ಉದಯೋನ್ಮುಖರು

ಕಿರುತೆರೆಯ ಸೂಪರ್ ಸ್ಟಾರ್ ಸಾಮ್ರಾಟ್ ಆಗಿ ಗುಬ್ಬಿಯ ತ್ರಿವಿಕ್ರಮ್
0

ಬಣ್ಣ ಹಚ್ಚಿ ಕ್ಯಾಮರಾ ಮುಂದೆ ಬಂದು ನಟಿಸುತ್ತೇನೆ ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ ಎನ್ನುವ ತ್ರಿವಿಕ್ರಮ್ ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು. ತುಮಕೂರಿನ ಗುಬ್ಬಿಯ ತ್ರಿವಿಕ್ರಮ್ ಇದೀಗ ಮನೋಜ್ಞ ಅಭಿನಯದಿಂದ ಸೀರಿಯಲ್ ಪ್ರಿಯರ ಕಣ್ಮಣಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಪದ್ಮಾವತಿ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ಸಾಮ್ರಾಟ್ ನಾಗಿ ನಟಿಸುತ್ತಿರುವ ತ್ರಿವಿಕ್ರಮ್ ಬೆಳ್ಳಿತೆರೆಯ ಮೂಲಕ ನಟನಾ ರಂಗದಲ್ಲಿ ಗುರುತಿಸಿಕೊಂಡವರು. ಅರ್ಜುನ್ ಸರ್ಜಾ ಅವರ ಕಾರ್ಗಿಲ್ ನಲ್ಲಿ ಮೊದಲ ಬಾರಿ ಬಣ್ಣ ಹಚ್ಚಿರುವ ತ್ರಿವಿಕ್ರಮ್ ಇದೀಗ ಕಿರುತೆರೆಯಲ್ಲಿ ಬ್ಯುಸಿ. 

ನವರಾತ್ರಿ, ಪ್ರೋಡಕ್ಷನ್ ನಂ 2, ಹಾಗೂ ಇನ್ನು ಬಿಡುಗಡೆಯಾಗಬೇಕಿರುವ ಪ್ರೇಮ ಬರಹ ಚಿತ್ರದಲ್ಲಿ ಕಮಾಂಡೋ ಪಾತ್ರದಲ್ಲಿ ಅಭಿನಯಿಸಿರುವ ತ್ರಿವಿಕ್ರಮ್ ಹಲವಾರು ಸಿನಿಮಾ ಅವಕಾಶಗಳು ಬರುತ್ತಿದೆ. ‘’ಈಗ ನಾನು ಪದ್ಮಾವತಿ ಧಾರಾವಾಹಿಯಲ್ಲಿ ಬ್ಯುಸಿಯಾಗಿರುವುದರಿಂದ ಸದ್ಯಕ್ಕೆ ಯಾವ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿಲ್ಲ’’ ಎನ್ನುತ್ತಾರೆ ತ್ರಿವಿಕ್ರಮ್. 

‘’ಪದ್ಮಾವತಿ ಧಾರಾವಾಹಿಯಿಂದ ನಾನು ಸಾಕಷ್ಟು ಅನುಭವವನ್ನು ಪಡೆದುಕೊಂಡಿದ್ದೇನೆ. ಜನ ಇಂದು ನನ್ನನ್ನು ಸಾಮ್ರಾಟ್ ಎಂದು ಗುರುತಿಸುವಾಗ ತುಂಬಾ ಖುಷಿಯಾಗುತ್ತದೆ. ಇದಕ್ಕೆ ನಿರ್ದೇಶಕ ನಿರ್ಮಲಾ ಚೆನ್ನಪ್ಪ ಕಾರಣ ‘’ ಎಂದು ಕಿರುತೆರೆಯ ಪ್ರಯಾಣವನ್ನು ವಿವರಿಸುತ್ತಾರೆ ತ್ರಿವಿಕ್ರಮ್. 

ಹಾಲಿವುಡ್ ಸಿನಿಮಾದಲ್ಲಿ ನಟಿಸುವ ಕನಸಿದೆ ಎನ್ನುವ ತ್ರಿವಿಕ್ರಮ್ ಇಂದು ನಟನಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ಅವರ ಅಮ್ಮನೇ ಕಾರಣವಂತೆ. ಸುದೀಪ್ ದರ್ಶನ್ ನನ್ನ ನೆಚ್ಚಿನ ನಟರು ಎನ್ನುವ ತ್ರಿವಿಕ್ರಮ್ ಗೆ ಸ್ಪೋರ್ಟ್ಸ್ ಎಂದರೆ ಇಷ್ಟ. 

- ಅನಿತಾ ಬನಾರಿ 


7 months ago Udayonmukharu
ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್