ಹೊಸ ಬಿಡುಗಡೆ


ಡೆವಿಲ್ ಚಿತ್ರದ ಮತ್ತೊಂದು ಟೀಸರ್ ರಿವೀಲ್ :
0
1 year ago blogpost


ವುಮನ್ ಸೆಂಟರಿಕ್ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿವೆ. ಬಾಲಿವುಡ್ ರೀತಿ ಕಾಲಿವುಡ್, ಟಾಲಿವುಡ್ನಲ್ಲೂ ಇಂತಾ ಪ್ರಯತ್ನಗಳು ಜೋರಾಗಿದೆ. ಆದ್ರೀಗ ಏಕಕಾಲಕ್ಕೆ ತಮಿಳು, ತೆಲುಗು, ಹಿಂದಿಯಲ್ಲಿ ಫೀಮೇಲ್ ಓರಿಯಂಟೆಡ್ ಸಿನಿಮಾವೊಂದು ತೆರೆಗೆ ಬರೋಕೆ ಸಜ್ಜಾಗ್ತಿರೋದು ವಿಶೇಷ. ಚಿತ್ರದ ಬಿಂದಾಸ್ ಟೀಸರ್ ಔಟ್ ಆಗಿದೆ.

ಈ ಹಾರರ್ ಥ್ರಿಲ್ಲರ್ ಸಿನಿಮಾಗೆ ಎ.ಎಲ್. ವಿಜಯ್ ಆಕ್ಷನ್ ಕಟ್ ಹೇಳಿದ್ದಾರೆ. ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವಾ ಚಿತ್ರದ ಕೀ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಫಸ್ಟ್ ಟೀಸರ್ನಲ್ಲಿ ಪ್ರಭುದೇವಾ ಟಿಪಿಕಲ್ ಡ್ಯಾನ್ಸ್ಗೆ ಅಭಿಮಾನಿಗಳು ಫಿದಾ ಆಗಿದ್ರು.

ಸದ್ಯ ಡೆವಿಲ್ ಚಿತ್ರದ ಮತ್ತೊಂದು ಕಲರ್ಫುಲ್ ಟೀಸರ್ ರಿವೀಲ್ ಆಗಿದೆ. ಈ ವಿಡಿಯೋದಲ್ಲಿ ತಮನ್ನಾಳ ಅಮೇಜಿಂಗ್ ಮೂವ್ಸ್ ನೋಡಿ ಅವಳ ಫ್ಯಾನ್ಸ್ ಕಳ್ದೋಗಿದ್ದಾರೆ, ಗ್ಲಾಮರಸ್ ಅವತಾರದಲ್ಲಿ ಮಿಲ್ಕಿ ಬ್ಯೂಟಿ ಡ್ಯಾನ್ಸಿಂಗ್ ಸ್ಕಿಲ್ಸ್ ನೋಡಿದವರು ಭೇಷ್ ಅಂತಿದ್ದಾರೆ.

ಡೆವಿಲ್ ಚಿತ್ರದ ಎರಡೂ ಟೀಸರ್ನಲ್ಲಿ ಚಿತ್ರದ ಸ್ಟೋರಿಲೈನನ್ನ ಬಿಟ್ಟುಕೊಟ್ಟಿಲ್ಲ. ಆದ್ರೆ ಪ್ರಭುದೇವಾ, ತಮನ್ನಾ ಅಭಿಮಾನಿಗಳಂತೂ ಈ ಚಿತ್ರಕ್ಕೋಸ್ಕರ ಕಾತರರಾಗಿದ್ದಾರೆ. ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಿರೋದ್ರಿಂದ ತಮನ್ನಾ ಕೂಡ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಕೊಂಡಿದ್ದಾಳೆ. ಚಿತ್ರ ಇದೇ ಸೆಪ್ಟೆಂಬರ್ನಲ್ಲಿ ತೆರೆಗಪ್ಪಳಿಸಲಿದೆ.

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್