ಉದಯೋನ್ಮುಖರು

ಬಣ್ಣದ ಲೋಕದಲ್ಲಿ ‘ಶೋಭಾ’ಯಮಾನ
0

ನಿರೂಪಣೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಸಕಲೇಶಪುರದ ಸುಂದರಿಯ ಹೆಸರು ಶೋಭಿತಾ ಶಿವಣ್ಣ. ಅಟೆಂಪ್ಟ್ ಟು ಮರ್ಡರ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಶೋಭಿತಾ ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. 

ಅಟೆಂಪ್ಟ್ ಟು ಮರ್ಡರ್ ನಲ್ಲಿ ಐಟಿ ಕಂಪೆನಿಯ ಉದ್ಯೋಗಿ ರಿಯಾ ಪಾತ್ರದಲ್ಲಿ ನಟಿಸಿದ್ದಾರೆ ಶೋಭಿತಾ. ತನಗೆ ಗೊತ್ತಿಲ್ಲದಂತೆ ಯಾವುದೋ ಒಂದು ಸಮಸ್ಯೆಗೆ ಸಿಲುಕಿಕೊಳ್ಳುವ ನಾಯಕಿ ಹೇಗೆ ಸಮಸ್ಯೆಯಿಂದ ಹೊರಬರುತ್ತಾಳೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. 

ಕೃಷ್ಣ ರುಕ್ಮಿಣಿ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡ ಮುದ್ದು ಮುಖದ ಸುಂದರಿ ಕೃಷ್ಣ ರುಕ್ಮಿಣಿಯಲ್ಲಿ ನಾಯಕಿಯ ತಂಗಿ ಪಾತ್ರದಲ್ಲಿ ನಟಸಿದ್ದರು. ಮೊದಲ ಪಾತ್ರದಲ್ಲೇ ಜನರ ಪ್ರೀತಿ ಗಳಿಸಿದ ಶೋಭಿತಾ ಉಂದೆ ಕೋಗಿಲೆ, ಗಾಳಿಪಟ, ದೀಪವೂ ನಿನ್ನದೇ ಗಾಳಿಯು ನಿನ್ನದೇ, ಮಂಗಳ ಗೌರಿ, ಮೀನಾಕ್ಷಿ ಮದುವೆ ಧಾರಾವಾಹಿಗಳಲ್ಲಿ ಅಭಿನಯಿಸಿರುತ್ತಾರೆ. ಸದ್ಯ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. 

‘’ ಗಾಳಿಪಟ ಧಾರಾವಾಹಿಯ ತುಳಸಿ ಮತ್ತು ಮಂಗಳ ಗೌರಿ ಧಾರಾವಾಹಿಯ ಮಂಗಳ ಪಾತ್ರ ನನಗೆ ಹೆಸರನ್ನು ತಂದುಕೊಟ್ಟಿತು’’ ಎನ್ನುವ ಶೋಭಿತಾ ಖಳನಾಯಕಿಯಾಗಿಯೂ ಗುರುತಿಸಕೊಂಡಿದ್ದಾರೆ. ಮೀನಾಕ್ಷಿ ಮದುವೆಯಲ್ಲಿ ಮೊದಲ ಬಾರಿ ಖಳನಾಯಕಿಯಾಗಿ ಅಭಿನಯಿಸಿದ ಇವರು ಸದ್ಯ ಬ್ರಹ್ಮಗಂಟು ಧಾರಾವಾಹಿಯಲ್ಲೂ ಕೂಡಾ ಖಳ ನಟಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. 

‘’ ಮೊದಲ ಬಾರಿ ಕ್ಯಾಮೆರಾ ಮುಂದೆ ನಿಂತಾಗ ಸಿಕ್ಕಾಪಟ್ಟೆ ಭಯ ಆಗಿತ್ತು. ನಟನೆ ಬೇಡ, ವಾಪಾಸ್ ಮನೆಗೆ ಹೋದ್ರೆ ಸಾಕು ಎಂಬ ಆಲೋಚನೆಯು ಬಂದಿತ್ತು. ಹೋಗ್ತಾ ಹೋಗ್ತಾ ಅಭ್ಯಾಸವಾಯಿತು’’ ಎನ್ನುವ ಶೋಭಿತಾ ಎರಡೊಂದ್ಲ ಮೂರು ಚಿತ್ರದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟರು. ಅವರ ಅಭಿನಯದ ಅಟೆಂಪ್ಟ್ ಟು ಮರ್ಡರ್ ಮತ್ತು ಹಾರರ್ ಚಿತ್ರ ವಂದನಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. 

‘’ ಮೊದಲಿನಿಂದಲೂ ನಾನು ಸಾಕಷ್ಟು ಚಿತ್ರಗಳನ್ನು ನೋಡುತ್ತಿದ್ದೆ.  ರಾಧಿಕಾ ಪಂಡಿತ್ ನನ್ನ ಮೆಚ್ಚಿನ ನಟಿ ಮತ್ತು ನಾನು ಅವರ ಅಭಿನಯದ ಚಿತ್ರಗಳನ್ನು ಜಾಸ್ತಿ ನೋಡುತ್ತಿದ್ದೆ. ಅವರೇ ನನಗೆ ಸ್ಫೂರ್ತಿ’’ ಎನ್ನುವ ಶೋಭಿತಾಗೆ ಸಂಗೀತ ಎಂದರೆ ಪ್ರಾಣ. ಬಿಡುವಿನ ವೇಳೆಯಲ್ಲಿ ಸಂಗೀತಾ ಕೇಳುವುದು ಮಾತ್ರವಲ್ಲದೇ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬರುತ್ತಾರೆ. 

- ಅನಿತಾ ಬನಾರಿ 


1 month ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್