ಉದಯೋನ್ಮುಖರು

ನಟನಾ ಲೋಕದಲ್ಲಿ ಸುಮಂತ್ ಶೈನಿಂಗ್
0

ಆರ್ ಜೆ, ಗಾಯಕ, ನಟ ಇದು ಸುಮಂತ್ ಭಟ್ ಅವರ ಸಂಕ್ಷಿಪ್ತ ಪರಿಚಯ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿ ಹರ ಹರ ಮಹಾದೇವ ವೀಕ್ಷಕರಿಗೆ ಪರಿಚಿತರು ಈ ಸುಮಂತ್ ಭಟ್. ಮನೋಜ್ಞ ಅಭಿನಯದಿಂದ ನಂದಿಯ ಪಾತ್ರಕ್ಕೆ ಜೀವ ತುಂಬಿದ್ದರು. ಭಕ್ತಿಪ್ರಧಾನವಾದ ಪಾತ್ರದ ಮೂಲಕ ಮನೆ ಮನ ಗೆದ್ದಿರುವ ಸುಮಂತ್ ಭಟ್ ಗೆ ಇದು ಎರಡನೇ ಧಾರಾವಾಹೊ. ವಿನು ಬಳಂಜ ನಿರ್ದೇಶನದ ಲವ್ ಲವಿಕೆ ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರುವ ಸುಮಂತ್ ಲವ್ ಲವಿಕೆಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಆ್ಯಕ್ಟರ್ ಆಗಬೇಕು ಎನ್ನುವ ಕನಸು, ಅದಕ್ಕೆ ಪಟ್ಟ ಶ್ರಮ ಇವತ್ತು ನನಗೆ ಅವಕಾಶಗಳನ್ನು ಕೊಡಿಸುತ್ತಿದೆ ಎಂದು ಸಂತೋಷದಿಂದ ಹೇಳುವ ಸುಮಂತ್ ಭಟ್ ಮೊದಲು ಗುರುತಿಸಿಕೊಂಡದ್ದು ಆರ್ ಜೆ ಆಗಿ. ಪದವಿ ಮುಗಿದ ಸಂದರ್ಭದಲ್ಲಿ ಫ್ರೆಂಡ್ ಒತ್ತಾಯಿಸಿದ ಎನ್ನುವ ಕಾರಣಕ್ಕೆ ವಾಯ್ಸ್ ಟೆಸ್ಟ್ ಗೆ ಹೋಗಿದ್ದ ಸುಮಂತ್ ಗೆ ತಾನು ಆರ್ ಜೆ ಆಗಬೇಕು ಎನ್ನುವ ಆಸೆ ಇರಲಿಲ್ಲ. ಅದು ಅವರಿಗೆ ಬಯಸದೇ ಬಂದ ಭಾಗ್ಯ. ಮುಂದೆ ಎಸ್ ಎಫ್ಎಂ ಮತ್ತು ಬಿಗ್ ಎಫ್ಎಂ ಗಳಲ್ಲಿ ಆರ್ ಜೆ ಆಗಿ ಕೇಳುಗರ ಮನಸ್ಸಿಗೆ ಲಗ್ಗೆ ಇಟ್ಟ ಇವರು ಝೀ ಕನ್ನಡ ಮತ್ತು ಸುವರ್ಣ ವಾಹಿನಿಯಲ್ಲಿ ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಕಲರ್ಸ್ ಸೂಪರ್ ವಾಹಿನಿಗೆ ವಾಯ್ಸ್ ಓವರ್ ನೀಡುತ್ತಿದ್ದಾರೆ. 

ನಟನಾ ಲೋಕದಲ್ಲಿ ಅಂಬೆಗಾಲಿಡುತ್ತಿರುವ ಸುಮಂತ್ ಬಾಲಿವುಡ್ ನ ಪ್ರಸಿದ್ಧ ನಟಿ ರೇಖಾ ರಾವ್ ಅವರ ಬಳಿಯಿಂದ ನಟನೆಯ ಬಗೆಗೆ ತಬೇತಿಗಳನ್ನು ಪಡೆದಿರುತ್ತಾರೆ. ಜೊತೆಗೆ ಅವರೊಬ್ಬ ಕಂಠದಾನ ಕಲಾವಿದರೂ ಹೌದು. ಹೊಸದಾಗಿ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿರುವ ಕಲಾವಿದರಿಗೆ ಕಂಠದಾನ ಮಾಡಿದ್ದಾರೆ. 

ಹಿನ್ನಲೆ ಗಾಯಕರಾಗಿರುವ ಸುಮಂತ್ ಗುಬ್ಬಿ ಸಿನಿಮಾದ ಕನ್ ಫ್ಯೂಶನ್ ಹಾಡಿಗೆ ದನಿಯಾಗಿದ್ದಾರೆ. ರಾಜಧಾನಿ ಸಿನಿಮಾದ ಟೈಟು ಟೈಟು ಹಾಡು ಹಾಡಿರುವ ಸುಮಂತ್ ಕೋಟೆ ಸಿನಿಮಾಕ್ಕೆ ರಘು ದೀಕ್ಷಿತ್ ಕಂಪೋಸ್ ಮಾಡಿರುವ ಹಾಡಿಗೆ ಇಂಗ್ಲೀಷ್ ರಾಪ್ ಮಾಡಿರುತ್ತಾರೆ. ಅರ್ಜುನ್ ಜನ್ಯ ಅವರು ನನಗೆ ಮೊದಲ ಬಾರಿ ಅವಕಾಶ ಕೊಟ್ಟರು ಎಂದು ಸಂತಸದಿಂದ ಹೇಳುವ ಸುಮಂತ್ ಭಟ್ ಈಗಲೂ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹಾಡಲೂ ರೆಡಿಯಾಗಿದ್ದಾರೆ. 

ಈಗಾಗಲೇ ವಿಲನ್, ಭಕ್ತಿ ಪ್ರಧಾನ, ಜವಬ್ದಾರಿಯುತ ಮಗ, ಒಳ್ಳೆಯ ಅಣ್ಣ ಹೀಗೆ ನಾನಾ ನಮೂನೆಯ ಪಾತ್ರಗಳಲ್ಲಿ ನಟಿಸಿರುವ ಸುಮಂತ್ ಗೆ ಸಿನಿಮಾದಲ್ಲಿ ಒಳ್ಳೆಯ ಪಾತ್ರಗಳಲ್ಲಿ ಗುರುತಿಸಿಕೊಳ್ಳಬೇಕೆಂಬ ಆಸೆ. ಯಾವುದೇ ಪಾತ್ರವಾಗಿರಲಿ, ಆದರೆ ಅದು ನಟನಿಗೆ ಸವಾಲಾಗಿರುವಂತಹ ಪಾತ್ರವಾಗಿರಬೇಕು ಎನ್ನುವ ಸುಮಂತ್ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. 

- ಅನಿತಾ ಬನಾರಿ 


2 months ago Udayonmukharu
ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್