ಉದಯೋನ್ಮುಖರು

ಈಕೆ ಕಿರುತೆರೆಯ”ಅಪೂರ್ವ”ಸುಂದರಿ
0

ಮಹಾನಗರಿಯ ಈ ಮುದ್ದು ಚೆಲುವೆಯ ಹೆಸರು ಅಪೂರ್ವ ಭಾರದ್ವಾಜ್. ಅನುರೂಪ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಈ ಚೆಲುವೆ ಸದ್ಯದ ಮಟ್ಟಿಗೆ ಕಿರುತೆರೆ ಪ್ರಿಯರ ಪಾಲಿನ ಪ್ರೀತಿಯ ಸುನೈನಾ. ಅಪೂರ್ವ, ಸುನೈನಾ ಏನಪ್ಪಾ ಇದು ಅಂಥ ಕನ್ ಫ್ಯೂಸ್ ಆಗಬೇಡಿ. ಇಲ್ಲಿ ಕೇಳಿ. ತಾನು ನಟಿಸಿದ ಮೊದಲ ಧಾರಾವಾಹಿ ಅನುರೂಪದ ಸುನೈನಾ ಮೂಲಕ ವೀಕ್ಷಕರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಗುಂಗುರು ಕೂದಲಿನ ಸುಂದರಿಯೊಂದಿಗೆ ಮತ್ತಷ್ಟು ಮಾತುಕತೆ... ನಿಮಗಾಗಿ...

 ನಿಮ್ಮ ಪರಿಚಯ? 

ನನ್ನ ಹೆಸರು ಅಪೂರ್ವ ಭಾರದ್ವಾಜ್. ನಾನು ಬೆಂಗಳೂರಿನವಳು. ಸಂವಹನ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತೇನೆ. 

ನೀವು ನಟಿಸಿರುವಂತಹ ಧಾರಾವಾಹಿಗಳು? 

ಅನುರೂಪ ನನ್ನ ಮೊದಲ ಧಾರವಾಹಿ. ಮುಂದೆ ಮಜಾ ಟಾಕೀಸ್, ಚಕ್ರವ್ಯೂಹ, ಗಿರಿಜಾ ಕಲ್ಯಾಣ, ವಾರಸ್ದಾರ ನಾನು ನಟಿಸಿರುವಂತಹ ಧಾರಾವಾಹಿ. ಸದ್ಯ ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಇಷ್ಟ ಪಾತ್ರಕ್ಕೆ ಜೀವ ತುಂಬುತ್ತಿದ್ದೇನೆ. 

ಇಷ್ಟ ಪಾತ್ರದ ಬಗ್ಗೆ ಹೇಳೋದಾದ್ರೆ? 

ಇಷ್ಟ ಅವಳನ್ನು ಅವಳೇ ಸಿಕ್ಕಾಪಟ್ಟೆ ಇಷ್ಟಪಡುತ್ತಾಳೆ. ಅವಳಿಗೆ ತುಂಬಾ ಧೈರ್ಯ. ಯಾರಿಗೂ ಹೆದರೋದಲ್ಲ. ಅವಳ ಮನಸ್ಸು ತುಂಬಾ ಮೃದು. ಅನ್ಯಾಯನ ಖಂಡಿಸುತ್ತಾಳೆ. ತುಂಬಾ ಬಬ್ಲಿಯಾಗಿರುವ ಕ್ಯಾರೆಕ್ಟರ್ ಅವಳದು. 

ಇಷ್ಟಗೂ ಅಪೂರ್ವಗೂ ಏನಾದ್ರೂ ಸಾಮ್ಯತೆ ಇದೆಯಾ? 

ಹಾ ಇದೆ. ಆ ಟಾಮ್ ಬಾಯ್ ನೇಚರ್ ಇದೆ ಅಂಥ ಹೇಳ್ಬಹುದು. ಅದರ ಜೊತೆಗೆ ಎಲ್ಲರ ಜೊತೆ ಬಬ್ಲಿಯಾಗಿ ಮಾತಾಡುವ ನೇಚರೇ ಅಪೂರ್ವಗೂ ಇಷ್ಟಗೂ ಇರುವ ಸಾಮ್ಯತೆ. 

ನಿಮಗೆ ಬಣ್ಣದ ಲೋಕಕ್ಕೆ ಬರಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತಾ? 

ಇಲ್ಲ. ನಾನು ಟೆಕ್ನಿಷಿಯನ್ ಆಗಿ ನನ್ನ ಕೆರಿಯರ್ ಆರಂಭಿಸಿದೆ. ಆಗ ಸುವರ್ಣ ಚಾನೆಲ್ ನಿಂದ ಆಡಿಶನ್ ಕರೆದಿದ್ರು. ಅಲ್ಲಿ ಸೆಲೆಕ್ಟ್ ಆದೆ. ಹೀಗೆ ನನ್ನ ಬಣ್ಣದ ಪಯಣ ಆರಂಭವಾಯಿತು.

ಹೇಗನ್ನಿಸುತ್ತೆ ಬಣ್ಣದ ಪಯಣ?

ನನಗೆ ಮೊದಲ ಧಾರಾವಾಹಿಯಲ್ಲಿ ನಟಿಸುವಾಗಲೇ ನಟನೆ ಬಗ್ಗೆ ಒಲವು ಮೂಡಿದ್ದು. ತುಂಬಾ ಖುಷಿ ಆಗ್ತಿದೆ. ಈಗ ನಟನೆಯಲ್ಲೇ ದೊಡ್ಡ ಹೆಸರು ಮಾಡ್ಬೇಕು ಅಂತ ಆಸೆ. 

ಅಪೂರ್ವ ಭಾರದ್ವಾಜ್ ಗೆ ಹೆಸರು ತಂದು ಕೊಟ್ಟ ಪಾತ್ರ? 

ಅನುರೂಪದ ಸುನೈನಾ. ಈಗಲೂ ತುಂಬಾ ಜನ ಸುನೈನಾ ಅಂತಾನೇ ಗುರುತಿಸಿತ್ತಾರೆ. 

ಮೊದಲ ಸಲ ಕ್ಯಾಮೆರಾ ಮುಂದೆ ನಿಂತಾಗ ಏನ್ನನಿಸಿತು? 

ಯಾವತ್ತಿಗೂ ಭಯ ಅನ್ನೋದು ಆಗ್ಲಿಲ್ಲ. ಆರಂಭದಿಂದನೂ ನಾನು ಕ್ಯಾಮೆರಾದ ಜೊತೆಗೆ ಕಂಫರ್ಟೇಬಲ್ ಆಗಿದ್ದೆ. 

ಸ್ಫೂರ್ತಿ? 

ಅಮ್ಮನೇ ಸ್ಫೂರ್ತಿ. ಏನಾದ್ರೂ ಸರಿ, ನಾವು ನಮ್ಮ ಕೆಲಸ ಕರೆಕ್ಟ್ ಆಗಿ ಮಾಡಿದ್ರೆ ಮಿಕ್ಕಿದ್ದು ದೇವರು ನೋಡ್ಕೋಳ್ತಾನೆ ಅಂತಾರೆ ಅಮ್ಮ. 

ಪ್ರೇರಣೆ? 

ನನಗೆ ದೀಪಿಕಾ ಪಡೆಕೋಣೆ ಮತ್ತು ವಿದ್ಯಾ ಬಾಲನ್ ಆಯ್ಕೆ ಮಾಡುವ ಪಾತ್ರಗಳು ತುಂಬಾನೇ ಇಷ್ಟ ಆಗುತ್ತೆ. ಕಂಗನಾ ರಣೌತ್ ಕೂಡಾ ನಂಗೆ ಪ್ರೇರಣೆ ಅನ್ನಬಹುದು. 

ಕನಸಿನ ಪಾತ್ರ? 

ದೆವ್ವದ ಪಾತ್ರ ಮಾಡಬೇಕು ಎಂಬ ವಿಚಿತ್ರ ಆಸೆ ನನ್ನದು. ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿಯ ಪಾತ್ರ ಅಥವಾ ಅರುಂಧತಿ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಮಾಡಿದಂತಹ ಪಾತ್ರಗಳಲ್ಲಿ ನಾನು ಕಾಣಿಸಿಕೊಳ್ಳಬೇಕೆಂಬುದೇ ನನ್ನ ಬಯಕೆ. 

ನಟನೆ ಬಗ್ಗೆ ಹೇಳುವುದಾದ್ರೆ? 

ನಟರಿಗೆ ಒಂದು ಬೋನಸ್ ಇದೆ. ಅದೇನೆಂದರೆ ನಾವು ಸ್ವಲ್ಪ ಸಮಯಕ್ಕೆ ನಾವು ಅಲ್ಲದೇ ಇರುವ ವ್ಯಕ್ತಿ ಆಗಬಹುದು. ಅದು ತುಂಬಾ ಒಳ್ಳೆಯ ಅನುಭವ. 

ಬಿಡುವು ಸಿಕ್ಕಾಗ ಅಪೂರ್ವ ಏನು ಮಾಡ್ತಾರೆ? 

ಹಾಡು ಹೇಳ್ತೇನೆ. ಹಾಡುವುದಕ್ಕೆ ತುಂಬಾ ಇಷ್ಟ ನನಗೆ. ಜೊತೆಗೆ ಸಿನಿಮಾಗಳನ್ನು ನೋಡ್ತೇನೆ. 

ಸತ್ಯಂ ಶಿವಂ ಸುಂದರಂ ಟೀಂ ಹೇಗಿದೆ? 

ಇದು ಒಂದು ತುಂಬು ಕುಟುಂಬದ ಹಾಗೆ. ದೊಡ್ಡ ದೊಡ್ಡ ನಟರ ಜೊತೆ ನಟಿಸುವ ಅವಕಾಶ ದೊರೆತಿದೆ. ಶೂಟಿಂಗ್ ಸಮಯದಲ್ಲಿ ನಾನು ತುಂಬಾ ಎನ್ ಜಾಯ್ ಮಾಡುತ್ತೇನೆ. 

ಬೆಲ್ಳಿತೆರೆಯಲ್ಲೂ ಕಾಣಿಸಿಕೊಂಡಿದ್ದೀರಿ ಅಲ್ವಾ? 

ಬಿ. ಸುರೇಶ್ ನಿರ್ದೇಶನದ ಉಪ್ಪಿನ ಕಾಗದ ಚಿತ್ರದಲ್ಲಿ ನಟಿಸಿದ್ದೇನೆ. 15 ದಿವಸಗಳ ಚಿತ್ರೀಕರಣ. ವರ್ಕ್ ಶಾಪ್ ಥರ ಇತ್ತು. ಸಾಕಷ್ಟು ಕಲಿತೆ. ಇದೀಗ ಅರವಿಂದ್ ಕೌಶಿಕ್ ಅವರ ಸಿನಿಮಾವನ್ನು ಒಪ್ಕೊಂಡಿದ್ದೇನೆ. 

ಮುಂದಿನ ಯೋಜನೆ ?

ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸಬೇಕು. ಒಳ್ಳೆ ಪಾತ್ರಗಳನ್ನು ಒಪ್ಕೋಬೇಕು. ಜೊತಗೆ ಆದಷ್ಟು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಅನ್ನೋದು ನನ್ನ ಫ್ಯೂಚರ್ ಪ್ಲಾನ್. 

ನಿಮಗೆ ಸಿಕ್ಕ ಬೆಸ್ಟ್ ಕಾಂಪ್ಲಿಮೆಂಟ್?

ಹೆಚ್ಚಿನ ಕಾಂಪ್ಲಿಮೆಂಟ್ ಸಿಗೋದು ನನ್ನ ಕೂದಲಿಗೆನೇ. ನಾನು ಗೌತಮಿ ಮತ್ತು ಸುಮನ್ ರಂಗನಾಥ್ ಥರ ಕಾಣಿಸ್ತೀನಿ ಅಂಥ ಸುಮಾರು ಜನ ಹೇಳ್ತಾರೆ. 

ಸೌಂದರ್ಯದ ಗುಟ್ಟು?

ಆದಷ್ಟು ಸದಾ ಕಾಲ ನಗುನಗುತ್ತಿರುವುದೇ ನನ್ನ ಸೌಂದರ್ಯದ ಗುಟ್ಟು. 


4 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್