ಕನ್ನಡ ಮತ್ತು ತಮಿಳು ಎರಡು ಭಾಷೆಗಳಲ್ಲಿ ಈ ಚಿತ್ರ ನಿರ್ಮಿಸಲಾಗಿದ್ದು, ಏಕಕಾಲಕ್ಕೆ ಎರಡೂ ಚಿತ್ರಗಳು ಬಿಡುಗಡೆಯಾಗುತ್ತಿವೆ.  ರಾಕ್‍ಲೈನ್ ವೆಂಕಟೇಶ್ ಅರ್ಪಿಸಿ, ರಾಂಬಾಬು ಪ್ರೊಡಕ್ಷನ್ ಅಡಿಯಲ್ಲಿ ಎಂ.ಬಿ. ಬಾಬು ನಿರ್ಮಿಸಿರುವ ಚಿತ್ರ.

ಈ ಚಿತ್ರವನ್ನು ತಮಿಳಿನ ಹೆಸರಾಂತ ನಿರ್ದೇಶಕರಾದ ಕೆ.ಎಸ್. ರವಿಕುಮಾರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಅವರೊಟ್ಟಿಗೆ ನಾಯಕಿಯಾಗಿ ನಿತ್ಯಾ ಮೆನನ್ ನಟಿಸಿದ್ದಾರೆ. ಚಿತ್ರಕ್ಕೆ ಡಿ. ಇಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಹರ್ಷ ಎ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ, ರಾಜಾ ರತ್ನಂ ಅವರ ಛಾಯಾಗ್ರಹಣವಿದೆ.

ಸುದೀಪ್, ನಿತ್ಯಾ ಮೆನನ್, ರವಿಶಂಕರ್, ಸಾಧು ಕೋಕಿಲ, ದೇವರಾಜ್, ಚಿಕ್ಕಣ್ಣ, ಮುಕೇಶ್ ತಿವಾರಿ ಸೇರಿದಂತೆ ಇನ್ನೂ ಅನೇಕರ ತಾರಾಗಣ `ಕೋಟಿಗೊಬ್ಬ-2′ ಚಿತ್ರಕ್ಕಿದೆ. ಈ ಚಿತ್ರದ ಲೇಟೆಸ್ಟ್ ಸ್ಟಿಲ್ಸ್ ಇಲ್ಲಿವೆ ಕಣ್ತುಂಬಿಸಿಕೊಳ್ಳಿ.

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್