ಉದಯೋನ್ಮುಖರು

ಮೈಸೂರಿನ ಹುಡುಗನ ಕಿರುತೆರೆ ಪಯಣ
0

ಟಿ ಎನ್ ಸೀತಾರಾಮ್ ನಿರ್ದೇಶನದ ಮಹಾಪರ್ವ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಶ್ರೇಯಸ್ ಕಶ್ಯಪ್ ಸಾಂಸ್ಕೃತಿಕ ನಗರಿ ಮೈಸೂರಿನವರು. ಪದವಿ ಓದುವ ಸಮಯದಲ್ಲಿ ನಟನೆಯ ಬಗ್ಗೆ ಶ್ರೇಯಸ್ ಗೆ ಒಲವು ಮೂಡಿದ್ದೇನೊ ನಿಜ. ಆದರೆ ಕಲಿಕೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದ ಶ್ರೇಯಸ್ ಮುಂದೆ ಕೆಲಸಕ್ಕಾಗಿ ಮಹಾನಗರಿಯ ಪ್ರತಿಷ್ಟಿತ ಕಂಪೆನಿ ಸೇರಿದರು. ಅವರೊಳಗಿದ್ದ ನಟನಾ ಬಯಕೆ ಮತ್ತಷ್ಟು ಹೆಚ್ಚಾಯಿತು. ತಾನು ಕಂಡ ಕನಸು ನನಸಾಗಬೇಕು ಎಂಬು ಹಂಬಲಿಸುತ್ತಿದ್ದ ಶ್ರೇಯಸ್ ಅವರಿಗೆ ಅದೇ ಸಮಯಕ್ಕೆ ಮಹಾಪರ್ವ ಧಾರಾವಾಹಿಯಲ್ಲಿ ನಟಿಸುವ ಅವಕಾಶವೂ ದೊರೆಯಿತು. 

ಮಹಾಪರ್ವ ಧಾರಾವಾಹಿಯ ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿರೀಶ್ ಮಹಾದೇವಪ್ಪ ನಿರ್ದೇಶನದ ಮನೆದೇವ್ರು ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ದೊರಕಿತು. ನಾಯಕಿಯ ಅಣ್ಣನ ಪಾತ್ರಕ್ಕೆ ಜೀವ ತುಂಬುತ್ತಿರುವ ಶ್ರೇಯಸ್ ಏಕ ಕಾಲದಲ್ಲಿ ಸುವರ್ಣ ವಾಹಿನಿಯಲ್ಲೂ ಮಿಂಚುತ್ತಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ತಿಲಕ್ ನಿರ್ದೇಶನದ  ತ್ರಿವೇಣಿ ಸಂಗಮ ಧಾರಾವಾಹಿಯಲ್ಲಿ ನಾಯಕಿಯ ತಮ್ಮನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. 

‘’ನನಗೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ದೊರೆತಿಲ್ಲ ಎನ್ನುವ ಬೇಸರವಿಲ್ಲ. ಸಪೋರ್ಟಿಂಗ್ ರೋಲ್ ಸಿಕ್ಕಿದೆ ಎಂದು ತುಂಬಾ ಖುಷಿ ಇದೆ. ನಾಯಕನ ಪಾತ್ರ ಅಥವಾ ಮುಖ್ಯ ಪಾತ್ರಗಳಿಗೆ ಬೇರೆ ಪಾಜೆಕ್ಟ್ ಗಳಲ್ಲಿ ನಟಿಸಬಾರದು ಎಂಬ ನಿರ್ಬಂಧನೆಗಳಿರುತ್ತದೆ. ಆದರೆ ಸಪೋರ್ಟಿಂಗ್ ರೋಲ್ ಗಳಿಗೆ ಅದು ಯಾವುದೂ ಇಲ್ಲ. ತುಂಬಾ ಖುಷಿಯಿಂದಲೇ ನಟಿಸುತ್ತಿದ್ದೇನೆ ‘’ ಎನ್ನುತ್ತಾರೆ ಶ್ರೇಯಸ್. 

‘’ ಸದ್ಯಕ್ಕೆ ಎರಡು ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದೇನೆ. ಸಿನಿಮಾದಲ್ಲಿ ನಟಿಸುವ ಆಸೆಯೇನೂ ಇದೆ. ಆದರೆ ಇಲ್ಲಿಯ ತನಕ ಯಾವುದೇ ಅವಕಾಶಗಳು ಬರಲಿಲ್ಲ. ವಿಭಿನ್ನ ಪಾತ್ರಗಳಿಗೆ ಜೀವ ತುಂಬುಬೇಕು ಎಂಬ ಹಂಬಲವಿದೆ. ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದೇನೆ’’ ಎನ್ನುವ ಶ್ರೇಯಸ್ ಗೆ ಸುದೀಪ್ ಅವರು ರೋಲ್ ಮಾಡೆಲ್. ಅಮೀರ್ ಖಾನ್ ನನಗೆ ಸ್ಫೂರ್ತಿ ಎನ್ನುವ ಶ್ರೇಯಸ್ ಮೊದಲ ಧಾರಾವಾಹಿ ಮೂಲಕವೇ ಮನೆ ಮಾತಾದವರು. ಜಾನಕಿಯ ಅಣ್ಣ ಸುನೀಲ್ ಎಂದೇ ಚಿರಪರಿಚಿತರಾಗಿರುವ ಶ್ರೇಯಸ್ ಸದ್ಯ ತ್ರಿವೇಣಿ ಸಂಗಮದಲ್ಲಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಂಭೀರ ಮತ್ತು ಕಾಮಿಡಿ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿರುವ ಶ್ರೇಯಸ್ ಗೆ ನಟನೆಯ ಹೊರತಾಗಿ ಅಡುಗೆಯಲ್ಲಿ ವಿಶೇಷ ಒಲವು. ನಾನಾ ನಮೂನೆಯ ಅಡುಗೆಗಳನ್ನು ಮಾಡುವ ಶ್ರೇಯಸ್ ಅದ್ಭುತ ಪೆನ್ಸಿಲ್ ಸ್ಕೆಚ್ ಕಲಾವಿದರೂ ಹೌದು. ಬಿಡುವಿನ ವೇಳೆಯಲ್ಲಿ ಪೆನ್ಸಿಲ್ ಸ್ಕೆಚ್ ಬರೆಯುವ ಶ್ರೇಯಸ್ ಇಂದು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ಅವರ ಅಪ್ಪ ಅಮ್ಮನ ಪ್ರೋತ್ಸಾಹವೇ ಕಾರಣ.

ಶ್ರೇಯಸ್ ಅವರ ನಟನಾ ಪಯಣ ಸುಗಮವಾಗಿ ಸಾಗಲಿ ಎಂಬದೇ ನಮ್ಮ ಆಶಯ.

- ಅನಿತಾ ಬನಾರಿ 


2 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್