ಉದಯೋನ್ಮುಖರು

ಕಿರುತೆರೆಯ ಸ್ವಾತಿಮುತ್ತು ಅಮಿತ್ ರಾವ್
0

ಅದೃಷ್ಟ ಯಾವ ರೀತಿಯಲ್ಲಿ ಕಣ್ಣ ಮುಂದೆ ಬರುತ್ತದೆ ಎಂದು ಹೇಳಲಾಗದು. ಆದರೆ ಬಂದಾಗ ಎರಡು ಕೈಗಳಿಂದ ಬಾಚಿಕೊಳ್ಳುವುದು ಜಾಣತನ. ಆಕಸ್ಮಿಕವಾಗಿ ಸಿಕ್ಕ ಅವಕಾಶ ಬದುಕಿನ ದಿಕ್ಕನ್ನೇ ಬದಲಾಯಿಸಬಹುದು. ಅದಕ್ಕೆ ಉದಾಹರಣೆ ಕರಾವಳಿಯ ಪ್ರತಿಭೆ ಅಮಿತ್ ರಾವ್. ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ನಟಿಸುವ ಮೂಲಕ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಅಮಿತ್ ಅವರು ಮೂಲತ ಬೆಳ್ತಂಗಡಿಯವರ ಚಾರ್ಮಾಡಿಯವರು. 

ಕಡಲನಗರಿ ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಅಮಿತ್ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಇಲ್ಲೇ ಪಡೆದರು. ಮುಂದೆ ತನ್ನಿಷ್ಟದಂತೆ ಫ್ಯಾಷನ್ ಡಿಸೈನ್ ಕೋರ್ಸ್ ಮುಗಿಸಿರುವ ಅಮಿತ್ ಗೆ ಡ್ಯಾನ್ಸ್ ಎಂದರೆ ಪ್ರಾಣ. ಸ್ನೇಹಿತರ ಜೊತೆಗೂಡಿ ‘ಸೀ ಬರ್ಡ್ ‘ ಎಂಬ ತಂಡ ಕಟ್ಟಿಕೊಂಡಿದ್ದ ಅಮಿತ್ ಹಲವು ಸ್ಪರ್ಧೆ, ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. 

ವಿನು ಬಳಂಜ ನಿರ್ದೇಶನದ ಚಿಟ್ಟೆ ಹೆಜ್ಜೆ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಅಮಿತ್ ತನ್ನ ಅಪೂರ್ವ ನಟನೆಯಿಂದ ಜನರ ಮನ ಸೆಳೆದರು. ಮುಂದೆ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ದಿನೇಶ್ ಬಾಬು ನಿರ್ದೇಶನದ ಸ್ವಾತಿ ಮುತ್ತು ಧಾರಾವಾಹಿಯ ಮುತ್ತು ಎಂಬ ಮುಗ್ಧ ಹುಡುಗನ ಪಾತ್ರ ಅವರಿಗೆ ಸಾಕಷ್ಟು ಕೀರ್ತಿಯನ್ನು ತಂದುಕೊಟ್ಟಿತು. ನಂತರ ಮೇಘ ಮಯೂರಿ, ಈ ಬಂಧ, ಮೈನಾ ಧಾರಾವಾಹಿಗಳಲ್ಲಿ ನಟಿಸಿರುವ ಅಮಿತ್ ಪ್ರಸ್ತುತ ಕಲರ್ಸ್ ಕನ್ನಡಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅವರು ಅಗ್ನಿಸಾಕ್ಷಿಯ ಕಿಶೋರ್ ಎಂದೇ ಮನೆ ಮಾತಾಗಿದ್ದಾರೆ. ಎಲ್ಲರೂ ಅವರನ್ನು ಕಿಶೋರ್ ಎಂದೇ ಗುರುತು ಹಿಡಿಯುತ್ತಾರೆ. 

ನೋಡಲು ಚಾಕಲೇಟ್ ಹೀರೋ ತರಹ ಇರಹ ಇರುವ ಅಮಿತ್ ಅವರನ್ನು ಜನ ನೀವು ಹೆಚ್ಚಾಗಿ ವಿಲನ್ ಆಗಿ ಯಾಕೆ ಕಾಣಿಸಿಕೊಳ್ಳುತ್ತಿದ್ದೀರಿ ಎಂದು ಕೇಳುತ್ತಾರಂತೆ. ಅದಕ್ಕೆ ವಿಲನ್ ಪಾತ್ರ ನಿರ್ವಹಿಸುವುದು ತುಂಬಾ ಕಷ್ಟ. ಅದು ತುಂಬಾ ಚಾಲೆಂಜಿಗ್ ಪಾತ್ರ. ಹಾಗಾಗಿ ಅದನ್ನೇ ನಿರ್ವಹಿಸುತ್ತೇನೆ ಎನ್ನುತ್ತಾರೆ ಅಮಿತ್. 

ಇನ್ನು ಅಮಿತ್ ಪ್ರತಿಭೆ ಬರೀ ಕಿರುತೆರೆಗೆ ಮಾತ್ರ ಸೀಮಿತವಲ್ಲ. ಖದೀಮರು, ಪಗಡೆ, ಭಗವಂತ ಕೈ ಕೊಟ್ಟ, ಮಾಗಡಿ, ಸಾಗರ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಯಲ್ಲಿ ತಮ್ಮ ಛಾಪು ಮೂಡಿಸಿದರು. ಪೆದ್ದ, ಮೂಕ, ಸೈಕೋ, ವಿಲನ್ ಹೀಗೆ ನಾನಾ ನಮೂನೆಯ ಪಾತ್ರಗಳಿಗೆ ಜೀವ ತುಂಬಿದ್ದಾರೆ ಅಮಿತ್.  

ಅವರ ನಟನೆಯ ತಮಿಳು ಸಾಹಸಮಯ ಚಿತ್ರ “ಚೆಂಬುಳಂ” ಬಿಡುಗಡೆಗೆ ಸಿದ್ಧವಾಗಿದೆ. ತುಳುಚಿತ್ರ ಜುಗಾರಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕೋಸ್ಟಲ್ ವುಡ್ ನಲ್ಲಿ ಕಾಣಿಸಿಕೊಂಡಿರುವ ಅಮಿತ್ ಇತ್ತೀಚೆಗೆ ಬಿಡುಗಡೆಯಾದ ತುಳು ಸಿನಿಮಾ ದೊಂಬರಾಟದಲ್ಲಿ ನಾಯನ ನಟನಾಗಿ ಮಿಂಚಿದ್ದಾರೆ. ಮಾತ್ರವಲ್ಲ ವಿಶೇಷವೆಂದರೆ ಈ ಚಿತ್ರದಲ್ಲಿ ಅಮಿತ್ ರಾವ್ ದ್ವಿಪಾತ್ರದಲ್ಲಿ ಮಿಂಚಿದ್ದಾರೆ.

- ಅನಿತಾ ಬನಾರಿ 


5 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್