ಉದಯೋನ್ಮುಖರು

ಉಡುಪಿಯ ಬೆಡಗಿಯ ಸಿನಿ ಯಾನ
0

ಬಾಲ್ಯದಲ್ಲಿ ಅನೇಕರು ಚಿತ್ರರಂಗದಲ್ಲಿ ಮಿಂಚಬೇಕೆಂಬ ಕನಸು ಕಾಣುತ್ತಾರೆ. ಅದೃಷ್ಟ ಇದ್ದವರು ಆದಷ್ಟು ಬೇಗನೇ ಕನಸನ್ನು ನನಸು ಮಾಡುತ್ತಾರೆ. ಆಕಸ್ಮಿಕವಾಗಿ ದೊರೆತ ಅವಕಾಶ ಬದುಕಿನ ದಿಕ್ಕನ್ನೇ ಬದಲಿಸಿ ಬಿಡುತ್ತದೆ. ಅದಕ್ಕೆ ಉಡುಪಿಯ ಸಾಸ್ತಾನದ ರಂಜಿತಾ ಲುವಿಸ್ ಸಾಕ್ಷಿ. 

ರೊನಾಲ್ಡ್ ಲುವಿಸ್ ಮತ್ತು ಫ್ಲೇವಿಯಾ ಲುವಿಸ್ ದಂಪತಿಗಳ ಪುತ್ರಿ ರಂಜಿತಾಗೆ ತಾನೊಬ್ಬಳು ಸಿನಿಮಾ ನಟಿಯಾಗಬೇಕು ಎಂಬ ಮಹಾದಾಸೆ ಇದ್ದುದ್ದೇನೋ ನಿಜ. ಆದರೆ ತನ್ನ ಆಸೆ ಇಷ್ಟು ಬೇಗ ಫಲಿಸುತ್ತದೆ ಎಂದು ಆಕೆ ಅಂದುಕೊಂಡಿರಲಿಲ್ಲ. ನಶಿಬಾಚೊ ಖೆಳ್ ಕೊಂಕಣಿ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಹಿರಿತೆರೆಗೆ ರಂಜಿತಾ ಎಂಬ ಬೆಡಗಿ ಪರಿಚಯವಾಗಿದ್ದರೂ ಅವಳ ಬಣ್ಣದ ಬದುಕಿಗೆ ಮುನ್ನುಡಿ ಬರೆದದ್ದು ಕೊಂಕಣಿ ಆಲ್ಬಂ ಮೋಗ್ ಆಶೆತಾ. ‘ ಈ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ’ ಎಂದು ಸಂತಸದಿಂದ ಹೇಳುವ ರಂಜಿತಾಗೆ ಈಗಾಗಲೇ ಹಿಂದಿ, ತುಳು ಮತ್ತು ಕನ್ನಡ ಚಿತ್ರಗಳಿಂದ ಆಫರ್ ಗಳು ಬರುತ್ತಿವೆ. ಸದ್ಯಕ್ಕೆ ಕೊಂಕಣಿ – ತುಳು ಸಿನಿಮಾ ಅಶೆಂ ಜಾಲೆಂ ಕಶೆಂ? ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಂಜಿತಾಗೆ ಡೈಜಿ ವರ್ಲ್ಡ್ ಚಾನೆಲ್ ನಲ್ಲಿ ಪ್ರಸಾರವಾಗಬೇಕಾಗಿರುವ ಕೊಂಕಣಿ ಧಾರಾವಾಹಿ ಹೈ ವಾಟ್ ಸರ್ಗಾಚಿ ನ್ಹಯ್ ನಲ್ಲಿ ಕೂಡ ನಟಿಸಿರುತ್ತಾರೆ. ಇದೀಗ ರಂಜಿತಾ ಅಭಿನಯದ ಮಗದೊಂದು ಕೊಂಕಣಿ ಚಿತ್ರ ಜಾಂವಯ್ ನಂ 1 ಚಿತ್ರೀಕರಣ ನಡೆಯುತ್ತಿದ್ದು ಸದ್ಯ ಅದರಲ್ಲಿ ಬ್ಯುಸಿಯಾಗಿದ್ದಾರೆ.   

ಮೈಸೂರು ಮುಕ್ತ ವಿವಿ ಯಲ್ಲಿ ಎಂ.ಕಾಂ ಮಾಡುತ್ತಿರುವ ರಂಜಿತಾ ಈಗಾಗಲೇ ಗಾಯನ, ನೃತ್ಯ, ನಾಟಕದ ಜೊತೆಗೆ ಕ್ರೀಡೆಯ ಪ್ರಕಾರಗಳಾದ ಬಾಲ್ ಬಾಡ್ಮಿಂಟನ್, ಶಟಲ್, ಕೋಕೋ, ಕಬಡ್ಡಿ, ರಿಲೇ, ಥ್ರೋ ಬಾಲ್ ನಲ್ಲಿ ಮಿಂಚಿದ ಪ್ರತಿಭೆ. 


2 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್