ಉದಯೋನ್ಮುಖರು

ಬಣ್ಣದ ಲೋಕದಲ್ಲಿ ಮೈಸೂರಿನ ಚೆಲುವೆ
0

ತೇಜಸ್ವಿನಿ... ತಾನಾಗಿಯೇ ಒಲಿದು ಬಂದ ಅವಕಾಶವನ್ನು ಒಲ್ಲೆ ಎಂದು ತಿರಸ್ಕರಿಸದೇ ಸಂತಸದಿಂದ ಸ್ವೀಕರಿಸಿ, ಇದೀಗ ಅದನ್ನು ಪ್ರೀತಿಸುವ ಈ ಚೆಲುವೆ ಮೈಸೂರಿನವರು. ಮಧುಬಾಲ ಧಾರಾವಾಹಿಯಲ್ಲಿ ಪೋಷಕನಟಿಯಾಗಿ ನಟಿಸಿರುವ ತೇಜಸ್ವಿನಿ ಸದ್ಯ ಸ್ಟಾರ್ ಸುವರ್ಣ ವಾಹಿನಿಯ ನೀಲಿ ಧಾರಾವಾಹಿಯ ರೇಖಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘’ನಟನೆ ಬಗ್ಗೆ ನನಗೆ ವಿಶೇಷವಾದ ಆಸಕ್ತಿಯೇನೂ ಇರಲಿಲ್ಲ. ನಾನೊಬ್ಬಳು ನಟಿಯಾಗುತ್ತೇನೆ ಎಂಬ ಕನಸು ನನಗಿರಲಿಲ್ಲ. ಆದರೆ ಬಂದ ಅವಕಾಶವನ್ನು ಒಲ್ಲೆ ಎನ್ನದೆ ಒಪ್ಪಿಕೊಂಡೆ. ಇದೀಗ ನಾನು ನಟನೆಯನ್ನು ತುಂಬಾ ಪ್ರೀತಿಸುತ್ತೇನೆ’’ ಎನ್ನುವ ತೇಜಸ್ವಿನಿ ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಯಲ್ಲಿ ನಟಿಸುವುದರ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುತ್ತಾರೆ. 

ಫೇಸ್ ಬುಕ್ ನಲ್ಲಿ ತೇಜಸ್ವಿನಿ ಫೋಟೋ ನೋಡಿದ ನಿರ್ದೇಶಕರೊಬ್ಬರು ಧಾರಾವಾಹಿಯಲ್ಲಿ ನಟಿಸುತ್ತೀರಾ ಎಂದು ಕೇಳಿದರು. ಇಲ್ಲ ಎನ್ನದೆ ಆಡಿಶನ್ ನಲ್ಲಿ ಭಾಗವಹಿಸಿದ ತೇಜಸ್ವಿನಿ ಸೆಲೆಕ್ಟ್ ಕೂಡಾ ಆಗಿದ್ದರು. ಆದರೆ ಆ ಧಾರಾವಾಹಿ ಆರಂಭವಾಗಲೇ ಇಲ್ಲ. ಮುಂದೆ ಹೊಸ ಪ್ರಯತ್ನಕ್ಕೆ ಮುಂದಾದ ಈಕೆ ಮುಂದೆ ಸೌಭಾಗ್ಯವತಿ ಮತ್ತು ಮಹಾನದಿ ಧಾರಾವಾಹಿಗಳಲ್ಲಿ ಅಭಿನಯಿಸಿರುತ್ತಾರೆ.

ನಟನೆಯ ಬಗ್ಗೆ ಯಾವುದೇ ತರಬೇತಿಯನ್ನು ಪಡೆದವರಲ್ಲ. ಹಾಗಿದ್ದರೂ ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ಅವರಿಗೆ ಯಾವುದೇ ರೀತಿಯ ಅಂಜಿಕೆಯಿರಲಿಲ್ಲ. ನಟನೆಯ ನಗ್ಗೆ ಯಾವುದೇ ರೀತಿಯ ತರಬೇತಿಗೆ ಹೋಗಬೇಕು ಎಂದು ನನಗೆ ಎಂದಿಗೂ ಅನ್ನಿಸಲಿಲ್ಲ. ಯಾಕೆಂದರೆ ಅನುಭವಗಳೇ ನಟಿಸುವುದನ್ನು ಕಲಿಸುತ್ತದೆ ಎಂದು ಅಂದುಕೊಂಡವಳು ನಾನು. ಶೂಟಿಂಗ್ ನ ವೇಳೆ ತಪ್ಪುಗಳಾದರೆ ನಿರ್ದೇಶಕರು ತಿದ್ದುತ್ತಾರೆ ಎನ್ನುವ ಮೈಸೂರಿನ ಚೆಲುವೆ ಶಾಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವುದು ಮಾತ್ರವಲ್ಲದೇ ಪ್ರತಿವರ್ಷ ತಪ್ಪದೇ ಡ್ಯಾನ್ಸ್ ಮಾಡುತ್ತಿದ್ದರು! ವೇದಿಕೆ ಏರಲು ಯಾವುದೇ ಭಯವಿರದ ಅವರಿಗೆ ನಟನೆ ಸುಲಭವಾಯಿತು. 

‘’ನಟನೆಯನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಕೆಲಸವನ್ನು ಎಂಜಾಯ್ ಮಾಡುತ್ತಿದ್ದೇನೆ. ನಾನು ಈ ಕ್ಷೇತ್ರಕ್ಕೆ ಬಂದದ್ದು ಒಳ್ಳೆಯದಾಯಿತು ಎಂದು ಈಗ ನನಗೆ ಅನ್ನಿಸುತ್ತಿದೆ’’ ಎನ್ನುವ ತೇಜಸ್ವಿನಿ ಅವರಿಗೆ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಬಯಕೆ. ನಾನು ಈಗ ಮಾಡಿರುವ ಎಲ್ಲಾ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ ಎಂದು ಹೇಳುವ ಮುದ್ದು ಮುಖದ ಬೆಡಗಿಗೆ ಒಂದೇ ತರಹದ ಪಾತ್ರಗಳಲ್ಲಿ ನಟಿಸಲು ಇಷ್ಟವಿಲ್ಲ. ಉತ್ತಮ ಅವಕಾಶ ದೊರೆತರೆ ಸಿನಿಮಾದಲ್ಲಿ ಅಭಿನಯಿಸುವ ಕನಸಿದೆ ಎನ್ನುವ ಮೈಸೂರಿನ ಕುವರಿಗೆ ಹೆಸರು ತಂದು ಕೊಟ್ಟದ್ದು ಮಹಾನದಿಯ ಮೇಘನಾ ಪಾತ್ರ. ಜನ ಇಂದ ನನ್ನನ್ನು ಮೇಘನಾ ಎಂದೇ ಗುರುತಿಸುವಾಗ ನಾನು ಈ ಕ್ಷೇತಕ್ಕೆ ಬಂದದ್ದು ಸಾರ್ಥಕವೆನಿಸುತ್ತದೆ ಎನ್ನುತ್ತಾರೆ ತೇಜಸ್ವಿನಿ. 

ನಟನೆ ನನಗೆ ತುಂಬಾ ತಾಳ್ಮೆ ಕಲಿತಿದ್ದೇನೆ. ಮೊದಲು ನಾನು ಪಟಪಟ ಅಂಥ ಮಾತಾಡ್ತಾ ಇದ್ದೆ. ಈಗ ಸ್ವಲ್ಪ ನಿಧಾನವಾಗಿ ಮಾತಾಡೋದನ್ನ ಅಭ್ಯಾಸ ಮಾಡಿಕೊಂಡಿದ್ದೇನೆ. ನಟನೆ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎಂದಾದರೆ ಪ್ರತಿಭೆ ಇರಬೇಕು. ಮಾತ್ರವಲ್ಲ ಅದರ ಜೊತೆಗೆ ಲಕ್ ಕೂಡಾ ಇರಬೇಕು ಎನ್ನುತ್ತಾರೆ. 

‘’ ನಾನಿಂದು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ನನ್ನ ಅಮ್ಮನೇ ಕಾರಣ. ಅವರ ಪ್ರೋತ್ಸಾಹದಿಂದಲೇ ಇದೆಲ್ಲಾ ಸಾಧ್ಯವಾದದ್ದು. ಅಪ್ಪನಿಗೆ ನಾನು ಈ ಕ್ಷೇತ್ರಕ್ಕೆ ಬರಲು ಇಷ್ಟವಿರಲೇ ಇಲ್ಲ. ಆದರೆ ಇದೀಗ ನನ್ನ ಬೆಳವಣಿಗೆಯನ್ನು ಕಂಡು ಅಪ್ಪನಿಗೂ ಸಂತಸವಾಗಿದೆ’’ ಎಂದು ತಮ್ಮ ಕುಟುಂಬದವರು ನೀಡಿದ ಬೆಂಬಲವನ್ನು ವಿವರಿಸುತ್ತಾರೆ.

- ಅನಿತಾ ಬನಾರಿ


7 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್