ಉದಯೋನ್ಮುಖರು

ಅಂದು ಅಂಜಲಿ ಇಂದು ಹಿರಣ್ಮಯಿ
0

ಮುದ್ದು ಮುಖ, ಅರಳು ಹುರಿದಂತೆ ಪಟಪಟನೆ ಮಾತಾಡುವ ಈಕೆಯನ್ನು ನೋಡುವಾಗ ಸ್ವರ್ಗಲೋಕದ ಕಿನ್ನರಿಯ ನೆನಪಾಗದಿರದು. ಮುಖದ ಮೇಲೆ ಮೋಡಿ ಮಾಡುವ ಮುಗುಳುನಗೆಯ ಈ ಕಂದನ ಹೆಸರು ಶ್ರಿತ. ಶ್ರಿತ ಎಂಬ ಹೆಸರು ಹಲವರಿಗೆ ಹೊಸತಿರಬಹುದು. ಯಾಕೆಂದರೆ ಕಿರುತೆರೆಯಲ್ಲಿ ಆಕೆ ಮುದ್ದು ಗುಮ್ಮ ಅಂಜಲಿ ಎಂದೇ ಪರಿಚಿತಳು. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಂಜಲಿ ಧಾರಾವಾಹಿಯಲ್ಲಿ ಮುದ್ದು ಗುಮ್ಮನ ಪಾತ್ರದಲ್ಲಿ ಮಿಂಚಿದ್ದ ಶ್ರಿತ ಮ್ಯಾಜಿಕ್ ಮೂಲಕ ಮಕ್ಕಳನ್ನು ರಂಜಿಸಿದ್ದು ಮಾತ್ರವಲ್ಲದೇ ಮಕ್ಕಳಿಗೆ ಗುಮ್ಮ ನ ಮೇಲೆ ಇದ್ದ ಭಯವನ್ನು ಕೊಂಚ ಮಟ್ಟಿಗೆ ಹೋಗಲಾಡಿಸಿದವಳು…

ಅಂಜಲಿಯಾಗಿ ಮಕ್ಕಳ ಜೊತೆ ಹಿರಿಯರಿಗೂ ಮೋಡಿ ಮಾಡಿದ ಶ್ರಿತ ಇದೀಗ ಮತ್ತೊಮ್ಮೆ ತನ್ನ ಅದ್ಭುತ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮುಂದೆ ಹಾಜರಾಗುತ್ತಿದ್ದಾಳೆ. ಮುಗ್ಧ ನಟನೆಯ ಮೂಲಕ ಮಗದೊಮ್ಮೆ ವೀಕ್ಷಕರ ಮನರಂಜನೆಯ ರಸದೌತಣ ಉಣ ಬಡಿಸಲಿರುವ ಶ್ರಿತ ಗೆ ಬರೀ ಆರು ವರುಷವಷ್ಟೇ! ತನ್ನ ವಯಸ್ಸಿಗೂ ಮೀರಿ ಅಭನಯಿಸುವ ಶ್ರಿತ ಎರಡು ವರುಷವಿದ್ದಾಗಲೇ ನಾನು ನಟಿಸುತ್ತೇನೆ ಎಂದು ಹೇಳುತ್ತಿದ್ದಳು. ಮಾತ್ರವಲ್ಲ ಕನ್ನಡಿ ಮುಂದೆ ನಿಂತು ಒಬ್ಬೊಬ್ಬಳೇ ಮಾತನಾಡುತ್ತಿದ್ದಳು.  ಅದು ಅವಳೊಳಗಿನ ಕಲಾವಿದೆಯನ್ನು ಪ್ರತಿಬಿಂಬಿಸುತ್ತಿತ್ತು. ದೊಡ್ಡವಳಾದಾಗ ಏನಾಗಬೇಕು ಎಂಬ ಹಂಬಲ ನಿನಗೆ ಎಂದು ಯಾರಾದರೂ ಕೇಳಿದರೆ ನಾನು ನಟಿಯಾಗುತ್ತೇನೆ, ನನಗೆ ಆ್ಯಕ್ಟಿಂಗ್ ಮಾಡಬೇಕು ಎಂಬ ಬಯಕೆ ಎನ್ನುವ ಶ್ರಿತ ನಟನಾ ಪ್ರೇಮಕ್ಕೆ ಇದಕ್ಕಿಂತಾ ದೊಡ್ಡ ಸಾಕ್ಷಿ ಬೇಕೆ? 

ನಟನೆಯ ಹೊರತಾಗಿ ಶ್ರಿತಳಿಗೆ ಪ್ರಾಣಿಗಳೆಂದರೆ ವಿಶೇಷ ಒಲವು. ಒಂದು ವೇಳೆ ನಟಿಯಾಗದಿದ್ದರೆ ಎಂಬ ಆಲೋಚನೆ ಅವಳಿಗೆ ಬಂದಿದ್ದಿರಬೇಕು. ಕಲಾವಿದೆಯಾಗದಿದ್ದರೆ ಆಕೆ ಬೇರೆ ತಮಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಳು ಎಂಬ ಕುತೂಹಕ ನಿಮ್ಮನ್ನ ಕಾಡುತ್ತಿದ್ದೇಯೇ? ಆ ಕುತೂಹಲಕ್ಕೂ ತೆರೆ ಎಳೆಯುವ ಸಮಯ. ಯಾಕೆಂದರೆ ಕಲಾವಿದೆಯಾಗಿರದಿದ್ದರೆ ಆಕೆ ವೆಟರ್ನರಿ ಡಾಕ್ಟರ್ ಆಗ ಬೇಕು ಎಂದಿದ್ದಳು. ಆ ಮೂಲಕ ಪ್ರಾಣಿಗಳೊಡನೆ ಹೆಚ್ಚಿನ ಸಮಯ ಕಳೆಯುವ ಬಯಕೆ ಆಕೆಗೆ. ಈಗಲೂ ಅಷ್ಟೇ… 

ಅಮೃತ ವರ್ಷಿಣಿ ಧಾರಾವಾಹಿ ಮೂಲಕ ಬಣ್ಣದ ಲೋಕದಲ್ಲಿ ಕಾಣಿಸಿಕೊಂಡ ಅಪ್ಸರೆ ಮುಂದೆ ಅಂಜಲಿಯಾಗಿ ಮನೆ ಮಾತಾಗಿದ್ದು ಕಿರುತೆರೆ ವೀಕ್ಷಕರಿಗೆ ತಿಳಿದಿರುವ ವಿಚಾರ. ಅಮೃತ ವರ್ಷಿಣಿ ಧಾರಾವಾಹಿಯಲ್ಲಿ ಅಮೃತ ಮಗಳು ಅಮೂಲ್ಯ ಪಾತ್ರದಲ್ಲಿ ನಟಿಸಿದ ಶ್ರಿತ ಇದೀಗ ಮತ್ತೊಮ್ಮೆ ವೀಕ್ಷಕರ ಮುಂದೆ ಬರಲಿದ್ದಾಳೆ. ಅದು ಹಿರಣ್ಮಯಿ ಯಾಗಿ.. ಹೌದು. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾದೇವಿ ಧಾರಾವಾಹಿಯಲ್ಲಿ ಬಂಗಾರಿ ಮತ್ತು ಜಾಜಿ ಯ ಮುದ್ದಿನ ಮಗಳಾಗಿ ಕಾಣಿಸಿಕೊಳ್ಳಲಿದ್ದಾಳೆ. ನಟನೆಯ ಜೊತೆಗೆ ನೃತ್ಯದಲ್ಲಿ ಆಸಕ್ತಿ ಹೊಂದಿರುವ ಶ್ರಿತ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ಫ್ಯಾಮಿಲಿ ವಾರ್ ಸ್ಫರ್ಧೆಯಲ್ಲಿ ಭಾಗವಹಿಸುತ್ತಿದ್ದಾಳೆ. ನೃತ್ಯದ ಜೊತೆಗೆ ಮುದ್ದಾದ ಮಾತುಗಳಿಂದ ನಿರ್ಣಾಯಕರ ಜೊತೆಗೆ ವೀಕ್ಷಕರ ಮನ ಗೆದ್ದು ಬಿಟ್ಟಿದ್ದಾಳೆ.

ಶೂಟಿಂಗ್ ನಲ್ಲಿ ಡೈರೆಕ್ಟರ್ ಎರಡು ಮೂರು ಬಾರಿ ಹೇಳಿಕೊಡುವ ಡೈಲಾಗ್ ಗಳನ್ನು ತಕ್ಷಣ ಕಲಿಯುವ ಈಕೆ ಬಿಡುವಿನ ವೇಳೆ ಕಾರ್ಟೂನ್ ನೋಡುತ್ತಾ, ಡ್ರಾಯಿಂಗ್ ಮಾಡುತ್ತಾ ಸಮಯ ಕಳೆಯುತ್ತಾಳೆ. ರಾಧಿಕಾ ಪಂಡಿತ್, ಯಶ್, ಸುದೀಪ್ ಎಂದರೆ ಇಷ್ಟ ಎನ್ನುವ ಮುದ್ದು ಮುಖದ ಅಪ್ಸರೆ ಕೆಲವೊಮ್ಮೆ ನಾನು ಕೂಡಾ ರಾಧಿಕಾ ಪಂಡಿತ್ ತರ ದೊಡ್ಡ ನಟಿಯಾಗಬೇಕು ಎಂದು ಹೇಳುವುದು ಇದೆಯಂತೆ. 

ಬೆಂಗಳೂರಿನ ಶಿಲ್ಪಾ ಮಧುಸೂದನ್ ಮತ್ತು ಮಧುಸೂದನ್ ದಂಪತಿಗಳ ಫುತ್ರಿ ಶ್ರಿತ ಬಣ್ಣದ ಲೋಕದಲ್ಲಿ ಸಾಕಷ್ಟು ಬೆಳೆಯಲಿ. ತಾನೊಬ್ಬಳು ನಟಿಯಾಗಬೇಕು ಎಂಬ ಆಕೆಯ ಕನಸು ನನಸಾಗಲಿ. ಬಾಲನಟಿಯಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಮುದ್ದು ಮುಖದ ಅಪ್ಸರೆ ಯ ಬಣ್ಣದ ಯಾನ ಕಲರ್ ಫುಲ್ ಆಗಿ ಸಾಗಲಿ.

  - ಅನಿತಾ ಬನಾರಿ


3 months ago Udayonmukharu
ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್