ಉದಯೋನ್ಮುಖರು

ನೆಗೆಟಿವ್ ರೋಲ್ ನಲ್ಲಿ ನಟನೆಗೆ ಅವಕಾಶ ಜಾಸ್ತಿ
0

ಮನೆಯೊಂದು ಮೂರು ಬಾಗಿಲು ಧಾರಾವಾಹಿಯಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ನಟನಾ ಕ್ಷೇತ್ರಕ್ಕೆ ಪರಿಚಯವಾದ ಮುದ್ದು ಮುಖದ ಚೆಲುವೆಯ ಹೆಸರು ಪಲ್ಲವಿ ಗೌಡ. ಮುಂದೆ ಗಾಳಿಪಟ ಧಾರಾವಾಹಿಯಲ್ಲಿ  ಪೂರ್ಣಪ್ರಮಾಣದ ನಾಯಕಿಯಾಗಿ ನಟಿಸಿದ ಪಲ್ಲವಿ ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೋಡಿ ಹಕ್ಕಿ ಧಾರಾವಾಹಿಯಲ್ಲಿ ನಂದಿತಾ ಆಗಿ ಕಾಣಿಸಿಕೊಂಡಿದ್ದಾರೆ. 

ಮನೆಯ ಕಿರಿಸೊಸೆ ಆಗಿರುವ ನಂದಿತಾ ಮಾವನ ಎದುರು ಒಳ್ಳೆಯವಳಂತೆ ನಟಿಸುತ್ತಾಳಷ್ಟೆ. ತನ್ನ ಭಾವ ಮದುವೆಯಾದರೆ ತನ್ನ ಪಟ್ಟ ಅದೆಲ್ಲಿ ತಳ ಸೇರುವುದೋ ಎಂಬ ಆತಂಕ ಅವಳಿಗೆ. ಈತ್ತ ಭಾವ ಅದೇ ಊರಿಗೆ ವರ್ಗವಾಗಿ ಬಂದ ಟೀಚರ್ ಜಾನಕಿಯನ್ನು ಪ್ರೀತಿಸಿ ವಿವಾಹವಾಗಿದ್ದಾನೆ. ಇದರಿಂದ ನಂದಿತಾ ಕೆಂಡಮಂಡಲವಾಗಿದ್ದಾಳೆ. ಅಂತೂ ದೊಡ್ಡ ಮನೆಗೆ ಹಿರಿಸೊಸೆ ಆಗಮನವಾಗಿದೆ.. ಮುಂದೇನಾಗುತ್ತದೋ ಕಾದು ನೋಡಬೇಕು.

ನನಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಶಾಲಾ ದಿನಗಳಲ್ಲಿ ಯಾವುದೇ ಡ್ಯಾನ್ಸ್  ಕಾರ್ಯಕ್ರಮವಿರಲಿ ಅಲ್ಲಿ ನಾನು ಹಾಜರ್. ವಾರ್ಷಿಕೋತ್ಸವ ದ ಸಮಯದಲ್ಲಿ ಹತ್ತು ಡ್ಯಾನ್ಸ್ ಇದೆ ಎಂದಾದರೆ ಆ ಹತ್ತು ಡ್ಯಾನ್ಸ್ ನಲ್ಲೂ ನನ್ನ ಹೆಸರು ಇರ್ತಾ ಇತ್ತು. ನನಗೆ ನೃತ್ಯದ ಬಗ್ಗೆ ಅದೆಷ್ಟು ಹುಚ್ಚು ಇತ್ತು ಎಂದರೆ ನನ್ನ ಡ್ಯಾನ್ಸ್ ಬಿಡಿ, ಬೇರೆ ತಂಡದ ಮಕ್ಕಳ ಡ್ಯಾನ್ಸ್ ನ ಸ್ಟೆಪ್ಸ್, ಯಾರು ಎಲ್ಲಿ ಹೇಗೆ ಮಾಡಬೇಕು ಎಂಬುದೆಲ್ಲಾ ನನಗೆ ತಿಳಿದಿರುತ್ತಿತ್ತು. ಇನ್ನು ನಾನು ಏಳನೇ ತರಗತಿಯಲ್ಲಿರುವಾಗ ನಾಟಕದಲ್ಲಿ ಅಭಿನಯಿಸಿದ್ದೆ. ಅದರಲ್ಲಿ ಒಂದೆರಡು ಡೈಲಾಗ್ ಇತ್ತಷ್ಟೇ. ಮುಂದೆ ಮನೆಯೊಂದು ಮೂರು ಬಾಗಿಲು ಮೂಲಕ ಕಿರುತೆರೆಗೆ ಪ್ರವೇಶಿಸಿದೆ ಎನ್ನುತ್ತಾರೆ ಪಲ್ಲವಿ.

ಇದೀಗ ನಟನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಿರುವ ಪಲ್ಲವಿ ಯವರು ಚಂದ್ರಚಕೋರಿ, ಪರಿಣಯ ಧಾರಾವಾಹಿಯಲ್ಲೂ ಅಭಿನಯಿಸಿರುತ್ತಾರೆ. ಮಾತ್ರವಲ್ಲ, ತೆಲುಗಿನ ಪಸ್ಪು ಕುಂಕುಮ ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯಲ್ಲೂ ತಮ್ಮ ನಟನಾ ಕಂಪನ್ನು ಪಸರಿಸಿದ್ದಾರೆ. ವೀಕ್ಷಕರ ಮನ ಗೆದ್ದಿದ್ದಾರೆ ಎಂಬುದಕ್ಕೆ ಅವರಿಗೆ ಸಂದ ಪ್ರಶಸ್ತಿಗಳೇ ಸಾಕ್ಷಿ. ಆ ಧಾರಾವಾಹಿಯ ನಟನೆಗೆ ಉತ್ತಮ ನಾಯಕಿ, ಉತ್ತಮ ಉದಯೋನ್ಮುಖ  ನಟಿ ಪ್ರಶಸ್ತಿಯನ್ನೂ ಪಡೆದಿರುತ್ತಾರೆ. 

ನೆಗೆಟಿವ್ ರೋಲ್  ಮೃದು ಪಾತ್ರಕ್ಕಿಂತ ತುಂಬಾ ಭಿನ್ನವಾದುದು. ಮೃದು ಪಾತ್ರದಲ್ಲಿ ನಗು, ಅಳು, ಸಂತೋಷ ಇವಿಷ್ಟಕ್ಕೆ ಮಾತ್ರ ಅವಕಾಶ. ಆದರೆ ನೆಗೆಟಿವ್ ಪಾತ್ರದಲ್ಲಿ ಹಾಗಲ್ಲ. ಅಲ್ಲಿ ಅವಕಾಶಗಳು ಜಾಸ್ತಿ. ಜೋಡಿಹಕ್ಕಿಯಲ್ಲಿ ನನ್ನದು ನೆಗೆಟಿವ್ ಪಾತ್ರವಾದರೂ ನಾಯಕಿಗೆ ಇರುವಷ್ಟೇ ಪ್ರಾಮುಖ್ಯತೆಯಿದೆ. ಹಾಗಾಗಿ ಒಪ್ಪಿಕೊಂಡೆ ಎಂದು ತಮ್ಮ ಬಣ್ಣದ ಪಯಣವನ್ನು ವಿವರಿಸುತ್ತಾರೆ. 

ನಾನು ಇಲ್ಲಿಯ ತನಕ ನಾಯಕಿಯಾಗಿ ಅಭಿನಯಿಸಿದ್ದೇನೆ. ನನಗೆ ಕಾಮಿಡಿ ಪಾತ್ರದಲ್ಲಿ ನಟಿಸಬೇಕು ಎಂಬ ಮಹಾದಾಸೆ. ನಾನು ಅದೆಷ್ಟೋ ಪಾತ್ರಗಳಲ್ಲಿ ನಕ್ಕಿದ್ದೇನೆ ನಿಜ, ಆದರೆ ಇಲ್ಲಿಯವರೆಗೆ ಬೇರೆ ಯಾರನ್ನು ನಗಿಸಿಲ್ಲ. ನಾವು ನಗುವುದು ಸುಲಭ, ಅದೇ ಬೇರೆಯವರನ್ನು ನಗಿಸುವುದು ತುಂಬಾನೇ ಕಷ್ಟ. ಅದೊಂದು ನಾನು ಇನ್ನು ಕಲಿಯಬೇಕಿದೆ ಎನ್ನುತ್ತಾರೆ. ‌

ಪ್ರೇಮ ಗಿಮ ಜಾನೆದೊ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಪಲ್ಲವಿ ಅಭಿನಯದ ಮತ್ತೊಂದು ಚಿತ್ರ ಕಿಡಿ ಯ ಚಿತ್ರೀಕರಣ ಮುಗಿದ್ದಿದ್ದು ಬಿಡುಗಡೆಯಾಗಬೇಕಿದೆ. 

4 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್