ಉದಯೋನ್ಮುಖರು

ಕೆನ್ನೆಯ ಮೇಲೊಂದು ಮುದ್ದಾದ ಮುಗುಳು ನಗೆ... ಚಾಕಲೇಟ್ ಬಾಯ್
0

ಸದಾ ಮುಗುಳುನಗೆ, ಕೆನ್ನೆಯ ಮೇಲೊಂದು ಮುದ್ದಾದ ಮುಗುಳು ನಗೆ... ಚಾಕಲೇಟ್ ಬಾಯ್ ಎಂದೇ ಜನಜನಿತವಾಗಿರುವ ವಿಜಯ್ ಸೂರ್ಯ ಅವರನ್ನು ಗೊತ್ತಿಲ್ಲದವರಾರು ಹೇಳಿ? ಸಿದ್ಧಾರ್ಥ್ ಎಂದೇ ಪರಿಚಿತರಾಗಿರುವ ವಿಜಯ್ ಸೂರ್ಯ ಅಮೋಘ ಅಭಿನಯದ ಮೂಲಕ ಸಾವಿರಾರು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ವಾರದ ಐದು ದಿನಗಳು ಕಿರುತೆರೆ ವೀಕ್ಷಕರಿಗೆ ನಟನೆಯ ಔತಣವನ್ನು ಉಣಬಡಿಸುತ್ತಿರುವ ವಿಜಯ್ ಸೂರ್ಯ ಇದೀಗ ವಾರಾಂತ್ಯದಲ್ಲೂ ನಿಮ್ಮ ಮುಂದೆ ಬರಲಿದ್ದಾರೆ. 

ಇಷ್ಟು ದಿನ ನಟನಾಗಿ ಕಾಣಿಸಿಕೊಂಡಿರುವ ವಿಜಯ್ ಸೂರ್ಯ ಇದೀಗ ನಿರೂಪಕರಾಗಿ ವಾರಾಂತ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಕಾಮಿಡಿ ಟಾಕೀಸ್ ನ ನಿರೂಪಣೆ ಮಾಡಲಿರುವ ವಿಜಯ್ ಸೂರ್ಯ ‘’ ಇದೇ ಮೊದಲ ಬಾರಿಗೆ ನಾನು ನಿರೂಪಣೆ ಮಾಡುತ್ತಿದ್ದೇನೆ. ಆದ ಕಾರಣ ಸ್ವಲ್ಪ ಭಯವಿದೆ. ಈಗಾಗಲೇ ಶೂಟಿಂಗ್ ಆರಂಭವಾಗಿದ್ದು ನವೆಂಬರ್ ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ’’ ಎನ್ನುತ್ತಾರೆ. 

‘’ಜನ ನನ್ನನ್ನು ಇಲ್ಲಿಯ ತನಕ ನಟನಾಗಿ ನೋಡಿದ್ದಾರೆ. ಇದೀಗ ನಿರೂಪಕನಾಗಿ ಕಾಣಿಸಿಕೊಳ್ಳಲಿದ್ದೇನೆ. ನನ್ನ ಈ ಹೊಸ ಪ್ರಯತ್ನವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು’’ ಎನ್ನುವ ಗುಳಿ ಕೆನ್ನೆಯ ಯುವಕ ವಿಜಯ್.

ಮಜಾ ಟಾಕೀಸ್ ಮೂಲಕ ಮನೆ ಮಾತಾಗಿರು 

ಬಣ್ಣದ ನಂಟು : ಪಿಯುಸಿ ವಿದ್ಯಾಭ್ಯಾಸದ ಬಳಿಕ ಮುಂಬೈಯ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ವ್ಯಾಸಂಗ ಮಾಡಿದ ವಿಜಯ್ ಕ್ರೇಜಿಲೋಕ ಸಿನಿಮಾದ ಮೂಲಕ ಬಣ್ಣದ ಪಯಣ ಆರಂಭಿಸಿದರು. ಮುಂದೆ ಇಷ್ಟಕಾಮ್ಯ ಮತ್ತು ಸ ಚಿತ್ರದಲ್ಲಿ ಅಭಿನಯಿಸಿದ್ದು  ಇಷ್ಟಕಾಮ್ಯದ ಡಾಕ್ಟರ್ ಪಾತ್ರದ ಮೂಲಕ ಮಗದೊಮ್ಮೆ ಜನಪ್ರಿಯತೆ ಗಳಿಸಿಕೊಂಡರು. ಸದ್ಯ ಲಖನೌ ಟು ಬೆಂಗಳೂರು ಮತ್ತು ಕದ್ದು ಮುಚ್ಚಿ ಚಿತ್ರದಲ್ಲಿ ಬ್ಯುಸಿಯಾಗಿರುವ ವಿಜಯ್ ಸೂರ್ಯ ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಕೇಳಿ ಬರುತ್ತಿರುವ ಹೆಸರು. 

ಶಾಲಾ, ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ವಿಜಯ್ ಸೂರ್ಯ ಅವರಿಗೆ ಪೌರಾಣಿಕ ಮತ್ತು ಗ್ಯಾಂಗ್ ಸ್ಟರ್ ಪಾತ್ರದಲ್ಲಿ ನಟಿಸುವ ಬಯಕೆ. ‘’ಅಗ್ನಿಸಾಕ್ಷಿಯ ನನ್ನ ಪಾತ್ರಕ್ಕೆ ಪ್ರಶಸ್ತಿ ಬಂದದ್ದು ನನ್ನ ಜೀವನದ ಮರೆಯಲಾರದ ಕ್ಷಣ. ಜನರ ಪ್ರೀತಿಯಿಂದಲೇ ಇದೆಲ್ಲಾ ಸಾಧ್ಯವಾದದ್ದು’’ ಎನ್ನುವ ಅವರು ತಮ್ಮ ಸ್ವಂತ ಪರಿಶ್ರಮದಿಂದಲೇ ಇಂದು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.

ಸೂರ್ಯ ನಿರೂಪಣೆಯ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.  

ಮಜಾ ಟಾಕೀಸ್ ಮೂಲಕ ಮನೆ ಮಾತಾಗಿರುವ  ಸೃಜನ್ ಲೋಕೇಶ್ ಮತ್ತು ರಚಿತಾ ರಾಮ್ ಕಾಮಿಡಿ ಟಾಕೀಸ್ ನ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಪ್ರತಿ ವಾರವೂ ಅತಿಥಿ ತೀರ್ಪುಗಾರರು ಅವರಿಗೆ ಸಾಥ್ ನೀಡಲಿದ್ದಾರೆ.  

- ಅನಿತಾ ಬನಾರಿ 


2 months ago Udayonmukharu
ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್