ಉದಯೋನ್ಮುಖರು

ಕಲ್ಪನಾ ಲೋಕದಲ್ಲಿ ಕಿರುತೆರೆಯ ರಾಧಾ
0

ರಾಧಾ ಧಾರಾವಾಹಿಯ ‘ರಾಧಾ’ಳಾಗಿ ವೀಕ್ಷಕರ ಮನೆ ಮನ ಸೆಳೆದಿರುವ ಲಕ್ಷ್ಮಿ ಸಿದ್ಧಯ್ಯ ರಾಧಾ ಪಾತ್ರಕ್ಕೆ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದೀಗ ಕಿರುತೆರೆಯ ಮೂಲಕ ಮನೆ ಮಾತಾಗಿರುವ ಲಕ್ಷ್ಮಿ ಅವರು ಇಂದು ಕಲ್ಪನಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಲ್ಪನಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ಇವರು ಬಿದಿಗೆ ಚಂದ್ರಮ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಮುಂದೆ ರಾಧಾ, ಮಾಂಗಲ್ಯ, ಕದನ, ಸಂಬಂಧ, ನಂದಗೋಕುಲ, ಮನೆಯೊಂದು ಮೂರು ಬಾಗಿಲು, ಬಾ ನನ್ನ ಸಂಗೀತಾ, ಅಣ್ಣ ತಂಗಿ, ಹೊಸಬಾಳಿಗೆ ನೀ ಜೊತೆಯಾದೆ ಹೀಗೆ ಇಪ್ಪತ್ತಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿರುವ ಲಕ್ಷ್ಮಿ ಸಿದ್ಧಯ್ಯ ಇಂದು ಕಲ್ಪನಾ ಎಂದೇ ಚಿರಪರಿಚಿತ.  

ಕಲ್ಪನಾಗೆ ಅವಳ ಮನೆ, ಗಂಡ, ಮಗಳೇ ಪ್ರಪಂಚ. ಮಗಳು ಗೊಂಬೆ ಅಲಿಯಾಸ್ ಶ್ರುತಿ ವಿಷಯದಲ್ಲಿ ತುಂಬಾ ಪೊಸೆಸಿವ್. ಗಂಡನನ್ನ ಬೇಕಾದರೂ ಬಿಡುತ್ತಾಳೆ ಆದರೆ ಮಗಳನ್ನು ಬಿಡಲು ಸಾಧ್ಯವೇ ಇಲ್ಲ. ಮಗಳು ಎಂದರೆ ಪ್ರಾಣ. ಅವಳು ಬದುಕಿರೋದೇ ಗೊಂಬೆಕೋಸ್ಕರ. ಕಲ್ಪನಾ ಪಾತ್ರ ಇಮೋಶನ್, ಸಿಡುಕು, ಓವರ್ ಪೊಸೆಸಿವ್ ನೆಸ್ ಇದೆ. ಕಲ್ಪನಾಗೆ ಸುಳ್ಳು, ಮೋಸ, ವಂಚನೆ ಮಾಡುವವರನ್ನು ಕಂಡರೆ ತುಂಬಾನೇ ಸಿಟ್ಟು ಬರುತ್ತೆ. ಅದು ಯಾರೇ ಆಗಲಿ ಅವರನ್ನು ಎದುರು ಹಾಕಿಕೊಳ್ಳುತ್ತಾಳೆ. 

ಕಿರುತೆರೆಯ ಜೊತೆಗೆ ಈಗಾಗಲೇ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿರುವ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೇಮ್ ಅಡ್ಡಾ, ಮುಂಗಾರು ಮಳೆ 2, ರಾಜಾ ರಾಜೇಂದ್ರ, ಕ್ರೇಜಿ ಬಾಯ್ಸ್, ಲವ್ ಯೂ ಅಲಿಯಾ,ಕೃಷ್ಣ ರುಕ್ಕು, ಮುಂಬೈ, , ಕೃಷ್ಣ ಲೀಲಾ, ಎರಡು ಕನಸು ಚಿತ್ರದಲ್ಲಿ ಅಭಿನಯಿಸಿರುವ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ನೀಡಿದ್ದು ಶಶಾಂಕ್ ನಿರ್ದೇಶನದ ಕೃಷ್ಣಲೀಲಾ ಸಿನಿಮಾ. ಆ ಚಿತ್ರದ ಪಾತ್ರಕ್ಕೆ  ಐಐಎಫ್ಅ ಕೊಡಮಾಡುವ ಬೆಸ್ಟ್ ಸಪೋರ್ಟಿಂಗ್ ರೋಲ್ ಫಿಮೆಲ್ ಎಂಬ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಅವರ ಅಭಿನಯದ ಕರಿಯಾ 2, ಪ್ರೀತಿಯ ರಾಯಭಾರಿ ಸಿನಿಮಾ ಬಿಡುಗಡೆಯಾಗಬೇಕಿದೆ. ಮತ್ತು  ಕಪಿ ಚೇಷ್ಟೆ, ಅಂಜಲಿಪುತ್ರ, ಕಿಸ್ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. 

ನಟನೆ ಬಗ್ಗೆ ಯಾವತ್ತೂ ಯೋಚಿಸಿಯೇ ಇರದ ಲಕ್ಷ್ಮಿ ಸಿದ್ಧಯ್ಯ ರಿಗೆ ಇದೊಂದು ಆಕಸ್ಮಿಕವಾಗಿ ಬಂದ ಅವಕಾಶ. ತುಂಬಾ ಚಾಲೆಂಜಿಗ್ ಆಗಿರುವ, ವಿಭಿನ್ನ ರೀತಿಯ ಪಾತ್ರ ಮಾಡುವಾಸೆ ಎನ್ನುವ ಅವರಿಗೆ ನಟನೆಯೇ ಜೀವನ. ನಟನೆಯನ್ನು ತುಂಬಾ ಪ್ರೀತಿಸುತ್ತೇನೆ ಎನ್ನುವ ಲಕ್ಷ್ಮಿ ಇಂದು ಈ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ ಎಂದರೆ ಅದಕ್ಕೆ ಅವರ ಅಮ್ಮನ ಪ್ರೋತ್ಸಾಹವೇ ಕಾರಣ. ಅವರ ಬಣ್ಣದ ಪಯಣ ಕಲರ್ ಫುಲ್ ಆಗಿರಲಿ ಎಂದು ಆಶಿಸೋಣ. 

- ಅನಿತಾ ಬನಾರಿ


3 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್