ಉದಯೋನ್ಮುಖರು

ಕಿರುತೆರೆಯಿಂದ ಜನರ ಪ್ರೀತಿ ಗಳಿಸಿದೆ : ಭವಾನಿ ಸಿಂಗ್
0

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸುಬ್ಬುಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ಗುರುಮೂರ್ತಿಯಾಗಿ ನಟಿಸಿ ಸೈ ಎನಿಸಿಕೊಂಡ ಈ ಚಾಕಲೇಟ್ ಹುಡುಗನ ಹೆಸರು ಭವಾನಿ ಸಿಂಗ್. ರಾಜಸ್ಥಾನ ಮೂಲದವರಾದ ಭವಾನಿ ಸಿಂಗ್ ಹುಟ್ಟಿ ಬೆಳೆದಿದ್ದು ಮಹಾನಗರಿ ಬೆಂಗಳೂರಿನಲ್ಲಿ. ಬಿಬಿಎಂ ಪಧವೀಧರರಾಗಿರುವ ಭವಾನಿ ಸಿಂಗ್ ಅವರಿಗೆ ಬಾಲ್ಯದಿಂದಲೂ ತಾನೊಬ್ಬ ನಟನಾಗಬೇಕು ಎಂಬ ಮಹಾದಾಸೆ ಇತ್ತು. ಕಭೀ ಖುಷೀ ಕಭಿ ಗಮ್ ಚಿತ್ರ ನೋಡಿದ ನಂತರವಂತೂ ಅವರೊಳಗಿದ್ದ ಆಸೆ ದುಪ್ಪಟ್ಟಾಯಿತು. 

ಪದವಿಯ ಬಳಿಕ ಪ್ರತಿಷ್ಟಿತ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭವಾನಿ ಸಿಂಗ್ ಅವರು ಮುಂದೆ ಬಣ್ಣದ ಲೋಕದಲ್ಲಿ ಮುಂದುವರಿಯುವ ಆಲೋಚನೆ ಮಾಡಿದರು. ಸೂಕ್ತ ಸಮಯಕ್ಕೆ ಸ್ನೇಹಿತನ ಮಾರ್ಗದರ್ಶನವೂ ದೊರೆಯಿತು. ನಟನೆಯನ್ನು ಕಲಿಯುವ ಸಲುವಾಗಿ ಅಭಿನಯ ತರಂಗ ಸಂಸ್ಥೆ ಸೇರಿಕೊಂಡರು. 

ಚರಣದಾಸಿ ಧಾರಾವಾಹಿಯಲ್ಲಿ ಕಾರ್ತಿಕ್ ಆಗಿ ನಟಿಸುವುದರ ಮೂಲಕ ಕಿರುತೆರೆಗೆ ಕಾಲಿಟ್ಟ ಭವಾನಿ ಸಿಂಗ್ ಸದ್ಯ ಗುರುಮೂರ್ತಿ ಆಲಿಯಾಸ್ ಗ್ಯಾರಿ ಯಾಗಿ ಬ್ಯುಸಿಯಾಗಿದ್ದಾರೆ. ‘’ ಚರಣದಾಸಿಯಲ್ಲಿ ನಾನು ಮುಗ್ಧ ಹುಡುಗನ ಪಾತ್ರದಲ್ಲಿ ನಟಿಸಿದ್ದೆ. ಚರಣದಾಸಿಯ ನಂತರ ಹಿಂದಿಯ ಆಶಾಯ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅದು ನೆಗೆಟಿವ್ ರೋಲ್! ನನಗೆ ನಿರರ್ಗಳವಾಗಿ ಹಿಂದಿ ಮಾತನಾಡಲೂ ಬರುತ್ತಿದ್ದ ಕಾರಣ ಧಾರವಾಹಿಯಲ್ಲಿ ನಟಿಸಲು ಸುಲಭವಾಯಿತು. ಜೊತೆಗೆ ಹಿಂದಿಯ ಕ್ರೈಂ ಪೆಟ್ರೋಲ್ ಗೆ ಕ್ರಿಯೆಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೆ. ಜೊತೆಗೆ ಕೆಲವೊಂದು ಎಪಿಸೋಡ್ ಗಳಲ್ಲಿ ಅಭಿನಯಿಸಿದ್ದೆ’’ ಎಂದು ತಮ್ಮ ಸುಮಧುರವಾದ ಕಿರುತೆರೆ ಜರ್ನಿಯನ್ನು ತೆರೆದಿಡುತ್ತಾರೆ ಭವಾನಿ ಸಿಂಗ್. 

‘’ ಸುಬ್ಬುಲಕ್ಷ್ಮಿಯ ಪ್ರೀತಿಯ ಗುರುಮೂರ್ತಿ, ಶನಾಯ ಮುದ್ದು ಗ್ಯಾರಿ. ರೊಮ್ಯಾಂಟಿಕ್, ಕೋಪ, ಕಾಮಿಡಿಯನ್ ಇದೆಲ್ಲಾ ಸೇರಿ ಗುರುಮೂರ್ತಿಯ ಪಾತ್ರ ಮೂಡಿಬಂದಿದೆ ಎಂದು ಹೇಳಬಹುದು. ಹಳ್ಳಿಯವನಾದ ಗುರುಮೂ ರ್ತಿ ಇದೀಗ ಪೇಟೆಯ ಲೈಫಿಗೆ ಹೊಂದಿಕೊಂಡಿದ್ದಾನೆ. ಕಾಲಕ್ಕೆ ತಕ್ಕ ಹಾಗೆ ಅಪ್ ಡೇಟ್ ಕೂಡ ಆಗಿದ್ದಾನೆ. ಇಂತಿಪ್ಪ ಗುರುಮೂರ್ತಿಗೆ ಮಾಡರ್ನ್ ಆಗಿರುವ ಶನಾಯ ಮೇಲೆ ಪ್ರೀತಿ ಶುರುವಾಗಿದೆ’’ ಎಂದು ಗುರುಮೂರ್ತಿಯ ಪಾತ್ರವನ್ನು ವಿವರಿಸುತ್ತಾರೆ . 

ಬಾಲ್ಯದ ಆಸೆಯಂತೆ ನಟನಾ ಕೇತ್ರಕ್ಕೆ ಬಂದಿರುವುದು ನನಗೆ ತುಂಬಾ ಖುಷಿಯಾಗುತ್ತಿದೆ. ಕಿರುತೆರೆಯ ಮೂಲಕ ನಾನು ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ನಟನಾ ಪಯಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು ಭವಾನಿ ಸಿಂಗ್.

ಶ್ರದ್ಧೆ ಇದ್ದರೆ ಮಾತ್ರ ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎನ್ನುವ ಮಹಾನಗರಿಯ ಕುವರ ಇದೊಂದು ಕ್ರಿಯೇಟಿವ್ ಫೀಲ್ಡ್. ಇಲ್ಲಿ ಮುಂದುವರಿಯಬೇಕು ಎಂದರೆ ಶಿಸ್ತು ಅತೀ ಮುಖ್ಯವಾಗುತ್ತದೆ ಎಂದು ನಗುಮುಖದಿಂದ ನುಡಿಯುತ್ತಾರೆ. 

ನಟನೆಯ ಮೂಲಕ ಮನೆಮಾತಾಗಿರುವ ಭವಾನಿ ಸಿಂಗ್ ಅವರ ಜೀವನದಲ್ಲಿ ಮರೆಯಲಾರದ ಒಂದು ಘಟನೆಯಿದೆ. ಪದವಿ ಓದುತ್ತಿರುವ ಸಮಯದಲ್ಲಿ ಮಲ್ಲೇಶ್ವರಂ ಬಳಿಯಿರುವ ಮೊಬೈಲ್ ಅಂಗಡಿಯಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಕರಪತ್ರ ಹಂಚುತ್ತಿದ್ದಾಗ ಅಯ್ಯೋ ಬೇಡಪ್ಪಾ ಎಂದು ಹೋಗುತ್ತಿದ್ದವರೇ ಇಂದು ಇವರನ್ನು ಕಂಡಾಗ ಹತ್ತಿರ ಬಂದು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಆಟೋಗ್ರಾಫ್ ಪಡೆಯುತ್ತಾರೆ. ಒಬ್ಬ ಕಲಾವಿದನಿಗೆ ಇದ್ಕಕಿಂತ ಬೇರೆ ಏನೂ ಬೇಕು?  

ನಟನೆಯ ಜೊತೆಗೆ ಮಾಡೆಲಿಂಗ್ ನಲ್ಲೂ ಸೈ ಎನಿಸಿಕೊಂಡಿರುವ ಚಾಕಲೇಟ್ ಹುಡುಗ ಹಲವು ಜಾಹೀರಾತುಗಳಿಗೆ ರೂಪದರ್ಶಿಯಾಗಿ ಮಿಂಚಿದ್ದಾರೆ. ಜೊತೆಗೆ ಹಲವು ಫ್ಯಾಷನ್ ವೇದಿಕೆಗಳಲ್ಲಿ ರ್ಯಾಂಪ್ ವಾಕ್ ಕೂಡ ಮಾಡಿರುತ್ತಾರೆ. ರಾಜ್ ಕುಮಾರ್, ವಿಷ್ಣುವರ್ಧನ್, ಅಮಿತಾಬ್ ಬಚ್ಚನ್ ಅವರೇ ನನಗೆ ಪ್ರೇರಣೆ ಎನ್ನುವ ಭವಾನಿ ಸಿಂಗ್ ಗೆ ಹಾಡು ಮತ್ತು ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಬಿಡುವಿನ ವೇಳೆಯಲ್ಲಿ ಸಂಗೀತವನ್ನು ಕಲಿಯುತ್ತಿದ್ದಾರೆ.


2 weeks ago Udayonmukharu

Related Articles

ನಿಮ್ಮ ಅಭಿಪ್ರಾಯಗಳು


Balkani News Polls

ನಿಮ್ಮ ಇಷ್ಟ ಅದ ಚಿತ್ರಯಾವುದು .?
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್

A PHP Error was encountered

Severity: Notice

Message: Undefined variable: newpost

Filename: views/polls_page.php

Line Number: 286