ಉದಯೋನ್ಮುಖರು

ನಾಗಕನ್ನಿಕೆಯಾಗಿ ಬದಲಾದ ಗುಂಡ್ಯಾನ ಹೆಂಡ್ತಿ!
0

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಕನ್ನಿಕೆ ಧಾರಾವಾಹಿಯಲ್ಲಿ ನಾಗಿಣಿ ಶಿವಾನಿ ಪಾತ್ರದಲ್ಲಿ ಅಭಿನಯಿಸುತ್ತಿರುವ ಅದಿತಿ ಪ್ರಭುದೇವ ದಾವಣಗೆರೆಯ ಬೆಡಗಿ. ಗುಂಡ್ಯಾನ ಹೆಂಡ್ತಿ ಧಾರಾವಾಹಿಯ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ಅದಿತಿ ಇತ್ತೀಚೆಗೆ ಬಿಡುಗಡೆಯಾದ ಧೈರ್ಯಂ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಇದೀಗ ನಾಗಕನ್ನಿಕೆಯಾಗಿ ಮಿಂಚುತ್ತಿರುವ ಈಕೆ ತನ್ನ ಅಪ್ಪ ಅಮ್ಮನನ್ನು ಕೊಂದ ಕುಟುಂಬದವರೊಂದಿಗೆ ಸೇಡು ತೀರಿಸ ಬೇಕೆಂಬ ಹಠದಿಂದ ಇದೀಗ ಮನುಷ್ಯ ರೂಪದಲ್ಲಿ ಬಂದಿದ್ದಾಳೆ. ಮುಂದೆ ಏನಾಗುತ್ತದೆ ಎಂಬುದು ಕುತೂಹಲದ ಸಂಗತಿ. 

ಎಂಬಿಎ ಓದುತ್ತಿರುವ ಸಮಯದಲ್ಲಿ ಪಾಕಟ್ ಮನಿಗೋಸ್ಕರ ಆಡಿಯೋ ಬಿಡುಗಡೆಗೆ ಆ್ಯಂಕರಿಂಗ್ ಹಾಗೂ ಧ್ವನಿ ನೀಡುತ್ತಿದ್ದ ಅದಿತಿಯನ್ನು ನೋಡಿ ನೀವು ಸಿನಿಮಾದಲ್ಲಿ ಯಾಕೆ ನಟಿಸಬಾರದು ಎಂದು ಕೇಳುತ್ತಿದ್ದರು. ಯಾಕೆ ಪ್ರಯತ್ನಿಸಬಾರದು ಎಂದ ಅದಿತಿ ಮುಂದೆ ಗುಂಡ್ಯಾನ ಹೆಂಡ್ತಿ ಆಗಿ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಯಸಿದರು. 

‘’ಮೊದಲ ಬಾರಿ ಕ್ಯಾಮರಾ ಎದುರಿಸಿದಾಗ ನನಗೆ ಯಾವುದೇ ರೀತಿಯ ಭಯವಾಗಲಿಲ್ಲ’’ ಎನ್ನುವ ಅದಿತಿ ‘’ ನನಗೆ ಯಾವುದೇ ಪಾತ್ರ ದೊರೆಯಲಿ, ಅದನ್ನು ನಾನು ತುಂಬಾ ಪ್ರೀತಿಯಿಂದ ನಿರ್ವಹಿಸುತ್ತೇನೆ. ನಾನು ಯಾವತ್ತಿಗೀ ಡೈಲಾಗ್ಗಳನ್ನು ಪ್ರಾಕ್ಟೀಸ್ ಮಾಡುವವಳಲ್ಲ. ಬದಲಿಗೆ ಸಂಪೂರ್ಣವಾಗಿ ನಾನು ನನ್ನನ್ನು ಪಾತ್ರದಲ್ಲಿ ತೊಡಗಿಸಿಕೊಳ್ಳುತ್ತೇನೆ’’ ಎನ್ನುತ್ತಾರೆ. 

ನನಗೆ ಐತಿಹಾಸಿಕ ಪಾತ್ರದಲ್ಲಿ ನಟಿಸಬೇಕೆಂಬ ಮಹಾದಾಸೆ ಇತ್ತು. ನಾಗಕನ್ನಿಕೆಯ ಮೂಲಕ ನನ್ನ ಆಸೆ ನನಸಾಗಿದೆ ಎನ್ನುವ ದಾವಣಗೆರೆಯ ಚೆಲುವೆ ನಟನೆಯಿಂದ ನಾನು ತಾಳ್ಮೆ ಮಾತ್ರವಲ್ಲ ಶ್ರಮ ವಹಿಸಿ ಕೆಲಸ ಮಾಡುವುದು ಹೇಗೆ ಎಂಬುದನ್ನು ಕಲಿತುಕೊಂಡೆ ಎಂದು ತಮ್ಮ ನಟನಾ ಪಯಣವನ್ನು ವಿವರಿಸುತ್ತಾರೆ. 

ಡಾ. ರಾಜ್ ಕುಮಾರ್ ಅವರೇ ನನಗೆ ಸ್ಫೂರ್ತಿ ಎನ್ನುವ ಅದಿತಿಗೆ ರಾಧಿಕಾ ಪಂಡಿತ್ ಅವರು ನೆಚ್ಚಿನ ನಟಿ. ಯಾವುದೇ ನಟಿಯಾಗಲೀ ರೂಪ ಇಲ್ಲದಿದ್ದರೂ ಪರವಾಗಿಲ್ಲ, ಒಳ್ಳೆಯ ಕೆಲಸ ಮತ್ತು ನಡವಳಿಕೆ ಮುಖ್ಯ. ಅದನ್ನು ನಾನು ಅವರಲ್ಲಿ ಕಂಡಿದ್ದೇನೆ ಎನ್ನುವ ಈ ಚೆಲುವೆಗೆ ಬರವಣಿಗೆ ತುಂಬಾ ಇಷ್ಟ. ದುಃಖವಾಗಲೀ, ಖುಷಿಯಾಗಲಿ ಚಿಕ್ಕಪುಟ್ಟ ಕವನಗಳನ್ನು ಬರೆಯುವ ಇವರು ಬಿಡುವಿನ ಸಮಯದಲ್ಲಿ ನಾಯಿಯ ಜೊತೆ ಆಟವಾಡುತ್ತಾ ಕಳೆಯುತ್ತಾರೆ. 

ಸಂತೋಷವಾಗಲಿ, ದುಃಖವಾಗಲಿ ನಾನು ಸದಾ ನಗುನಗುತ್ತಿರುತ್ತೇನೆ. ಅದುವೇ ನನ್ನ ಸೌಂದರ್ಯದ ಗುಟ್ಟು ಎನ್ನುವ ಅದಿತಿ ಪ್ರಭುದೇವ ಬಣ್ಣದ ಲೋಕ ಕಲರ್ ಫುಲ್ ಆಗಿರಲಿ. 

- ಅನಿತಾ ಬನಾರಿ 


2 weeks ago Udayonmukharu

Related Articles

ನಿಮ್ಮ ಅಭಿಪ್ರಾಯಗಳು


Balkani News Polls

ನಿಮ್ಮ ಇಷ್ಟ ಅದ ಚಿತ್ರಯಾವುದು .?
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್

A PHP Error was encountered

Severity: Notice

Message: Undefined variable: newpost

Filename: views/polls_page.php

Line Number: 286