ಉದಯೋನ್ಮುಖರು

ಸುಬ್ಬಿಯಾದ ಪುಟ್ಟ ಗೌರಿ
0

ಮನೋಜ್ಞ ಅಭಿನಯದಿಂದ ವೀಕ್ಷಕರ ಮನ ಗೆದ್ದಿರುವ ರಂಜನಿ ರಾಘವನ್ ಸೀರಿಯಲ್ ಪ್ರಿಯರ ಪಾಲಿನ ಮುದ್ದು ಕಣ್ಮಣಿ. ಸದ್ಯದ ಮಟ್ಟಿಗೆ ಆಕೆ ಪುಟ್ಟ ಗೌರಿ ಎಂದೇ ಪರಿಚಿತ. ಆಕಾಶದೀಪ ಧಾರಾವಾಹಿ ಮೂಲಕ ರಂಜನಿ ಬಣ್ಣದ ಲೋಕಕ್ಕೆ ಕಾಲಿಟ್ಟರೂ ಅವರಿಗೆ ಹೆಸರು ತಂದು ಕೊಟ್ಟದ್ದು ಪುಟ್ಟ ಗೌರಿ ಪಾತ್ರ. 

ಎಂಬಿಎ ಮುಗಿಸಿರುವ ರಂಜನಿ ಗೆ ನಟಿಯಾಗಬೇಕು ಎಂಬ ಬಯಕೆಯೇನು ಇರಲಿಲ್ಲ. ಬದಲಿಗೆ ತಾನೊಬ್ಬಳು ಗಾಯಕಿಯಾಗಬೇಕು ಎಂಬ ಮಹದಾಸೆ ಇತ್ತು. ನಟನಾ ಕ್ಷೇತ್ರಕ್ಕೆ ಬಂದದ್ದು ಆಕಸ್ಮಿಕ. ದೊರೆತ ಅವಕಾಶವನ್ನು ಬಿಡಲೊಲ್ಲದ ರಂಜನಿ ಇದೀಗ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್ 2016 ರ ಜನ ಮೆಚ್ಚಿದ ನಾಯಕಿ ಅವಾರ್ಡ್ ಪಡೆದಿರುವುದು ಇದಕ್ಕೆ ಸಾಕ್ಷಿ. ಜೊತೆಗೆ ಸತತ ಎರಡನೇ ಬಾರಿಗೆ ಮನೆ ಮೆಚ್ಚಿದ ಸೊಸೆ ಅವಾರ್ಡ್ ಕೂಡಾ ಪಡೆದುಕೊಂಡಿರುತ್ತಾರೆ. 

ರಂಗಭೂಮಿಯ ಮೂಲಕ ನಟನಾ ಪಯಣವನ್ನು ಆರಂಭಿಸಿದ ರಂಜನಿ ‘’ ನಾನು ಯಾವತ್ತೂ ನಟಿಯಾಗಬೇಕು ಎಂದು ಅಂದುಕೊಂಡವಳಲ್ಲ. ಕಾಲೇಜಿನಲ್ಲಿ ರಂಗಭೂಮಿಗೆ ಸಂಬಂಧಿಸಿದಂತಹ ಚಟುವಟಿಕೆಗಳು ನಡೆಯುತ್ತಿದ್ದವು.. ಸಂದರ್ಭದಲ್ಲಿ ಪಾತ್ರವೊಂದರಲ್ಲಿ ನಟಿಸುವ ಅವಕಾಶ ದೊರೆಯಿತು. ನೋಡೋಣ ಎಂದು ಅಭಿನಯಿಸಿದೆ .  ಆ ಅಭಿನಯಕ್ಕೆ ಮೆಚ್ಚುಗೆಯೂ ಬಂತು. ಅಲ್ಲಿಂದ ರಂಗಭೂಮಿಯತ್ತ ಆಸಕ್ತಿ ಬೆಳೆಯಿತು’’ ಎನ್ನುತ್ತಾರೆ ರಂಜನಿ. 

ನಟನೆಯ ಹೊರತಾಗಿ ರಂಜನಿ ಉತ್ತಮ ಗಾಯಕಿಯೂ ಹೌದು. ನಾಲ್ಕನೇ ವಯಸ್ಸಿನಲ್ಲಿಯೇ ಹಾಡು ಹೇಳಲು ಆರಂಭಿಸಿರುವ ಇವರು ಶಾಸ್ತ್ರೀಯ ಸಂಗೀತ ಕಲಿರುತ್ತಾರೆ. ಚಿಂತನಪಲ್ಲಿ ಶ್ರೀನಿವಾಸ ಮತ್ತು ಆಶಾ ವಿಶ್ವನಾಥ್ ಅವರ ಸಂಗೀತ ಗರಡಿಯಲ್ಲಿ ಪಳಗಿರುವ ರಂಜನಿಗೆ ಮುಂದೆ ತಾನೊಬ್ಬಳು ಗಾಯಕಿ ಆಗಲೇಬೇಕು ಎಂಬ ಬಯಕೆ. ಇಂತಿಪ್ಪ ಬೆಡಗಿ ಸದ್ಯಕ್ಕೆ ಶೂಟಿಂಗ್ ನಲ್ಲಿ ಬ್ಯುಸಿ. 

ಮುದ್ದು ಮುಖದ ರಂಜನಿ ಈಗಾಗಲೇ ಹಿರಿತೆರೆಗೆ ಪಾದಾರ್ಪಣೆ ಮಾಡಿಯಾಗಿದೆ. ಅವರ ಅಭಿನಯದ  ಮೊದಲ ಸಿನಿಮಾ ರಾಜಹಂಸದ ಶೂಟಿಂಗ್ ಮುಗಿದು ತೆರೆ ಕಾಣಲು ಸಿದ್ಧವಾಗಿದೆ. ಕಿರುತೆರೆಯ ಪುಟ್ಟಗೌರಿ ಹಿರೆತೆರೆ ಬಂದ ಕಥೆ ನಿಜಕ್ಕೂ ರೋಚಕವಾಗಿದೆ. ಮಜಾ ಟಾಕೀಸ್ ಶೋ ವಿನಲ್ಲಿ ರಂಜನಿ ಬಂದಾಗ ಸೃಜನ್ ಅವರು ಹಾಡು ಹಾಡಿಸಿದ್ದರು. ಇದನ್ನು ಗಮನಿಸಿದ ನಿರ್ದೇಶಕ ಜಡೇಶ್ ಕುಮಾರ್ ಸಿನಿಮಾದಲ್ಲಿ ನಟಿಸುವಂತೆ ಅವಕಾಶ ನೀಡಿದರು.

ರಾಜಹಂಸ ಎರಡು ವಿಭಿನ್ನ ಸಾಂಸ್ಕೃತಿಕ ಹಿನ್ನಲೆ ಹೊಂದಿದ ಕುಟುಂಬಗಳ ನಡುವಿನ ಕಥೆ. ಒಂದು ಸಾಂಪ್ರದಾಯಿಕ ಕುಟುಂಬವಾದರೆ, ಮತ್ತೊಂದು ಆಧುನಿಕ ಕುಟುಂಬ. ಈ ಎರಡೂ ಕುಟುಂಬಗಳ ಹುಡುಗ ಹುಡುಗಿ ನಡುವೆ ಪ್ರೀತಿ ಉಂಟಾಗುತ್ತದೆ. ಆ ಪ್ರೇಮಿಗಳು ಹೇಗೆ ಒಂದಾಗುತ್ತವೆ ಎಂಬುದು ಚಿತ್ರದ ಸಾರಾಂಶ. 

 ಇದರ ನಡುವೆ ಮುದ್ದು ಮುಖದ ಬೆಡಗಿ ರಂಜನಿ ಸುಬ್ಬಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ನಾಯಕಿಯಾಗಿ ನಟಿಸಲಿರುವ ಸುಬ್ಬ ಸುಬ್ಬಿ ಸಿನಿಮಾದ ಶೂಟಿಂಗ್ ಆರಂಭವಾಗಿದೆ. 

ಪೌರಾಣಿಕ ಪಾತ್ರದಲ್ಲಿ ನಟಿಸಬೇಕು ಎಂಬ ಮಹದಾಸೆ ಹೊಂದಿರುವ  ರಂಜನಿ ಅವರ ನಟನಾ ಪಯಣ ನಿರಂತರವಾಗಿ ಸಾಗಲಿ ನಮ್ಮ ಹಾರೈಕೆ. 

- ಅನಿತಾ ಬನಾರಿ 


7 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್