ಉದಯೋನ್ಮುಖರು

ಸ್ಟೈಲ್ ಕ್ವೀನ್ ಅಮಿತಾ ಕುಲಾಲ್
0

ಚಂದನವನದಲ್ಲಿ ಸದ್ದು ಮಾಡುತ್ತಿರುವ ಮುದ್ದು ಮುಖದ ಚೆಲುವೆಯ ಹೆಸರು ಅಮಿತಾ ಕುಲಾಲ್. ಆ ಎರಡು ವರ್ಷಗಳು ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡ ಈ ಚೆಲುವೆ ಕಡಲನಗರಿ ಮಂಗಳೂರಿನವರು. ಸದ್ಯ ಬಿಡುಗಡೆಯಾಗಿರುವ ಹ್ಯಾಪಿ ಜರ್ನಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಕುಡ್ಲದ ಕುವರಿ ಸದ್ಯ ಚಂದನವನದಲ್ಲಿ ಬ್ಯುಸಿಯಾಗಿದ್ದಾರೆ. 

ಬಾಲ್ಯದಿಂದಲೂ ಮಾಡೆಲಿಂಗ್ ನತ್ತ ವಿಶೇಷ ಆಸಕ್ತಿ ಹೊಂದಿದ್ದ ಅಮಿತಾ ಫ್ಯಾಷನ್ ಗೆ ಸಂಬಂಧಿಸಿದ ಟಿವಿ ಶೋ ಗಳನ್ನು ಪ್ರೇರಣೆ ಗೊಂಡವರು. ಅದನ್ನೆಲ್ಲಾ ನೋಡುತ್ತಿರುವಾಗ ತಾನು ಕೂಡಾ ಮಾಡೆಲಿಂಗ್ ನಲ್ಲಿ ಮಿಂಚಬೇಕು ಎಂದು ಅಂದುಕೊಂಡಿದ್ದ ಅಮಿತಾ ನಾನಾ ನಮೂನೆಯ ಡ್ರೆಸ್ ಹಾಕಿ ಮನೆಯಲ್ಲಿಯೇ ರಾಂಪ್ ವಾಕ್ ಮಾಡುತ್ತಿದ್ದರು. ಅಷ್ಟರ ಮಟ್ಟಿಗೆ ಅವರನ್ನು ಸೆಳೆದಿತ್ತು ಮಾಡೆಲಿಂಗ್ ಮೋಹ. ಮಾಡೆಲಿಂಗ್ ಎಂದರೇನು ಎಂದು ಅರಿಯದ ಅಮಿತಾ ಮುಂದೆ ಅದರ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡರು. ತಾನು ಕೂಡಾ ಮಾಡೆಲಿಂಗ್ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಂಬಲವಿದ್ದ ಕಾರಣ ಕಂಪೆನಿಯೊಂದಕ್ಕೆ ಫೋಟೋವನ್ನು ಕಳಿಸಿಕೊಟ್ಟದ್ದು ಆಯಿತು. ಆದರೆ ಅದು ಸಾಧಾರಣವಾದ ಫೋಟೋ ಆದ ಕಾರಣ ರಿಜೆಕ್ಟ್ ಆಯಿತು. ಮಾತ್ರವಲ್ಲ ಪೋರ್ಟ್ ಫೋಲಿಯೋ ಫೋಟೋ ಕೊಡುವಂತೆ ಕೇಳಿದರು. ಪೋರ್ಟ್ ಪೋಲಿಯೋ ಎಂದರೆ ಏನೆಂದೇ ತಿಳೀಯದ ಅಮಿತಾ ಅದರ ಬಗ್ಗೆ ತಿಳಿದು ಅದ್ಕೆ ತಕ್ಕುದಾದ ಫೋಟೋ ಶೂಟ್ ಮಾಡಿಸಿ ಕಳುಹಿಸಿಬಿಟ್ಟರು. ಅದೃಷ್ಟ ಅವರ ಕೈ ಹಿಡುದಿತ್ತು. ಆಡಿಶನ್ ರೌಂಡ್ ಗೆ ಆಯ್ಕೆಯೂ ಆದರು. ಮುಂದೆ ಮನೆಯವರನ್ನು ಒಪ್ಪಿಸಿ ತಂದೆಯೊಂದಿಗೆ ದೂರದ ಮುಂಬೈಗೆ ತೆರಳಿದ ಅಮಿತಾ ಮೊದಲ ಬಾರಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಸೆಲೆಕ್ಟ್ ಆದಾಗ ಬರೀ ಹದಿನಾರು ವರುಷ!   

ಮುಂದೆ ಮಂಗಳೂರಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಅಮಿತಾ ಸಂಪೂರ್ಣ ಮಾಡೆಲಿಂಗ್ ನಲ್ಲಿ ಮುಂದುವರೆಯುವ ನಿರ್ಧಾರ ಮಾಡಿದರು. ಮನಸಿನ ಆಳದಲ್ಲಿ ಅಡಗಿದ ಬಣ್ಣದ ಬದುಕಿನ ಆಸಕ್ತಿ ಅವರನ್ನು ಮಗದೊಮ್ಮೆ ಮುಂಬಯಿಗೆ ತೆರಳುವಂತೆ ಮಾಡಿತು.  ಮುಂದೆ ರಾಂಪ್ ವಾಕ್, ಮಾಡೆಲಿಂಗ್ ಮೂಲಕ ಫ್ಯಾಷನ್ ಲೋಕದಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿರುವ ಅಮಿತಾ ಈಗಾಗಲೇ ಬಾಲಿವುಡ್ ಅಂಗಳದಲ್ಲೂ ಮಿಂಚಿದ ಪ್ರತಿಭೆ. 

ಹಿಂದಿ ವಿಡಿಯೋ ಆಲ್ಬಂಗಳಲ್ಲಿ ಅಭನಯಿಸಿವ ಮೂಲಕ ಬಣ್ಣದ ಕ್ಷೇತ್ರಕ್ಕೆ ಕಾಲಿಟ್ಟ ಅಮಿತಾ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಕೊರಿಯೋಗ್ರಫರ್ ಗಣೇಶ್ ಆಚಾರ್ಯ ಮತ್ತು ತಂಡ ಝಂಕಾರ್ ವಿಡಿಯೋ ಆಲ್ಬಂ ಅಮಿತಾಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತು. ಮುಂದೆ ರಾಕೇಶ್ ಕಪೂರ್ ಅವರ ವಿಡಿಯೋ ಆಲ್ಬಂಗಳಲ್ಲಿ ಅಭಿನಯಿಸಿರುವ ಅಮಿತಾ ಮಾಡೆಲಿಂಗ್ ಗೂ ಸೈ. ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಮಧುರೈ ಸಿಲ್ಕ್ಸ್, ಸೂರತ್ ಬ್ರಾಂಡ್, ಹೈದರಬಾದ್ ಸಾರೀಸ್ ಗಳಿಗೆ ರೂಪದರ್ಶಿಯಾಗಿ ಮಿಂಚಿದ್ದಾರೆ. 

ಅವಕಾಶ ಸಿಕ್ಕರೆ ತುಳು ಚಿತ್ರದಲ್ಲೂ ನಟಿಸಲೂ ತಯಾರಿದ್ದೇನೆ ಎನ್ನುವ ಅಮಿತಾ ಕುಲಾಲ್ ಸದ್ಯ ಜಗತ್ ಕಿಲಾಡಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಲಯನ್ ಆರ್. ರಮೇಶ್ ಬಾಬು ನಿರ್ಮಿಸುತ್ತಿರುವ ಜಗತ್ ಕಿಲಾಡಿ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. 

- ಅನಿತಾ ಬನಾರಿ 


6 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್