ಉದಯೋನ್ಮುಖರು

ಮಿಸಸ್ ಮನೆದೇವ್ರು ಆದ ಮೈಸೂರ ಸುಂದರಿ!
0

ಮನೆದೇವ್ರು ಧಾರಾವಾಹಿಯಲ್ಲಿ ಜಾನಕಿ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ಚೆಲುವೆಯ ಹೆಸರು ಅರ್ಚನಾ ಲಕ್ಷ್ಮೀನಾರಾಯಣಸ್ವಾಮಿ. ಮೈಸೂರಿನಲ್ಲಿ ಹುಟ್ಟಿ ಬೆಳೆದ ಅರ್ಚನಾಗೆ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿದ್ದೇ ರೋಚಕದ ಸಂಗತಿ! ಕಂಪೆನಿಯೊಂದರಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ 2013 ರ ಮಿಸ್ ಕರ್ನಾಟಕ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡದ್ದೇ ಇದಕ್ಕೆಲ್ಲ ಕಾರಣ. 

ಮಿಸ್ ಕರ್ನಾಟಕ ಪ್ರಶಸ್ತಿ ಬಂದದ್ದೇ ತಡ, ಸಾಲು ಸಾಲು ಸೀರಿಯಲ್ ಆಫರ್ ಗಳು ಈ ಚೆಲುವೆಯ ಮುಂದೆ ಬಂದವು. ಅಂತೆಯೇ ಅದನ್ನು ಸ್ವೀಕರಿಸಿದ ಸುಂದರಿ ಮುಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಹುತ್ತಿದ್ದ ಮಧುಬಾಲಾ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದರು. ಅದು ಕೂಡಾ ಖಳನಾಯಕಿಯಾಗಿ! ಅದರಲ್ಲಿನ ಮನೋಜ್ಞ ಅಭಿನಯಕ್ಕೆ ಸಾಕ್ಷಿಯಾಗಿ ಪ್ರಶಸ್ತಿಯೂ ದೊರೆಯಿತು. ಮುಂದೆ ಮನೇದೇವ್ರು ಧಾರಾವಾಹಿಯಲ್ಲಿ ನಾಯಕಿಯಾಗಿ ಅವಕಾಶವೂ ದೊರೆಯಿತು. 

ಇದೀಗ ಮನೆದೇವ್ರು ಧಾರಾವಾಹಿ ಮೂಲಕ ಮನೆಮಾತಾಗಿರುವ ಅರ್ಚನಾ ಕಳೆದ ಜೂನ್ ನಲ್ಲಿ ಬಿಡುಗಡೆಯಾದ ನೂರೊಂದು ನೆನಪು ಧಾರಾವಾಹಿಯಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಇನ್ನು ಹೆಸರಿಡದ ಹೊಸ ತಂಡದ ಸಿನಿಮಾದಲ್ಲೂ ಅಭಿನಯಿಸಲಿದ್ದಾರೆ. ‘’ ನಟನೆ ಬಗ್ಗೆ ನನಗೆ ಸ್ವಲ್ಪವೂ ಆಸಕ್ತಿಯಿಲ್ಲ. ನಾನು ಈ ಕ್ಷೇತ್ರಕ್ಕೆ ಆಕಸ್ಮಿಕವಾಗಿ ಬಂದವಳು. ಅಭಿನಯದ ಗಂಧ ಗಾಳಿಯೇ ಗೊತ್ತಿರಲಿಲ್ಲ. ನನಗೆ ಚೆನ್ನಾಗಿ ಕಲಿತು ಹೊರದೇಶದಲ್ಲಿ ನೆಲೆಗೊಳ್ಳಬೇಕೆಂಬ ಕನಸಿತ್ತು. ಆದರೆ ಇದೀಗ ಬಣ್ಣದ ಲೋಕಕ್ಕೆ ಕಾಲಿಟ್ಟಾಗಿದೆ. ಸದ್ಯ ನಟನೆಯನ್ನು ಕಲಿಯುತ್ತಿದ್ದೇನೆ’’ ಎಂದು ಹೇಳುತ್ತಾರೆ ಅರ್ಚನಾ. 

ಕ್ಯಾಮೆರಾ ಮುಂದೆ ನಿಂತು ಫೋಟೋ ಶೂಟ್ ಮಾಡಿಸಿಕೊಂಡು ಗೊತ್ತಿತ್ತು. ಆದರೆ ವಿಡಿಯೋ ಶೂಟ್ ಬಗ್ಗೆ ತಿಳಿದಿರಲಿಲ್ಲ. ಹಾಗಾಗಿ ಮೊದಲ ಬಾರಿ ಗಾಬರಿಯಾಗಿತ್ತು ಎನ್ನುವ ಅರ್ಚನಾಗೆ ಬಾಹುಬಲಿ ಸಿನಿಮಾದ ದೇವಸೇನಾ ಪಾತ್ರ ಕನಸಿನ ಪಾತ್ರವಂತೆ. ‘’ ನಾನು ಚಿಕ್ಕವಳಿದ್ದಾಗಿನ ಘಟನೆ. ವಾರಾಂತ್ಯ ಬಂದರೆ ಸಾಕು, ಮನೆಯವರೆಲ್ಲ ಒಟ್ಟಿಗೆ ಕುಳಿತು ಹಳೆಯ ಸಿನಿಮಾಗಳನ್ನು ನೋಡುತ್ತಿದ್ದೆವು. ಡಾ. ರಾಜಗಕುಮಾರ್, ಡಾ. ವಿಷ್ಣುವರ್ಧನ್, ಶಂಕರ್ ನಾಗ್, ಅಮಿತಾಬ್ ಬಚ್ಚನ್ ನನಗೆ ಸ್ಫೂರ್ತಿ ಎನ್ನುತ್ತಾರೆ ಮೈಸೂರಿನ ಸುಂದರಿ. ‘’ ಕನ್ನಡದಲ್ಲಿರುವ ಹೊಸ ಪ್ರತಿಭೆಗಳಿಗೆ ನಟಿಸಲು ಅವಕಾಶ ಮಾಡಿಕೊಟ್ಟರೆ ಅವರು ಬಾಲಿವುಡ್, ಹಾಲಿವುಡ್, ಕಾಲಿವುಡ್ ಇಂಡಸ್ಟ್ರಿಗಳ ಮೊರೆ ಹೋಗುವುದು ತಪ್ಪುತ್ತದೆ’’ ಎನ್ನುವ ಅರ್ಚನಾ ಬಣ್ಣದ ಲೋಕಕ್ಕೆ ಕಾಲಿಟ್ಟ ನಂತರ ಸಾಕಷ್ಟು ವಿಚಾರಗಳನ್ನು ಕಲಿತಿದ್ದಾರೆ. ಅದರಲ್ಲೂ ಜನರೊಂದಿಗೆ ಬೆರೆಯುವುದು ಹೇಗೆ ಎಂಬುದನ್ನು ಕಲಿತಿದ್ದಾರೆ. ಬಿಡುವು ಸಿಕ್ಕಾಗಲೆಲ್ಲಾ ಡ್ಯಾನ್ಸ್ ಮಾಡುತ್ತಾ, ಪುಸ್ತಕ ಓದುತ್ತಾ ಸಮಯ ಕಳೆಯುವ ಅರ್ಚನಾ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲೂ ಕಾಣಿಸಿಕೊಳ್ಳಲಿ ಎಂದು ಆಶಿಸೋಣ. 

- ಅನಿತಾ ಬನಾರಿ 

6 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್