ಉದಯೋನ್ಮುಖರು

8 hours ago
ಅಗ್ನಿಸಾಕ್ಷಿಯ ಅಂಜಲಿ ಎಂದೇ ಜನಜನಿತ ಈ ಸುಕೃತಾ!
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಮುದ್ದು ಮುಖ, ಸದಾ ಮುಗುಳುನಗು, ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕು ಎಂದೆನಸುವ ಇಂಪಾದ ದನಿ.. ಇದು ಸಕ್ಕರೆ ನಾಡಿನ ಚೆಲುವೆ ಸುಕೃತಾ ನಾಗ್ ಪರಿಚಯ. ಸುಕೃತಾ ನಾಗ್ ಯಾರಪ್ಪ ಎಂದು ಆಲೋಚಿಸುತ್ತಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ನೂರಾರು ಪ್ರೇಕ್ಷಕರ ಮನ ಗೆದ್ದಿರುವ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ತಂಗಿ ಪಾತ್ರಕ್ಕೆ ಜೀವ ತುಂಬುತ್ತಿರುವ ಸುಕೃತಾ ನಾಗ್ ಸದ್ಯಕ್ಕೆ ಅಂಜಲಿ ಎಂದೇ ಗುರುತಿಸಿಕೊಂಡಿದ್ದಾರೆ. ಅಣ್ಣ  ಸಿದ್ದಾರ್ಥ್ ....


ಮುಂದೆ...
1 day ago
ಕಿರುತೆರೆಯ ಸ್ವಾತಿಮುತ್ತು ಅಮಿತ್ ರಾವ್
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಅದೃಷ್ಟ ಯಾವ ರೀತಿಯಲ್ಲಿ ಕಣ್ಣ ಮುಂದೆ ಬರುತ್ತದೆ ಎಂದು ಹೇಳಲಾಗದು. ಆದರೆ ಬಂದಾಗ ಎರಡು ಕೈಗಳಿಂದ ಬಾಚಿಕೊಳ್ಳುವುದು ಜಾಣತನ. ಆಕಸ್ಮಿಕವಾಗಿ ಸಿಕ್ಕ ಅವಕಾಶ ಬದುಕಿನ ದಿಕ್ಕನ್ನೇ ಬದಲಾಯಿಸಬಹುದು. ಅದಕ್ಕೆ ಉದಾಹರಣೆ ಕರಾವಳಿಯ ಪ್ರತಿಭೆ ಅಮಿತ್ ರಾವ್. ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ನಟಿಸುವ ಮೂಲಕ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಅಮಿತ್ ಅವರು ಮೂಲತ ಬೆಳ್ತಂಗಡಿಯವರ ಚಾರ್ಮಾಡಿಯವರು. ಕಡಲನಗರಿ ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಅಮಿತ್ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಇಲ್ಲೇ ....


ಮುಂದೆ...
5 days ago
ಪ್ರಿಯಾಂತರಂಗ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಪ್ರಿಯಾ ಕೆಸರೆ ಕಲಿತದ್ದು ಪತ್ರಿಕೋದ್ಯಮ. ಮುಂದೆ ಉದ್ಯೋಗ ಅರಸಿಕೊಂಡು ಮಹಾನಗರಿಯತ್ತ ಪಯಣ. ಖಾಸಗಿ ವಾಹಿನಿಯಲ್ಲಿ ದುಡಿಯುತ್ತಿದ್ದ ಪ್ರಿಯಾರನ್ನು ಸೆಳೆದದ್ದು ಬಾಲ್ಯದಲ್ಲಿಯೇ ಇದ್ದ ನಾಟಕದ ನಂಟು. ಯಾವಾಗ ಬಾಲ್ಯದ ರಸಮಯ ಕ್ಷಣಗಳು ನೆನಪಾದವೋ ಹಿಂದೆ ಮುಂದೆ ನೋಡದೆ ಕೆಲಸಕ್ಕೆ ಗುಡ್ ಬೈ ಹೇಳಿ ಸೇರಿದ್ದು ಅಭಿನಯ ತರಂಗ ತಂಡ. ಸುಮಾರು ಆರು ತಿಂಗಳ ಕಾಲ ನಾಟಕದಲ್ಲಿ ಅಭಿನಯಿಸಿದ ಪ್ರಿಯಾ ಗೆ ಟೆಕ್ನಿಕಲ್ ಫೀಲ್ಡ್ ನಲ್ಲಿ ವಿಪರೀತ ಆಸಕ್ತಿ. ಆ ಕಾರಣದಿಂದ ಎಡಿಟಿಂಗ್ ಕಲಿತರು. ....


ಮುಂದೆ...
1 week ago
ನಟನೆಗೂ ಸೈ, ಕಂಠದಾನಕ್ಕೂ ಸೈ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಬಾಲ ನಟಿ, ಸಿನಿಮಾ ನಟಿ, ಕಿರುತೆರೆ ನಟಿ, ಕಂಠದಾನ ಕಲಾವಿದೆ ಇದು ದೀಪಾ ಭಾಸ್ಕರ್ ಅವರ ಸಂಕ್ಷಿಪ್ತ ಪರಿಚಯ. ಮಹೇಂದ್ರ ವರ್ಮ ಚಿತ್ರದಲ್ಲಿ ಬಣ್ಣ ಹಚ್ಚುವುದರ ಮೂಲಕ ಬಾಲ ನಟಿಯಾಗಿ ಪರಿಚಯವಾಗಿರುವ ದೀಪಾ ಸದ್ಯ ವೀಕ್ಷಕರ ಪ್ರೀತಿಯ ಸುಬ್ಬುಲಕ್ಷ್ಮಿಯಾಗಿದ್ದಾರೆ. ಮುಂದೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುಬ್ಬುಲಕ್ಷ್ಮಿ ಸಂಸಾರದಲ್ಲಿ ಸುಬ್ಬುಲಕ್ಷ್ಮಿಯಾಗಿ ಮಿಂಚುತ್ತಿರುವ ದೀಪಾ ಭಾಸ್ಕರ್ ಹಳ್ಳಿ ಹುಡುಗಿಯಾಗಿ ಮನ ಸೆಳೆದಿದ್ದಾರೆ. ಹೋಗ್ಲಿ ಬಿಡಿ ಸರ್, ಸಿಲ್ಲಿ ಲಲ್ಲಿ, ಪಾ.ಪ ಪಾಂಡು, ....


ಮುಂದೆ...
1 week ago
ನಾಗಕನ್ನಿಕೆಯಾಗಿ ಬದಲಾದ ಗುಂಡ್ಯಾನ ಹೆಂಡ್ತಿ!
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಕನ್ನಿಕೆ ಧಾರಾವಾಹಿಯಲ್ಲಿ ನಾಗಿಣಿ ಶಿವಾನಿ ಪಾತ್ರದಲ್ಲಿ ಅಭಿನಯಿಸುತ್ತಿರುವ ಅದಿತಿ ಪ್ರಭುದೇವ ದಾವಣಗೆರೆಯ ಬೆಡಗಿ. ಗುಂಡ್ಯಾನ ಹೆಂಡ್ತಿ ಧಾರಾವಾಹಿಯ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ಅದಿತಿ ಇತ್ತೀಚೆಗೆ ಬಿಡುಗಡೆಯಾದ ಧೈರ್ಯಂ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಇದೀಗ ನಾಗಕನ್ನಿಕೆಯಾಗಿ ಮಿಂಚುತ್ತಿರುವ ಈಕೆ ತನ್ನ ಅಪ್ಪ ಅಮ್ಮನನ್ನು ಕೊಂದ ಕುಟುಂಬದವರೊಂದಿಗೆ ಸೇಡು ತೀರಿಸ ಬೇಕೆಂಬ ಹಠದಿಂದ ಇದೀಗ ಮನುಷ್ಯ ರೂಪದಲ್ಲಿ ....


ಮುಂದೆ...
2 weeks ago
ಕಿರುತೆರೆಯ ಸೂಪರ್ ಸ್ಟಾರ್ ಸಾಮ್ರಾಟ್ ಆಗಿ ಗುಬ್ಬಿಯ ತ್ರಿವಿಕ್ರಮ್
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಬಣ್ಣ ಹಚ್ಚಿ ಕ್ಯಾಮರಾ ಮುಂದೆ ಬಂದು ನಟಿಸುತ್ತೇನೆ ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ ಎನ್ನುವ ತ್ರಿವಿಕ್ರಮ್ ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು. ತುಮಕೂರಿನ ಗುಬ್ಬಿಯ ತ್ರಿವಿಕ್ರಮ್ ಇದೀಗ ಮನೋಜ್ಞ ಅಭಿನಯದಿಂದ ಸೀರಿಯಲ್ ಪ್ರಿಯರ ಕಣ್ಮಣಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಪದ್ಮಾವತಿ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ಸಾಮ್ರಾಟ್ ನಾಗಿ ನಟಿಸುತ್ತಿರುವ ತ್ರಿವಿಕ್ರಮ್ ಬೆಳ್ಳಿತೆರೆಯ ಮೂಲಕ ನಟನಾ ರಂಗದಲ್ಲಿ ಗುರುತಿಸಿಕೊಂಡವರು. ಅರ್ಜುನ್ ಸರ್ಜಾ ಅವರ ಕಾರ್ಗಿಲ್ ನಲ್ಲಿ ....


ಮುಂದೆ...
2 weeks ago
ಶಿರಸಿಯ ಶ್ರೀದತ್ತ ಬಂಗಾರಿಯಾದ ಕಥೆ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಕಿರುತೆರೆಯ ಮೂಲಕ ಮನೆಮಾತಾರವರಲ್ಲಿ ಶ್ರೀದತ್ತ ಕೂಡ ಒಬ್ಬರು. ಝೀ ಕನ್ನಡ ವಾಹಿನಿಯ ಮಹಾದೇವಿ ಧಾರವಾಹಿಯಲ್ಲಿ ಮುಗ್ಧ ಹುಡುಗ ಬಂಗಾರಿಯಾಗಿ ವೀಕ್ಷಕರ ಮನ ಸೆಳೆದಿರುವ ಶ್ರೀದತ್ತ ತಮ್ಮ ಮೊದಲ ಧಾರಾವಾಹಿಯಲ್ಲೇ ಜನಪ್ರಿಯರಾದವರು. ಉತ್ತರಕನ್ನಡದ ಶಿರಸಿಯ ಶ್ರೀದತ್ತ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುತ್ತಾರೆ. ಶಾಲಾ ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಹವ್ಯಾಸಿ ತಂಡಗಳ ಜೊತೆ ಸೇರಿ ನಾಟಕಗಳನ್ನು ಮಾಡಿರುವ ಇವರು ಮುಂದೆ ರಂಗಾಯಣದಲ್ಲಿ ಒಂದು ವರುಷದ ಡಿಪ್ಲೋಮಾ ....


ಮುಂದೆ...
2 weeks ago
ಸುಬ್ಬಿಯಾದ ಪುಟ್ಟ ಗೌರಿ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಮನೋಜ್ಞ ಅಭಿನಯದಿಂದ ವೀಕ್ಷಕರ ಮನ ಗೆದ್ದಿರುವ ರಂಜನಿ ರಾಘವನ್ ಸೀರಿಯಲ್ ಪ್ರಿಯರ ಪಾಲಿನ ಮುದ್ದು ಕಣ್ಮಣಿ. ಸದ್ಯದ ಮಟ್ಟಿಗೆ ಆಕೆ ಪುಟ್ಟ ಗೌರಿ ಎಂದೇ ಪರಿಚಿತ. ಆಕಾಶದೀಪ ಧಾರಾವಾಹಿ ಮೂಲಕ ರಂಜನಿ ಬಣ್ಣದ ಲೋಕಕ್ಕೆ ಕಾಲಿಟ್ಟರೂ ಅವರಿಗೆ ಹೆಸರು ತಂದು ಕೊಟ್ಟದ್ದು ಪುಟ್ಟ ಗೌರಿ ಪಾತ್ರ. ಎಂಬಿಎ ಮುಗಿಸಿರುವ ರಂಜನಿ ಗೆ ನಟಿಯಾಗಬೇಕು ಎಂಬ ಬಯಕೆಯೇನು ಇರಲಿಲ್ಲ. ಬದಲಿಗೆ ತಾನೊಬ್ಬಳು ಗಾಯಕಿಯಾಗಬೇಕು ಎಂಬ ಮಹದಾಸೆ ಇತ್ತು. ನಟನಾ ಕ್ಷೇತ್ರಕ್ಕೆ ಬಂದದ್ದು ಆಕಸ್ಮಿಕ. ದೊರೆತ ಅವಕಾಶವನ್ನು ಬಿಡಲೊಲ್ಲದ ರಂಜನಿ ....


ಮುಂದೆ...
2 weeks ago
ಬಣ್ಣದ ಲೋಕದಲ್ಲಿ ಮೈಸೂರಿನ ಚೆಲುವೆ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ತೇಜಸ್ವಿನಿ... ತಾನಾಗಿಯೇ ಒಲಿದು ಬಂದ ಅವಕಾಶವನ್ನು ಒಲ್ಲೆ ಎಂದು ತಿರಸ್ಕರಿಸದೇ ಸಂತಸದಿಂದ ಸ್ವೀಕರಿಸಿ, ಇದೀಗ ಅದನ್ನು ಪ್ರೀತಿಸುವ ಈ ಚೆಲುವೆ ಮೈಸೂರಿನವರು. ಮಧುಬಾಲ ಧಾರಾವಾಹಿಯಲ್ಲಿ ಪೋಷಕನಟಿಯಾಗಿ ನಟಿಸಿರುವ ತೇಜಸ್ವಿನಿ ಸದ್ಯ ಸ್ಟಾರ್ ಸುವರ್ಣ ವಾಹಿನಿಯ ನೀಲಿ ಧಾರಾವಾಹಿಯ ರೇಖಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘’ನಟನೆ ಬಗ್ಗೆ ನನಗೆ ವಿಶೇಷವಾದ ಆಸಕ್ತಿಯೇನೂ ಇರಲಿಲ್ಲ. ನಾನೊಬ್ಬಳು ನಟಿಯಾಗುತ್ತೇನೆ ಎಂಬ ಕನಸು ನನಗಿರಲಿಲ್ಲ. ಆದರೆ ಬಂದ ಅವಕಾಶವನ್ನು ಒಲ್ಲೆ ಎನ್ನದೆ ಒಪ್ಪಿಕೊಂಡೆ. ಇದೀಗ ....


ಮುಂದೆ...
2 weeks ago
ಕಿರುತೆರೆಯಲ್ಲಿ ಚಂದನ್ ಚಾರ್ಮಿಂಗ್
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಬಣ್ಣದ ಲೋಕದಲ್ಲಿ ಇದೀಗ ಹೊಸ ಪ್ರತಿಭೆಗಳದ್ದೇ ಹಂಗಾಮ. ತಮ್ಮದೇ ಆದ ನಟನಾ ಶೈಲಿಯ ಮೂಲಕ ಪ್ರೇಕ್ಷಕರ ಮನದಲ್ಲಿ ಸ್ಥಾನಗಿಟ್ಟಿಸಿಕೊಂಡವರು ಅನೇಕರು. ಅದರಲ್ಲಿ ಚಂದನ್ ವಿಜಯ್ ಕೂಡಾ ಒಬ್ಬರು. ಚಂದನ್ ವಿಜಯ್ ಹೆಸರು ಕಿರುತೆರೆ ಪ್ರಿಯರಿಗೆ ಹೊಸತೆನಿಸಬಹುದು. ಯಾಕೆಂದರೆ ಬಣ್ಣದ ಲೋಕದಲ್ಲಿ ನಿಜ ನಾಮಧೇಯಕ್ಕಿಂತ ತಾವು ಜೀವ ತುಂಬಿದ ಪಾತ್ರದ ಹೆಸರೇ ಜನರಿಗೆ ಹತ್ತಿರವಾಗುವುದು ಹೆಚ್ಚು. ಚಂದನ್ ವಿಜಯ್ ಎಂಬ ಹೆಸರು ಅಪರಿಚಿತ ಎಂದೆನಿಸಿದರೆ ಇಲ್ಲಿ ಕೇಳಿ. ಪತ್ತೇದಾರಿ ಪ್ರತಿಭಾ ಧಾರಾವಾಹಿಯಲ್ಲಿ ಖಡಕ್ ಪೋಲಿಸ್ ....


ಮುಂದೆ...
2 weeks ago
ಫೇಸ್ ಬುಕ್ ನಲ್ಲಿ ಸಿಕ್ಕ ಅವಳು…. ಮೇಘನಾ!
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಕನ್ನಡ ಧಾರಾವಾಹಿ ವೀಕ್ಷಕರಿಗೆ ಈ ಬೆಡಗಿ ಅಪರಿಚಿತರೇನಲ್ಲ. ತನ್ನ ಮನೋಜ್ಞ ಅಭಿನಯದಿಂದ ವೀಕ್ಷಕರ ಮನ ಸೆಳದಿರುಚ ಚಿತ್ರದುರ್ಗದ ಚೆಲುವೆಯ ಹೆಸರು ಮೇಘನ ಗೌಡ. ಅರಗಿಣಿ ಧಾರಾವಾಹಿಯಲ್ಲಿ ತುಂಟ ಹುಡುಗಿ ಖುಷಿ ಪಾತ್ರಧಾರಿಯಾಗಿ ಮನೆಮಾತಾಗಿರುವ ಮೇಘನ ಸದ್ಯ ಮಾನಸಯಾಗಿ ಬದಲಾಗಿದ್ದಾರೆ! ಹೌದು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅವಳು ಧಾರಾವಾಹಿಯಲ್ಲಿ ಮಾನಸ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ. ಮಾನಸಗೆ ಮನೆಯವರೆಂದರೆ ಪ್ರಾಣ. ಮನೆಯವರಿಗಾಗಿ ಆಕೆ ಯಾವುದೇ ತ್ಯಾಗಕ್ಕೂ ಬೇಕಾದರೂ ....


ಮುಂದೆ...
2 weeks ago
ಮಂಜಿನ ನಗರಿಯ ಹುಡುಗನ ಬಣ್ಣದ ಪುರಾಣ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಮನೋಜ್ಞ ಅಭಿನಯದಿಂದ ವೀಕ್ಷಕರ ಮನ ಕದ್ದಿರುವ ಈತ ಮಂಜಿನ ನಗರಿಯ ಹುಡುಗ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ಲಕ್ಕಿಯಾಗಿ ಹೆಣ್ ಮಕ್ಕಳ ಮನ ಸೆಳೆದಿರುವ ಈ ಚಾಕಲೇಟ್ ಹುಡುಗನ ಹೆಸರು ಭರತ್ ಬೋಪಣ್ಣ. ಲಕ್ಕಿಯಾಗಿ ಮನೆಮತಾಗಿರುವ ಕೊಡಗಿನ ಕುವರನಿಗೆ ಬ್ರಹ್ಮಗಂಟು ಎರಡನೇ ಧಾರಾವಾಹಿ. ಕಲರ್ಸ್ ಸೂಪರ್ ವಾಹಿನಿಯ ಗಿರಿಜಾ ಕಲ್ಯಾಣ ಧಾರಾವಾಹಿಯಲ್ಲಿ ರಾಜಕುಮಾರನ ಪಾತ್ರಕ್ಕೆ ಜೀವ ತುಂಬಿದ್ದ ಭರತ್ ಬೋಪಣ್ಣ ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ....


ಮುಂದೆ...
3 weeks ago
‘ಪ್ರತಿಭಾ’ವಂತೆ!
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಮಹಾನಗರಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶರ್ಮಿಳಾ ಚಂದ್ರಶೇಖರ್ ಇಂದು ಪತ್ತೆದಾರಿ ಪ್ರತಿಭಾ ಎಂದೇ ಪರಿಚಿತ. ನಿಗೂಢ ರಹಸ್ಯವನ್ನು ಭೇದಿಸುವಲ್ಲಿ ಪ್ರತಿಭಾ ಸಿದ್ಧಹಸ್ತಳು. ಯಾವ ಪ್ರತಿಭಾ ಎಂದು ಆಲೋಚನೆ ಮಾಡುತ್ತಿದ್ದೀರಾ? ಹಾಗಾದರೆ ಇಲ್ಲಿ ಕೇಳಿ... ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನವೀನ್ ಕೃಷ್ಣ ನಿರ್ದೇಶನದ ಪತ್ತೆದಾರಿ ಪ್ರತಿಭಾ ಧಾರಾವಾಹಿಯಲ್ಲಿ ಪ್ರತಿಭಾ ಆಗಿ ಮಿಂಚಿತ್ತಿರುವ ಶರ್ಮಿಳಾರನ್ನು ಕಂಡಾಗ ತನಗೂ ಇಂತ ಸೊಸೆ, ಹೆಂಡತಿ, ಅಕ್ಕ ಬೇಕು ಎಂಬ ಆಲೋಚನೆ ಪ್ರತಿಯೊಬ್ಬರಲ್ಲೂ ....


ಮುಂದೆ...
3 weeks ago
ಸದಾಕಾಲ ಮುಗುಳುನಗೆ.. ಬಳ್ಳಾರಿಯ ಹ್ಯಾಂಡ್ ಸಮ್ ಹುಡುಗ ವಿಜಯ್ ಸಿಂಧಗಿ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಮುದ್ದು ಮುಖದ ತುಂಬಾ ಸದಾಕಾಲ ಮುಗುಳುನಗೆ.. ಬಳ್ಳಾರಿಯ ಹ್ಯಾಂಡ್ ಸಮ್ ಹುಡುಗ ವಿಜಯ್ ಸಿಂಧಗಿ ಇಂದು ಹುಬ್ಬಳ್ಳಿ ಹುಡುಗ ಎಂದೇ ಫೇಮಸ್. ಬಳ್ಳಾರಿಗೂ ಹುಬ್ಬಳ್ಳಿಗೂ ಏನಪ್ಪಾ ಸಂಬಂಧ ಎಂದು ಕನ್ ಫ್ಯೂಸ್ ಆಗಿಬಿಟ್ರಾ? ಹಾಗಿದ್ರೆ ಇಲ್ಲಿ ಕೇಳಿ... ವಿಜಯ್ ಸಿಂಧಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗ್ಳೂರು ಹುಡ್ಗಿ, ಹುಬ್ಳಿ ಹುಡ್ಗ ಧಾರಾವಾಹಿಯಲ್ಲಿ ಹುಬ್ಬಳ್ಳಿ ಹುಡುಗನಾಗಿ ನಟಿಸುತ್ತಿದ್ದಾರೆ. ಹುಬ್ಬಳ್ಳಿ ಹುಡುಗ ಅನಿರುದ್ಧ ಆಲಿಯಾಸ್ ಆನಿಯಾನಿಗೆ ಮಂಗಳೂರು ಹುಡುಗಿ ಅಮೂಲ್ಯ ....


ಮುಂದೆ...
3 weeks ago
ಬಣ್ಣದ ಲೋಕದಲ್ಲಿ ಮಲೆನಾಡ ಬೆಡಗಿ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಸದಾ ಕಾಲ ನವನವೀನ ಕಾರ್ಯಕ್ರಮಗಳೊಂದಿಗೆ ಜನರ ಮನ ಸೂರೆಗಳ್ಳುತ್ತಿರುವ ವಾಹಿನಿಗಳ ಪೈಕಿ ಝೀ ಕನ್ನಡವೂ ಒಂದು. ನಾನಾ ಬಗೆಯ ಧಾರಾವಾಹಿಗಳು, ರಿಯಾಲಿಟಿ ಶೋ ಗಳಿಂದ ಮನೆ ಮಾತಾಗಿರುವ ಸದ್ಯ ಹೊಚ್ಚ ಹೊಸ ಧಾರಾವಾಹಿಗಳ ರಸದೌತಣವನ್ನು ವೀಕ್ಷಕರಿಗೆ ಉಣಬಡಿಸುತ್ತದೆ. ಅದರಲ್ಲಿ ಸುಬ್ಬುಲಕ್ಷ್ಮಿ ಸಂಸಾರವೂ ಒಂದು. ಸುಬ್ಬುಲಕ್ಷ್ಮಿ ಸಂಸಾರ ದಲ್ಲಿ ಗ್ಯಾರಿ ಗ್ಯಾರಿ ಎಂದು ಓಡಾಡುತ್ತಾ ಹೈ ಫೈ ಜೀವನವನ್ನೇ ಬಯಸುವ ಶನಯ ಪಾತ್ರ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಮುದ್ದು ಮುಖದ ಚೆಲುವೆಯ ಕುರಿತು ಮುದ್ದಾದ ....


ಮುಂದೆ...
3 weeks ago
ಗುಳಿಕೆನ್ನೆಯ ಚೆಲುವೆ ವೈಷ್ಣವಿ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ದೇವಿ ಧಾರಾವಾಹಿಯ ಮೂಲಕ ಮನೆಮಾತಾಗಿರುವ ಗುಳಿ ಕೆನ್ನೆಯ ಚೆಂದುಳ್ಳಿ ಚೆಲುವೆ ಹೆಸರು ವೈಷ್ಣವಿ. ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರಕ್ಕೆ ಜೀವ ತುಂಬುತ್ತಿರುವ ವೈಷ್ಣವಿ ಇಂದು ಸನ್ನಿಧಿ ಎಂದೇ ಚಿರಪರಿಚಿತ. ಮಹಾನಗರಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸನ್ನಿಧಿ ಪಿಯುಸಿ ವಿಧ್ಯಾಭ್ಯಾಸ ಮಾಡುತ್ತಿರುವಾಗ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಬಂತು. ವೈಷ್ಣವಿ ತಾಯಿಯ ಬಳಿ ‘’ ನಿಮ್ಮ ಮಗಳು ದೇವಿ ಪಾತ್ರಕ್ಕೆ ....


ಮುಂದೆ...
1 month ago
ಕಿರುತೆರೆಯ ಚಾಕಲೇಟ್ ಬಾಯ್ ವಿಜಯ್ ಸೂರ್ಯ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಬೇಡಿಕೆಯಲ್ಲಿ ಇರುವ ಧಾರಾವಾಹಿಗಳ ಪೈಕಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಾಗುತ್ತಿರುವ ಅಗ್ನಿಸಾಕ್ಷಿಯೂ ಒಂದು. ಜನ ಮನ್ನಣೆಗಳಿಸಿರುವ ಅಗ್ನಿಸಾಕ್ಷಿಯ ಪ್ರತಿ ಪಾತ್ರವೂ ತನ್ನದೇ ಆದ ಅಭಿಮಾನಿಗಳನ್ನು ಪಡೆದಿರುವುದೇ ಇದಕ್ಕೆ ಉತ್ತಮ ಉದಾಹರಣೆ. ಸದಾ ಮುಗುಳುನಗೆ, ಕೆನ್ನೆಯ ಮೇಲೊಂದು ಮುದ್ದಾದ ಮುಗುಳು ನಗೆ... ಚಾಕಲೇಟ್ ಬಾಯ್ ಎಂದೇ ಜನಜನಿತವಾಗಿರುವ ವಿಜಯ್ ಸೂರ್ಯ ಅವರನ್ನು ಗೊತ್ತಿಲ್ಲದವರಾರು ಹೇಳಿ? ಸಿದ್ಧಾರ್ಥ್ ಎಂದೇ ಪರಿಚಿತರಾಗಿರುವ ವಿಜಯ್ ಸೂರ್ಯ ಪಿಯುಸಿ ವಿದ್ಯಾಭ್ಯಾಸದ ಬಳಿಕ ....


ಮುಂದೆ...
1 month ago
ಶೋಭಾಂತರಂಗ!
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಮಗಳು ಕಲಾವಿದೆಯಾಗಬೇಕು ಎಂಬ ಅಮ್ಮನ ಕನಸನ್ನು ನನಸು ಮಾಡಿರುವ ಶೋಭಾ ಶೆಟ್ಟಿ ಮೊದಲ ಬಾರಿ ಕ್ಯಾಮೆರಾ ಎದುರಿಸಿದ ಧಾರಾವಾಹಿ ಪಡುವಾರಳ್ಳಿ ಪಡ್ಡೆಗಳು. ಮುಂದೆ ಗುರುರಾಘವೇಂದ್ರ ವೈಭವ ಧಾರಾವಾಹಿಯಲ್ಲಿ ಪಂಕಜ ಪಾತ್ರಕ್ಕೆ ಜೀವ ತುಂಬಿದ ಅವರು ಕಾರ್ತಿಕ ದೀಪ ಧಾರಾವಾಹಿಯ ಮೂಲಕ ಮನೆಮಾತಾದರು. ಅದರಲ್ಲಿ ಚೆಲುವಿ ಮತ್ತು ಭೂತ ಹೀಗೆ ದ್ವಿಪಾತ್ರದಲ್ಲಿ ನಟಿಸಿದ ಶೋಭಾ ಮುಂದೆ ದೀಪವೂ ನಿನ್ನದೇ ಗಾಳಿಯು ನಿನ್ನದೇ, ಗೃಹಲಕ್ಷ್ಮಿ, ಪತ್ತೇದಾರಿ ಪ್ರತಿಭಾ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ....


ಮುಂದೆ...
1 month ago
ತ್ರಿಪುರ ಸುಂದರಿಯಾದ ಅರ್ಚನಾ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಝೀ ಕನ್ನಡ ವಾಹಿನಿಯ ಮಹಾದೇವಿ ಧಾರಾವಾಹಿಯ  ತ್ರಿಪುರ ಸುಂದರಿ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟ ಮುದ್ದು ಮುಖದ ಈ ಬೆಡಗಿಯ ಹೆಸರು ಅರ್ಚನಾ ಜೋಯಿಸ್. ಸದ್ಯ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದುರ್ಗಾ ಧಾರಾವಾಹಿಯ ದುರ್ಗಾ ಪಾತ್ರಕ್ಕೆ ಜೀವ ತುಂಬುತ್ತಿರುವ ಅರ್ಚನಾ ಎಂದಿಗೂ ತಾನೊಬ್ಬಳು ನಟಿಯಾಗಬೇಕು ಎಂದು ಅಂದುಕೊಂಡವರೇ ಅಲ್ಲ! ನೃತ್ಯದಲ್ಲಿ ಪದವಿಯನ್ನು ಪಡೆದಿರುವ ಅರ್ಚನಾ ಸ್ನೇಹಿತೆಯೊಬ್ಬರ ಮೂಲಕ ಧಾರಾವಾಹಿಯ ಆಡಿಶನ್ ಬಗ್ಗೆ ತಿಳಿದು ಭಾಗವಹಿಸಿದರು. ಮುಂದೆ ಆಯ್ಕೆಯೂ ....


ಮುಂದೆ...
1 month ago
ಬ್ಯೂಟಿಫುಲ್ ಮನಸಿನ ಮೇಘಶ್ರೀ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಸಕ್ಕರೆ ನಾಡಿನ ಚೆಲುವೆ ಮೇಘಶ್ರೀ ಬಾಲನಟಿಯಾಗಿ ಬಣ್ಣದ ಲೋಕದಲ್ಲಿ ಕಾಣಿಸಿಕೊಂಡವರು. ಮಕ್ಕಳ ಸಿನಿಮಾ ಡಂಗುರದಲ್ಲಿ ಅಭಿನಯಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಈ ಬೆಡಗಿ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಗೌರಿ ಪುತ್ರ ಸಿನಿಮಾದಲ್ಲಿ ನಟಿಸಿರುವ ಮೇಘಶ್ರೀಯನ್ನು ಕಿರುತೆರೆ ಕೈ ಬೀಸಿ ಕರೆಯಿತು. ಒಲ್ಲೆ ಎನ್ನದ ಆಕೆ ಚರಣದಾಸಿ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಪಡೆದರು. ಮನೋಜ್ಞ ಅಭಿನಯದಿಂದ ಸೀರಿಯಲ್ ಪ್ರಿಯರ ಮನ ಸೆಳೆದಿರುವ ಮೇಘಶ್ರೀ ಮುಂದೆ ಮೇಘ ಮಯೂರಿಯ ಚಾರುಲತಾ ಆಗಿ ಮಿಂಚಿದರು. ಅವರ ....


ಮುಂದೆ...
1 month ago
ಅರಮನೆಯಲ್ಲೊಬ್ಬ ಕುಡ್ಲದ ಕುವರ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅರಮನೆ ಧಾರಾವಾಹಿಯಲ್ಲಿ ಆರ್.ಜೆ ಅವಿನಾಶ್ ಪಾತ್ರಕ್ಕೆ ಜೀವ ತುಂಬುತ್ತಿರುವ ಕುಡ್ಲದ ಕುವರನ ಹೆಸರು ರಾಹುಲ್. ದೇವಿದಾಸ್ ಕಾಪಿಕ್ಕಾಡ್ ನೇತೃತ್ವದ, ಮಂಗಳೂರಿನ ಸುಪ್ರಸಿದ್ಧ ನಾಟಕ ಕಂಪೆನಿ ಚಾ ಪರ್ಕ ಕ್ಕೆ ಆಯ್ಕೆಯಾಗುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಾಹುಲ್ ಗೆ ಬಾಲ್ಯದಿಂದಲೂ ನಾಟಕದ ಬಗ್ಗೆ ವಿಶೇಷ ಒಲವು. ದೇಶ ಮತ್ತು ಹೊರದೇಶಗಳಲ್ಲಿ ನಾಟಕ ಪ್ರದರ್ಶನಗಳನ್ನು ನೀಡಿರುವ ಅವರು ಸಾಮಾಜಿಕ ಕಳಕಳಿಗಾಗಿ ಸಂದೇಶ ಸಾರುವಂತಹ ಬೀದಿ ನಾಟಕಗಳನ್ನು ....


ಮುಂದೆ...
1 month ago
ಸಿನಿಮಾ ಗುಂಗಿನಲ್ಲಿ ನೀಲಿ ಹುಡುಗ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಮುದ್ದು ಮುಖದ ತುಂಬಾ ಮುಗುಳುನಗೆ. ಕಿರುತೆರೆಯ ಲವರ್ ಬಾಯ್ ಶ್ರೀ ಮಹದೇವ್ ಅವರನ್ನು ಯಾರಿಗೆ ತಾನೆ ಗೊತ್ತಿಲ್ಲ? ಕಾಲೇಜು ಹುಡುಗಿಯರಿಂದ ಹಿಡಿದು ಮುದುಕಿಯರ ತನಕ ಎಲ್ಲರೂ ಇವರನ್ನು ಇಷ್ಟಪಡುವವರೇ. ಇವರ ನಟನೆ ನೋಡಿದವರಿಗೆ ತನಗೂ ಇಂಥ ಲವರ್ ಇದ್ದಿದ್ದರೆ, ತನಗೂ ಇಂಥ ಗಂಡ ಇದ್ದಿದ್ದರೆ, ಇಂಥ ಮಗ, ಅಳಿಯ ಇದ್ದಿದ್ದರೆ ಎಂಬ ಆಲೋಚನೆ ಬರುವುದು ಸಹಜ. ನಟನೆಯ ಮೂಲಕ ಅಷ್ಟರ ಮಟ್ಟಿಗೆ ಮೋಡಿ ಮಾಡಿಬಿಡುತ್ತಾರೆ ಶ್ರೀ ಮಹದೇವ್. ಶ್ರೀರಸ್ತು ಶುಭಮಸ್ತು ಧಾರಾವಾಹಿಯ “ಶ್ರೀ’ ಆಗಿ ಮನೆಮಾತಾಗಿರುವ ಮಹದೇವ್ ಬಣ್ಣದ ....


ಮುಂದೆ...
1 month ago
ಬೆಳ್ಳಿತೆರೆಯಿಂದ ಕಿರುತೆರೆಗೆ ಜಿಗಿದ ಅನುಷಾ ಹೆಗ್ಡೆ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎಂಬ ಮಾತಿದೆ. ಹಾಗೆ ಆರಿಸಲ್ಪಟ್ಟವರು ಕಲಾರಾಧನೆಯನ್ನು ಶ್ರದ್ಧೆಯಿಂದ ಮಾಡಿದರೆ ಕಲಾ ಸರಸ್ವತಿ ಒಲಿಯುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಪ್ರಸಕ್ತ ಉದಾಹರಣೆ ಅನುಷಾ ಹೆಗ್ಡೆ ಎಂದರೆ ತಪ್ಪಾಗಲಾರದು. ಮೂಲತಃ ಭರತನಾಟ್ಯ ಕಲಾವಿದೆಯಾಗಿರುವ ಅನುಷಾ ಹೆಗ್ಡೆ ಇಂದು ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ರಮಣ ....


ಮುಂದೆ...
1 month ago
ಆ್ಯಕ್ಟಿಂಗ್, ಫಿಟ್ನೆಸ್ ಮತ್ತು ಬೈಕ್ ರೇಸ್
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಗೃಹಲಕ್ಷ್ಮಿ ಧಾರಾವಾಹಿಯ ರಾಘವ್ ಪಾತ್ರದ ಮೂಲಕ ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ಈತನ ಹೆಸರು ಚಂದು ಬಿ ಗೌಡ. ಬಾಲ್ಯದಿಂದಲೂ ತಾನೊಬ್ಬ ನಟನಾಗಬೇಕು, ತೆರೆಯ ಮೇಲೆ ಮಿಂಚಬೇಕು ಎಂಬ ಮಹದಾಸೆ ಹೊಂದಿದ್ದರು ಚಂದು. ಒಂದು ಒಳ್ಳೆಯ ಅವಕಾಶಕ್ಕೆ ಹಾತೊರೆಯುತ್ತಿದ್ದಾಗ ಮುಂಗಾರುಮಳೆ ಕೃಷ್ಣ ಅವರ ಗೃಹಲಕ್ಷ್ಮಿ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಲು ಆಫರ್ ಬಂತು. ಗೃಹಲಕ್ಷ್ಮಿ ಧಾರವಾಹಿ ಸಂಪೂರ್ಣ ಕುಟುಂಬ ಪ್ರಧಾನವಾಗಿದ್ದು ಅದರಲ್ಲಿ ಚಂದು ಅವರು ರಾಘವ್ ಎಂಬ ಪ್ರಬುದ್ಧ ಪಾತ್ರದಲ್ಲಿ ....


ಮುಂದೆ...
1 month ago
ನಗು ಮೊಗದ ಸುಂದರ ಶಿಲ್ಪಾ!
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಫಿಟ್ ನೆಸ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ಶಿಲ್ಪಾ ರವಿ ಸದ್ಯ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ಈಕೆ ಸದ್ಯ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿಯಲ್ಲಿ ಮಯೂರಿಯಾಗಿ ಮಿಂಚುತ್ತಿದ್ದಾರೆ. ಮಯೂರಿಗೆ ನಾಯಕ ಅರ್ಜುನ್ ನ್ನು ಪ್ರೀತಿಸಿರುತ್ತಾಳೆ ಮತ್ತು ಅವನನ್ನೇ ಮದುವೆಯಾಗುವುದು ಎಂದು ನಿರ್ಧರಿಸಿರುತ್ತಾಳೆ. ಅರ್ಜುನ್ ನಾಯಕಿ ಅಮೃತಾಳನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಆದರೂ ಮಯೂರಿಗೆ ಅರ್ಜುನ್ ....


ಮುಂದೆ...
1 month ago
ಪೌರಾಣಿಕ ಪಾತ್ರಕ್ಕಾಗಿ ಹಂಬಲಿಸುತ್ತಿರುವ ರಕ್ಷಿತ್
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಕಿರುತೆರೆ ವೀಕ್ಷಕರ ಮನಗೆದ್ದ ಧಾರಾವಾಹಿಗಳ ಪೈಕಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟ ಗೌರಿ ಮದುವೆಯೂ ಒಂದು. ಪುಟ್ಟ ಗೌರಿಯ ಮಹೇಶ ಆಗಿ ಮನೆ ಮಾತಾಗಿರುವ ಈ ಹುಡುಗನ ಹೆಸರು ರಕ್ಷಿತ್. ಗೌರಿಯನ್ನುಬಾಲ್ಯದಲ್ಲಿ ವಿವಾಹವಾಗಿದ್ದ ಮಹೇಶ ಅಜ್ಜಮ್ಮನ ಆಸೆಯಂತೆ ಮೆಡಿಕಲ್ ಓದಲು ಪೇಟೆಗೆ ಹೋಗುತ್ತಾನೆ. ಅಲ್ಲಿ ಆತನ ಕ್ಲಾಸ್ ಮೇಟ್ ಹಿಮ ಜೊತೆಗೆ ಪ್ರೇಮವಾಗುತ್ತದೆ. ಮುಂದೆ ಆಕೆಯನ್ನು ಮದುವೆಯಾಗುವುದಕ್ಕಾಗಿ ಗೌರಿಯನ್ನು ಡೈವೋರ್ಸ್ ಕೊಡುವಂತೆ ಒತ್ತಾಯಿಸುತ್ತಾನೆ. ಎಲ್ಲಿದ್ದರೂ ತನ್ನ ಮಹೇಶ ....


ಮುಂದೆ...
1 month ago
ಭರವಸೆಯ ನಟಿ ಪ್ರಿಯಾಂಕ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಪೈಕಿ ಮುಂಚೂಣಿಯಲ್ಲಿರುವುದು ಅಗ್ನಿಸಾಕ್ಷಿ. ವಿಭಿನ್ನ ಶೈಲಿಯ ಕಥಾ ಹಂದರದಿಂದ ಸಾಕಷ್ಟು ವೀಕ್ಷರಕರನ್ನು ತನ್ನತ್ತ ಸೆಳೆದಿರುವ ಅಗ್ನಿಸಾಕ್ಷಿಯಲ್ಲಿ ನಾಯಕ ಸಿದ್ಧಾರ್ಥ್ ಮತ್ತು ನಾಯಕಿ ಸನ್ನಿಧಿಗೆ ಎಷ್ಟು ಮಹತ್ವವಿದೆಯೋ ವಿಲನ್ ಚಂದ್ರಿಕಾಳಿಗೂ ಅಷ್ಟೇ ಮಹತ್ವವಿದೆ. ಒಂದರ್ಥದಲ್ಲಿ ಚಂದ್ರಿಕಾ ಪಾತ್ರಧಾರಿ ಇಲ್ಲದಿದ್ದರೆ ಅಗ್ನಿಸಾಕ್ಷಿಗೆ ಕಳೆಯೇ ಇರುತ್ತಿರಲಿಲ್ಲವೇನೋ? ಮನೆ ಮಂದಿಯನ್ನು ದ್ವೇಷಿಸುತ್ತಾ, ತನ್ನ ಪ್ರಿಯಕರನೊಂದಿಗೆ ಸೇರಿ ಕುಟುಂಬವನ್ನು ಸರ್ವ ....


ಮುಂದೆ...
1 month ago
ಈ ಸಿಂಧೂ ನದಿಯಲ್ಲ, ಸಾಗರಿ!
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟ ಗೌರಿ ಮದುವೆ ಧಾರಾವಾಹಿಯ ಸಾಗರಿಯನ್ನು ಯಾರಿಗೆ ತಾನೇ ಗೊತ್ತಿಲ್ಲ? ಗೌರಿಗೆ ಸದಾ ಕಾಲ ತೊಂದರೆ ಕೊಡುತ್ತಾ, ಮಹೇಶನಿಂದ ಗೌರಿಯನ್ನು ದೂರ ಮಾಡಿ ತನ್ನ ಅಣ್ಣನ ಮಗಳು ಸ್ವೀಟಿ ಆಲಿಯಾಸ್ ಹಿಮ ಗೆ ಅವನೊಂದಿಗೆ ಮದುವೆ ಮಾಡಿಸುವ ಉದ್ದೇಶದಿಂದ ಫಾರಿನ್ ನಿಂದ ಬಂದ ಸಾಗರಿ ಎಂದರೆ ಅಣ್ಣ ಧರ್ಮನಿಗೆ ಪ್ರೀತಿ. ತಂಗಿ ಹೇಳಿದಳೆಂದರೆ ಮುಗಿದೇ ಹೋಯಿತು. ಅದರಲ್ಲಿ ಬೇರೆ ಮಾತೇ ಇಲ್ಲ. ಅಣ್ಣನ ಕುತಂತ್ರಗಳಿಗೆ ಸಾಗರಿ ಸಹಕಾರ ನೀಡುವುದಲ್ಲದೇ ಎಷ್ಟೋ ಬಾರಿ ....


ಮುಂದೆ...
1 month ago
ಚರಣದಾಸಿಯ ಕಾವ್ಯ ಕಥನ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಚರಣದಾಸಿಯ ದೀಪಾ ಎಂದೇ ಚಿರಪರಿಚಿತರಾಗಿರುವ ಈಕೆಯ ಹೆಸರು ಕಾವ್ಯಾ ಮಹದೇವ್. ಅಮೋಘ ಅಭಿನಯದಿಂದ ಕಿರುತೆರೆ ವೀಕ್ಷಕರ ಮನದಲ್ಲಿ ಸ್ಥಾನ ಪಡೆದಿರುವ ಕಾವ್ಯ ಸದ್ಯ ಇನ್ನೊಂದು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ‘ಕಾಂಚನಾ” ಎಂಬ ನೆಗೆಟಿವ್ ರೋಲ್ ನಲ್ಲಿ ಮಿಂಚುತ್ತಿದ್ದಾರೆ. ಕಾಂಚನಾ ಅತೃಪ್ತ ಆತ್ಮ. ಸತ್ತು ಹೋಗಿರುವ ಕಾಂಚನಾ ತನ್ನ ಪ್ರೀತಿಯನ್ನು ಪಡೆಯಲು ದೆವ್ವದ ರೂಪದಲ್ಲಿ ಮರಳಿ ಬಂದಿದ್ದಾಳೆ. ....


ಮುಂದೆ...
1 month ago
ವಿನಯವಂತ ಮಹಾದೇವ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಸುವರ್ಣವಾಹಿನಿಯ ಹರ ಹರ ಮಹಾದೇವ ಧಾರಾವಾಹಿಯ ಮಹದೇವನಾಗಿ ವೀಕ್ಷಕರ ಮನ ಗೆದ್ದಿರುವ ಇವರ ಹೆಸರು ವಿನಯ್ ಗೌಡ. ಚಿಟ್ಟೆಹೆಜ್ಜೆ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿವ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ವಿನಯ್ ಅವರು ಇಂದು ಮಹಾದೇವ ನಾಗಿಯೇ ಚಿರಪರಿಚಿತ. ಇತ್ತೀಚೆಗೆ ನಡೆದ ಸುವರ್ಣ ಪರಿವಾರ ಅವಾರ್ಡ್ಸ್ ನಲ್ಲಿ ಜನ ಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿರುವುದು ಮಹಾದೇವ ಪಾತ್ರ ಅದೆಷ್ಟರ ಮಟ್ಟಿಗೆ ವೀಕ್ಷಕರಿಗೆ ಪ್ರಿಯವಾಗಿದೆ ಎಂಬುದನ್ನು ತಿಳಿಸುತ್ತದೆ. ಚಿಟ್ಟೆ ಹೆಜ್ಜೆಯ ನಂತರ ಸಿ.ಐ.ಡಿ ....


ಮುಂದೆ...
1 month ago
ರಂಗಭೂಮಿ ತನ್ನ ತವರು ಮನೆ ಎಂದ ಚೆಂದಳ್ಳಿ ಚೆಲುವೆ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಮಹಾನಗರಿಯ ಚೆಲುವೆ ವರ್ಷಿತಾಗೆ ನಟನೆಯೇ ಜೀವಾಳ. ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು ಇದ್ದುದ್ದರಿಂದ ಕಾಲೇಜು ದಿನಗಳಲ್ಲೇ ರಂಗ ಸೌರಭ ರಂಗ ತಂಡ ಸೇರಿಕೊಂಡರು. ರಾಜೇಂದ್ರ ಆಕೆಗೆ ನಟನೆ ಕರಗತವಾಯಿತು. ಮುಂದೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಬಂದಾಗ ಬಂದ ಅವಕಾಶವನ್ನು ಅಲ್ಲಗಳೆಯದೇ ಬಾಚಿ ತಬ್ಬಿಕೊಂಡರು. ಇದೀಗ ಕಲರ್ಸ್ ಕನ್ನಡ ವಾಹಿನಿಯ ಮನೆದೇವ್ರು ಧಾರಾವಾಹಿಯ ಅನು ಪಾತ್ರಧಾರಿಯಾಗಿ ನಟಿಸುತ್ತಿರುವ ವರ್ಷಿತಾ ಹೊಸದಾಗಿ ಕಿರುತೆರೆಗೆ ಪರಿಚಯವಾಗಿದ್ದರೂ ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮನದಲ್ಲಿ ....


ಮುಂದೆ...
1 month ago
ಪಾತ್ರದಲ್ಲಿ ‘ಧನ್ಯ’ತೆ ಕಂಡ ದೀಪಿಕಾ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಮುಗ್ಧ ಅಭಿನಯದಿಂದ ಕರ್ನಾಟಕದಾದ್ಯಂತ ಅಭಿಮಾನಿಗಳನ್ನು ಗಳಿಸಿರುವ ಈ ಚೆಲುವೆಯ ಹೆಸರು ದೀಪಿಕಾ. ಆದರೆ ದೀಪಿಕಾ ಎಂದ ಕೂಡಲೇ ಯಾರಿರಬಹುದು ಎಂಬ ಕುತೂಹಲ ಎಲ್ಲರಿಗೂ ಬರಬಹುದು. ಕಾರಣ ಇಷ್ಟೇ. ಇಂದು ಆಕೆ ಧನ್ಯಾ ಎಂದೇ ಪರಿಚಿತ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕುಲವಧು ಧಾರಾವಾಹಿಯಲ್ಲಿ ಧನ್ಯಾ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ಬೆಡಗಿಯ ನಟನೆಯನ್ನು ಇಷ್ಟಪಡದವರಿಲ್ಲ. ತನಗೂ ಧನ್ಯಾಳಂಥ ಮಗಳು ಬೇಕು, ಅವಳಂಥ ಸೊಸೆ ಬೇಕು, ಹೆಂಡತಿ ಬೇಕು, ತಂಗಿ ಬೇಕು ಎಂದು ಅನಿಸುವಷ್ಟರ ಮಟ್ಟಿಗೆ ಧನ್ಯಾ ....


ಮುಂದೆ...
1 month ago
ಜಯ್ ಎಂಬ ಸೂರ್ಯೋದಯ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಕರ್ನಾಟಕದ ಕಾಶ್ಮೀರ ಎಂದೇ ಹೆಸರುವಾಸಿಯಾಗಿರುವ ಕಡಲನಗರಿ ಕಾರವಾರದ ಈ ಹುಡುಗನ ಹೆಸರು ಜಯ್ ಡಿಸೋಜಾ. ಯಾರಪ್ಪ ಎಂದು ಯೋಚಿಸುತ್ತಿದ್ದೀರಾ? ಯಾಕೆಂದರೆ ಜಯ್ ಡಿಸೋಜಾ ಹೆಸರು ಹೊಸತೆನಿಸುತ್ತದೆ. ಇಂದು ಆತ ಸೂರ್ಯ ಎಂದೇ ಪರಿಚಿತ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನೆದೇವ್ರು ಧಾರಾವಾಹಿಯಲ್ಲಿ ನಾಯಕ ಸೂರ್ಯ ಆಗಿ ಮನೆಮಾತಾಗಿದ್ದಾರೆ. ತನ್ನ ಅಭಿನಯ ಕೌಶಲ್ಯದಿಂದ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದಿದ್ದಾರೆ. ಮುಗ್ಧ ಹುಡುಗ ಸೂರ್ಯ ಅಮ್ಮನ ಮುದ್ದಿನ ಮಗ. ತಂಗಿಯರೆಂದರೆ ಅವನಿಗೆ ....


ಮುಂದೆ...
2 months ago
ಬಣ್ಣದ ಲೋಕದ ಸ್ಕಂದ ಪುರಾಣ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಮುದ್ದು ಮುಖದ ತುಂಬಾ ಸದಾ ಮುಗುಳುನಗು ಹೊಂದಿರುವ ಈ ಚಾಕಲೇಟ್ ಬಾಯ್ ಹೆಸರು ಸ್ಕಂದ ಅಶೋಕ್. ಈಗಾಗಲೇ ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ಚಿಕ್ಕಮಗಳೂರಿನ ಚೆಲುವ ಇಂದು ರಮಣನೆಂದೇ ಚಿರಪರಿಚಿತ. ಕಲರ್ಸ್ ಕನ್ನಡ ವಾಹಿನಿಯ ರಾಧಾ ರಮಣ ಧಾರಾವಾಹಿಯ ರಮಣನಾಗಿ ಗಮನ ಸೆಳೆದಿರುವ ಸ್ಕಂದ ಅಶೋಕ್ ಸೀರಿಯಲ್ ಪ್ರಿಯರ ಮನದಲ್ಲಿ ಸ್ಥಾನ ಪಡೆದಾಗಿದೆ. ಬ್ಯುಸಿನೆಸ್ ಮ್ಯಾನ್ ಆಗಿರುವ ರಮಣ ಮಿಸ್ಟರ್ ಪರ್ಫೆಕ್ಟ್ ಎಂದು ಪ್ರಖ್ಯಾತ. ಅರಳು ಹುರಿದಂತೆ ಇಂಗ್ಲೀಷ್ ಭಾಷೆ ಮಾತನಾಡುವ ರಮಣನಿಗೆ ಎಲ್ಲವೂ ....


ಮುಂದೆ...
2 months ago
ಕಿರುತೆರೆಯ ಮನ ಮೆಚ್ಚುವ ಸೊಸೆ ರಮಣನ ಆರಾಧನಾ....
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಈಕೆ ಕಲರ್ಸ್ ಕನ್ನಡ ವಾಹಿನಿಯ ಮನ ಮೆಚ್ಚುವ ರಾಧೆ. ರಮಣನ ಮನೆ ಮನ ಬೆಳಗಲು ಬಂದ ಗೃಹಲಕ್ಷ್ಮಿ. ರಾಧಾ ರಮಣ ಧಾರಾವಾಹಿಯ ಆರಾಧನಾ ಪಾತ್ರದಲ್ಲಿ ಮಿಂಚುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಶ್ವೇತಾ ಪ್ರಸಾದ್.  ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಜಾಹ್ನವಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ವೇತಾಗೆ ರಾಧಾ ರಮಣ ಎರಡನೇ ಧಾರಾವಾಹಿ. ಮಿಡ್ಲ್ ಕ್ಲಾಸ್ ಕುಟುಂಬವಾದರೂ ಓದಿಗೇನು ಕೊರತೆಯಿರುವುದಿಲ್ಲ. ಆರಾಧನಾ ಟೀಚರ್ ಆಗಿ ಒಂದಷ್ಟು ಮಕ್ಕಳಿಗೆ ಒಳ್ಳೆಯದು ಮಾಡಬೇಕೆಂದು ತಾತನ ಕನಸು. ತಾತನ ಕನಸನ್ನು ನನಸು ....


ಮುಂದೆ...
2 months ago
ಚಂದನವನದಲ್ಲಿ ಕುಡ್ಲದ ಸುಂದರಿ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಕಡಲತಡಿಯ ಸಾಕಷ್ಟು ಪ್ರತಿಭೆಗಳು ಇಂದು ಕಿರುತೆರೆ, ಹಿರಿತೆರೆ, ಮಾಡೆಲಿಂಗ್ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ವಿಶಿಷ್ಟ ಪ್ರತಿಭೆಯಿಂದ ಎಲ್ಲರ ಮನ ಸೆಳೆಯುತ್ತಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರ್ಪಡೆಯಾದವರು ಮಂಗಳೂರು ಬೆಡಗಿ ಅಮಿತಾ ಕುಲಾಲ್ .ಚಿಕ್ಕಂದಿನಿಂದಲೂ ನೃತ್ಯದ ಬಗ್ಗೆ ಆಸಕ್ತಿ ಹೊಂದಿದ ಅಮಿತಾ ಮೊದಲ ಬಾರಿ ನೃತ್ಯ ಮಾಡಿದಾಗ ಐದರ ಹರೆಯ. ಭರತನಾಟ್ಯ ಕಲಿತಿರುವ ಅಮಿತಾರಿಗೆ ಎಳವೆಯಲ್ಲೇ ಮಾಡೆಲಿಂಗ್ ನತ್ತ ವಿಶೇಷ ಆಸಕ್ತಿ. ಫ್ಯಾಷನ್ ಗೆ ಸಂಬಂಧಿಸಿದ ಟಿವಿ ಶೋ ಗಳನ್ನು ....


ಮುಂದೆ...
2 months ago
ಸಾಫ್ಟ್ವೇರ್ ಗೆ ಬಾಯ್, ನಟನೆಗೆ ಹಾಯ್
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ರಶ್ಮಿ ಪ್ರಭಾಕರ್ ಹೆಸರು ಕೇಳಿದ್ದೀರಾ ಎಂದು ಕೇಳಿದರೆ ಒಂದು ಕ್ಷಣ ಯಾರಪ್ಪ ಎಂದು ನೀವು ಆಲೋಚನೆ ಮಾಡಿಯೇ ಮಾಡುತ್ತೀರಿ. ಅದೇ ಲಚ್ಚಿ ಗೊತ್ತಾ ಎಂದು ಕೇಳಿದರೆ ಸಾಕು, ಅವಳಾ, ಅವಳನ್ನು ಯಾರಿಗೆ ತಾನೇ ಗೊತ್ತಿಲ್ಲ? ತುಂಬಾ ಮುಗ್ದೆ, ಒಳ್ಳೆಯ ಹುಡುಗಿ, ಅಕ್ಕನನ್ನು ಪ್ರೀತಿಸುವ ಮುದ್ದು ತಂಗಿ ಹೀಗೆ ಲಚ್ಚಿಯ ಗುಣಗಾನ ಮಾಡದವರಿಲ್ಲ. ಅಷ್ಟರ ಮಟ್ಟಿಗೆ ಮೋಡಿ ಮಾಡಿಬಿಟ್ಟಿದ್ದಾಳೆ ಲಚ್ಚಿ. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಲಚ್ಚಿ ಪಾತ್ರಧಾರಿ ಕವಿತಾ ಬದಲಾದಾಗ ಆ ಪಾತ್ರಕ್ಕೆ ಬಂದ ಮುದ್ದು ಮುಖದ ಬೆಡಗಿಯ ಹೆಸರು ....


ಮುಂದೆ...
2 months ago
ಕಿರುತೆರೆಯ ‘ಧ್ರುವ’ ನಕ್ಷತ್ರ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಅಗ್ನಿಸಾಕ್ಷಿ! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನ ಮೆಚ್ಚಿದ ಧಾರಾವಾಹಿ ಅಗ್ನಿಸಾಕ್ಷಿಯನ್ನು ಇಷ್ಟ ಪಡದವರೇ ಇಲ್ಲ. ಪ್ರತಿ ಪಾತ್ರವೂ ತನ್ನದೇ ಆದ ಅಭಿಮಾನಿಗಳನ್ನು ಒಳಗೊಂಡಿದೆ ಎಂಬುದು ಸುಳ್ಳಲ್ಲ. ಇಂತಿಪ್ಪ ಧಾರಾವಾಹಿಯ ‘ಅಖಿಲ್’ ಪಾತ್ರಧಾರಿಯಾಗಿ ಮಿಂಚಿ ಕಿರುತೆರೆ ವೀಕ್ಷಕರ ಮನ ಗೆದ್ದಿರುವ ರಾಜೇಶ್ ಧ್ರುವ ಮೂಲತ ಉತ್ತರ ಕನ್ನಡದ ಶಿರಸಿಯವರು. ಬದುಕು ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನಾ ರಂಗದಲ್ಲಿ ಕಾಣಿಸಿಕೊಂಡ ರಾಜೇಶ್ ಮುಂದೆ ಆಕಾಶದೀಪ, ಮಿಲನ, ....


ಮುಂದೆ...
2 months ago
ಕಿರುತೆರೆಯ ಚೆಂದುಳ್ಳಿ ಚೆಲುವೆ / ಬಣ್ಣದ ಲೋಕದ ಚೆಂದುಳ್ಳಿ ಚೆಲುವೆಗೆ ಅಕ್ಕನೇ ರೋಲ್ ಮಾಡೆಲ್ !
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಸಮೃದ್ಧಿ ರಾಮ್... ಸೀರಿಯಲ್ ಪ್ರಿಯರಿಗೆ ಪರಿಚಿತವಾದ ಮುಖ. ಒಂದೂರಲ್ಲಿ ರಾಜ ರಾಣಿಯ ಶಿವಾನಿ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತವಾದ ಈ ಬೆಡಗಿ ನಟಿ ಕಾರುಣ್ಯಾ ರಾಮ್ ನ ಮುದ್ದು ತಂಗಿ. ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನೆದೇವ್ರು ಧಾರಾವಾಹಿಯಲ್ಲಿ ಪ್ರೀತಿ ಎಂಬ ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಲೀಡ್ ನೆಗೆಟಿವ್ ರೋಲ್ ನ್ನು ನಿಭಾಯಿಸುತ್ತಿರುವ ಸಮೃದ್ಧಿ ರಾಮ್ ಗೆ ಈ ಕ್ಷೇತ್ರ ಹೊಸದಲ್ಲ. ಅಕ್ಕನ ಜೊತೆ ಶೂಟಿಂಗ್ ಗಳಿಗೆ ತೆರಳುತ್ತಿದ್ದ ಆಕೆಗೆ ನೀವು ಆ್ಯಕ್ಟಿಂಗ್ ....


ಮುಂದೆ...
2 months ago
ಲವಲವಿಕೆಯ ರಾಕೇಶನ ಕಿರುತೆರೆ ಯಾನ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಎಲ್ಲರನ್ನೂ ತನ್ನತ್ತ ಕೈ ಬೀಸಿ ಕರೆಯುವ ನಟನಾ ಜಗತ್ತಿನಲ್ಲಿ ಇಂದು ಹೊಸ ಹೊಸ ಮುಖಗಳಿಗೇನು ಕೊರತೆ ಇಲ್ಲ. ತಮ್ಮದೇ ಆದ ವಿಭಿನ್ನ ನಟನಾ ಶೈಲಿಯಿಂದ ಪ್ರೇಕ್ಷಕರ ಮನದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವುದು ಪ್ರತಿಒಬ್ಬ ಕಲಾವಿದನ ಕನಸು. ಅಂತಹ ಕನಸನ್ನು ನನಸು ಮಾಡ ಹೊರಟಿರುವ ಈ ಪ್ರತಿಭೆಯ ಹೆಸರು ರಾಕೇಶ್ ಮಯ್ಯ. ಬಿ. ಸುರೇಶ್ ನಿರ್ದೇಶನದ ಪ್ರೀತಿ ಪ್ರೇಮ ದಾರಾವಾಹಿಯಲ್ಲಿ ಬಣ್ಣ ಹಚ್ಚುವುದರ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ರಾಕೇಶ್ ಮಯ್ಯ ಮುಂದೆ ವಿನು ಬಳಂಜ ನಿರ್ದೇಶನದ ಲವ್ ಲವಿಕೆ ....


ಮುಂದೆ...
2 months ago
ನೆಗೆಟಿವ್ ರೋಲ್ ಸಾಕಯ್ತು ಎಂದ ಚೆಂದುಳ್ಳಿ ಚೆಲುವೆ / ಕಿರುತೆರೆಯ ಬ್ಯೂಟಿಫುಲ್ ವಿಲನ್ ಅನಿಕಾ ಸಿಂಧ್ಯಾ / ಕಿರುತೆರೆಯ ಸಿಂಧ್ಯಾ ರಾಗ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲೇಡಿ ವಿಲನ್ ಕುಮುದಾ ಆಗಿ ಮಿಂಚುತ್ತಿರುವ ಈ ಚೆಲುವೆಯ ಹೆಸರು ಅನಿಕಾ ಸಿಂಧ್ಯಾ. ಬಾಲ್ಯದಲ್ಲಿ ತಾನು ಡಾಕ್ಟರ್ ಆಗಬೇಕೆಂದು ಅಂದುಕೊಂಡಿದ್ದ ಅನಿಕಾ ಆಕಸ್ಮಿಕವಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟವರು. ನಿರ್ದೇಶಕ ಚಂದ್ರಶೇಖರ್ ಶ್ರೀವಾಸ್ತವ್ ಅವರ ಟೆಲಿ ಚಿತ್ರವೊಂದಕ್ಕೆ ಬಣ್ಣ ಹಚ್ಚುವುದರ ಮೂಲಕ ನಟನಾ ಲೋಕದಲ್ಲಿ ಕಾಣಿಸಿಕೊಂಡ ಅವರು ಇಂದು ನಟನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ. ಹಾಗೆ ಆರಂಭವಾದ ಅವರ ....


ಮುಂದೆ...
2 months ago
ಭೃಂಗದ ಬೆನ್ನೇರಿ ನಾಲ್ಕುತಂತಿ ಮೀಟಿದ ಸುಜಾತಾ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಸುಜಾತಾ ಅಕ್ಷಯಾ ಎಂದರೆ ಗೊತ್ತಿಲ್ಲದವರಾರು ಹೇಳಿ? ನಿರೂಪಣೆ, ರೇಡಿಯೋ ಜಾಕಿ, ಸಿನಿಮಾ, ಕಿರುತೆರೆ ಕಲಾವಿದೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಸುಜಾತಾ ಸದ್ಯಕ್ಕೆ ಲೇಡಿ ವಿಲನ್ ಆಗಿ ಬದಲಾಗಿದ್ದಾರೆ. ಹೌದು.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ರಮಣ ಧಾರಾವಾಹಿಯಲ್ಲಿ ಸಿತಾರ ದೇವಿ ಎಂಬ ನೆಗೆಟಿವ್ ಶೇಡ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಹಿಂದೆ ಸಾಕಷ್ಟು ಪಾಸಿಟಿವ್ ಪಾತ್ರ ಮತ್ತು ಮುಗ್ಧ ಪಾತ್ರಗಳ ಮೋಲಕವೇ ಜನರಿಗೆ ಚಿರಪರಿಚಿತವಾಗಿದ್ದ ಸುಜಾತಾ ....


ಮುಂದೆ...
7 months ago
ಯುವಕರನ್ನು ಹುಚ್ಚೆಬ್ಬಿಸಿರುವ ಯೂಟ್ಯೂಬ್ ಕೋಗಿಲೆ ವಿದಿಶಾ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಈ ಹುಡುಗೀನ ಎಲ್ಲೋ ನೋಡ್ದಂಗಿದೆಯಲ್ಲಾ ಅಂತ ಯೋಚಿಸ್ತಿದ್ದೀರಾ. ಫೇಸ್‌ಬುಕ್ಕಲ್ಲಿ ಹಾಡ್ತಾ ಇರೋ ಕೋಗಿಲೆ ಇದು. ಈಗಾಗಲೆ ಹಾಡಿಹಾಡಿ ಜನಪ್ರಿಯವಾಗಿದ್ದಾರೆ. ಮ್ಯೂಸಿಕ್ ಇಲ್ದೆ ಇವರು ಹಾಡಿರುವ ಹಾಡಿನ ವಿಡಿಯೋಗಳು ಫೇಸ್‌ಬುಕ್ಕಲ್ಲಿ ಸೂಪರ್ ಹಿಟ್ ಆಗಿವೆ.ಒಂದೊಂದ್ ವಿಡಿಯೋನ ಏನಿಲ್ಲಾ ಅಂದ್ರೂ 50 ಸಾವಿರಕ್ಕೂ ಹೆಚ್ಚು ಜನ ನೋಡಿದ್ದಾರೆ. ಈಕೆಯ ಕಂಠಕ್ಕೆ ತಲೆದೂಗಿದ್ದಾರೆ. ಇಷ್ಟಕ್ಕೂ ಈ ಹಾಡು ಹಕ್ಕಿ ಯಾವುದು ಅಂತೀರಾ? ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ವಿದಿಶಾ ಓದಿದ್ದು ....


ಮುಂದೆ...
7 months ago
ಯೋಗೇಶ್ ಅಮಲ್ಕರ್ – ಸಂಗೀತಕಾರ
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 1

ಇವರ ಮೊದಲ ಆಲ್ಬಂ (ಶುಕ್ರಿಯ ಝಿಂದಗಿ)  ಫೆಬ್ರವರಿ 14, 2016ರಲ್ಲಿ ಬಿಡುಗಡೆಯಾದಾಗಲೇ ನೂರಾರು ಜನರನ್ನ ಅದು ಸೆಳೀತು. ಉದಯ ಮ್ಯೂಸಿಕ್ ಚಾನಲ್ ನ ”SOME GEETHA” ಕಾರ್ಯಕ್ರಮ ಇವರ ಪ್ರತಿಭಾ ಪ್ರದರ್ಶನಕ್ಕೆ ಮತ್ತೊಂದು ವೇದಿಕೆ ಅಂತ ಹೇಳ್ಬಹುದು. ಆಗ ಇವರ ಜೊತೆಗೆ ಉದಯೋನ್ಮುಖ ಕಲಾವಿದರಾದ ಪೃಥ್ವಿ, ಅಮೃತಾ ಮತ್ತು ಕಿರಣ್ ಎಸ್ ಇದ್ದರು. ಇದೊಂದು ರೀತಿ ಮರೆಯಲಾಗದ ಅನುಭವ ಅಂತ ನೆನಪಿಸಿಕೊಳ್ತಾರೆ ಯೋಗೇಶ್.ಆರಂಭದಿಂದಲೂ ಈ ರೀತಿಯ ಹೊಸ ಪ್ರತಿಭೆಗಳನ್ನು ಬಾಲ್ಕನಿ ....


ಮುಂದೆ...
7 months ago
ಸಂಗೀತ ಮಳೆ ಸುರಿಸುವ – ಪೃಥ್ವಿ ಸುದರ್ಶನ್
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

"ಬಾಲ್ಕನಿ ನ್ಯೂಸ್" ವೆಬ್ ಸೈಟ್ ಹೊಸ ಪತ್ರಿಭೆಗಳನ್ನು ಗುರುತಿಸಿ ಅವರನ್ನು ಜನರ ಮುಂದೆ ತರುವ ಪ್ರಯತ್ನದಲ್ಲಿದೆ. ಸಿನಿಮಾ ಹಾಗು ಇನ್ನಿತರ ಎಂಟರ್ ಟೈನ್ ಮೆಂಟ್ ವಿಭಾಗದಲ್ಲಿನ ಹೊಸ ಪ್ರತಿಭೆಗಳನ್ನು ಗುರುತಿಸುವ ಒಂದು  ಚಿಕ್ಕ ಪ್ರಯತ್ನ ನಮ್ಮದಾಗಿದೆ. ಆ ಸಾಲಿಗೆ ಸೇರಲಿದ್ದಾರೆ ಪೃಥ್ವಿ ಸುದರ್ಶನ್.  ಮೈಸೂರಿನ ಮೂಲದವರಾದ ಪೃಥ್ವಿ ಒಬ್ಬ ಪ್ರತಿಭಾನ್ವಿತ ಸಂಗೀತಗಾರ್ತಿ. ಇವ್ರು voice of Mysore ಅಂತಾನೇ ಹೇಳಬಹುದು. ಈಗ ಪ್ರೊಫೆಷನಲ್ ಸಿಂಗರ್ ಆದ ಪೃಥ್ವಿ ....


ಮುಂದೆ...
1 year ago
ಮೈಸೂರಿನ ನವ ಪ್ರತಿಭೆ ವೆಂಕಟೇಶ್ ಕುಟಿನೀಕರ್
ಬಾಲ್ಕನಿ ಸ್ಪೆಷಲ್/ ಉದಯೋನ್ಮುಖರು 0

ಮನರಂಜನೆ ಮತ್ತು ಮಾಧ್ಯಮ ಲೋಕದಲ್ಲಿ ಚಿಗುರುತ್ತಿರುವ ಹೊಸ ಪ್ರತಿಭೆಗಳನ್ನು ”ಬಾಲ್ಕನಿ ನ್ಯೂಸ್” ಸದಾ ಪ್ರೋತ್ಸಾಹಿಸುತ್ತಾ ಅವರ ಬೆನ್ನುತಟ್ಟುತ್ತಾ ಬಂದಿದೆ. ಎಲೆಮರೆಕಾಯಿಗಳಂತಿರುವ ಎಷ್ಟೋ ಪ್ರತಿಭೆಗಳಿಗೆ ವೇದಿಕೆಯಾಗಿರುವ ಬಾಲ್ಕನಿ ನ್ಯೂಸ್ ನ ಈ ಸಲದ ಉದಯೋನ್ಮುಖ ತಾರೆ ಮೈಸೂರಿನ ವೆಂಕಟೇಶ್ ಕುಟಿನೀಕರ್.ಚಿಕ್ಕಂದಿನಿಂದಲೇ ವೆಂಕಟೇಶ್ ಅವರಿಗೆ ಬಣ್ಣದ ಜಗತ್ತು ಮತ್ತು ಸಂಗೀತ ಎಂದರೆ ಉತ್ಕಟ ಪ್ರೀತಿ. ಏಳನೇ ತರಗತಿಯಲ್ಲಿರುವಾಗಲೇ ವಿಡಿಯೋ ....


ಮುಂದೆ...

Balkani News Polls

ನಿಮ್ಮ ಇಷ್ಟ ಅದ ಚಿತ್ರಯಾವುದು .?
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್

A PHP Error was encountered

Severity: Notice

Message: Undefined variable: newpost

Filename: views/polls_page.php

Line Number: 286