ಉದಯೋನ್ಮುಖರು

ಫೇಸ್ ಬುಕ್ ನಲ್ಲಿ ಸಿಕ್ಕ ಅವಳು…. ಮೇಘನಾ!
0

ಕನ್ನಡ ಧಾರಾವಾಹಿ ವೀಕ್ಷಕರಿಗೆ ಈ ಬೆಡಗಿ ಅಪರಿಚಿತರೇನಲ್ಲ. ತನ್ನ ಮನೋಜ್ಞ ಅಭಿನಯದಿಂದ ವೀಕ್ಷಕರ ಮನ ಸೆಳದಿರುಚ ಚಿತ್ರದುರ್ಗದ ಚೆಲುವೆಯ ಹೆಸರು ಮೇಘನ ಗೌಡ. ಅರಗಿಣಿ ಧಾರಾವಾಹಿಯಲ್ಲಿ ತುಂಟ ಹುಡುಗಿ ಖುಷಿ ಪಾತ್ರಧಾರಿಯಾಗಿ ಮನೆಮಾತಾಗಿರುವ ಮೇಘನ ಸದ್ಯ ಮಾನಸಯಾಗಿ ಬದಲಾಗಿದ್ದಾರೆ! ಹೌದು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅವಳು ಧಾರಾವಾಹಿಯಲ್ಲಿ ಮಾನಸ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ. 

ಮಾನಸಗೆ ಮನೆಯವರೆಂದರೆ ಪ್ರಾಣ. ಮನೆಯವರಿಗಾಗಿ ಆಕೆ ಯಾವುದೇ ತ್ಯಾಗಕ್ಕೂ ಬೇಕಾದರೂ ತಯಾರಿರುತ್ತಾಳೆ. ಅದೇ ರೀತಿ ಮನೆಯವರಿಗೆ ತೊಂದರೆ ಆದರೆ ಅದರ ವಿರುದ್ಧ ಹೋರಾಟವನ್ನು ಮಾಡುತ್ತಾಳೆ. ತಂಗಿಯ ಮದುವೆಯನ್ನು ಮಾಡಿರುವ ಮೇಘನ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಮಧು ಅವರನ್ನು ವಿವಾಹವಾಗಿದ್ದಾಳೆ. ಮಧುವ ಹೆಂಡತಿ ಪದ್ಮಾಳಿಗೆ ಹುಷಾರಿರುವುದಿಲ್ಲ. ಹೆಂಡತಿಯ ಒತ್ತಾಯಕ್ಕೆ ಮಣಿದು ಮಧು ಮಾನಸಳನ್ನು ಮದುವೆಯಾಗುತ್ತಾನೆ. ಮಧು ಅಕ್ಕ ಮಹೇಶ್ವರಿಯ ಕುತಂತ್ರವನ್ನು ಅರಿತಿರುವ ಮಾನಸ ಮಧು ಕುಟುಂಬವನ್ನು ಕಾಪಾಡುವ ನಿರ್ಧಾರ ಮಾಡುತ್ತಾಳೆ. ಅದೇ ಕಾಲಕ್ಕೆ ತಂಗಿಯ ಸಂಸಾರ ಹಾಳಾಗದಂತೆ ನೋಡಿಕೊಳ್ಳುತ್ತಾಳೆ. ಇದು ಮಾನಸ ಪಾತ್ರದ ಪರಿಚಯ. 

ಅವಳು ಧಾರಾವಾಹಿಯಲ್ಲಿ ನನ್ನದು ಜವಾಬ್ದಾರಿ ಇರುವ ಹುಡುಗಿಯ ಪಾತ್ರ ಎನ್ನುವ ಮೇಘನ ಗೌಡ ಆಕಸ್ಮತ್ತಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟವರು. ನಟನೆಯ ಬಗ್ಗೆ ಏನೂ ತಿಳಿಯದ ಮೇಘನಳಿಗೆ ಇದು ಬಯಸದೇ ಬಂದ ಅವಕಾಶ. ಫೇಸ್ ಬುಕ್ ನಲ್ಲಿ ಇವರ ಫೋಟೋ ನೋಡಿದ ರವಿ ಗರಣಿ ಅರಗಿಣಿ ಧಾರಾವಾಹಿಯಲ್ಲಿ ನಟಿಸುವಂತೆ ಕೇಳಿದರು. ನಿರೂಪಣೆ ಇಷ್ಟವಿದ್ದ ಮೇಘನ ಆಡಿಶನ್ ಮೂಲಕ ಆಯ್ಕೆಯಾಗಿದ್ದು ಮಾತ್ರವಲ್ಲದೇ ಮೊದಲ ಧಾರಾವಾಹಿಯಲ್ಲೇ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. 

ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ನನಗೆ ತುಂಬಾ ಕಷ್ಟ ಆಯ್ತು. ಹಿರಿಯ ನಟರ ನಡುವೆ ನಾನು ನಟಿಸಲು ಸಾಧ್ಯವಾ ಎಂಬ ಅಳುಕಿತ್ತು. ಆದರೆ ರವಿ ಗರಣಿ ಮತ್ತು ಹಿರಿಯ ಕಲಾವಿದರುಗಳ ಸಹಕಾರದಿಂದ ನಾನು ಬಣ್ಣದ ಲೋಕದಲ್ಲಿ ಮಿಂಚಲು ಸಾಧ್ಯವಾಯಿತು ಎನ್ನುವ ಮೇಘನಳಿಗೆ ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ಎಂದರೆ ಇಷ್ಟ. 

‘’ ನನ್ನ ಕಿರುತೆರೆ ಪಯಣ ನಿಜಕ್ಕೂ ತುಂಬಾ ಚಾಲೆಂಜಿಗ್ ಆಗಿತ್ತು. ಒಂದು ಸೀರಿಯಲ್ ನಲ್ಲಿ ಅಭಿನಯಿಸಿದ ನಂತರ ನಾನು ಮಗದೊಂದು ಸೀರಿಯಲ್ ನಲ್ಲಿ ಅವಕಾಶ ಸಿಗಲು ಕಷ್ಟವಾಗುತ್ತೆ ಅಂದುಕೊಂಡಿದ್ದೆ. ಅರಗಿಣಿ ಧಾರಾವಾಹಿಯ ಅನಂತರ ಮುಂದೆ ಏನು ಮಾಡೋದು ಅಂಥ ಅನ್ನಿಸಲೇ ಇಲ್ಲ. ಆ ಸಮಯದಲ್ಲಿ ತೆಲುಗೆ, ತಮಿಳು ಧಾರವಾಹಿಗಳಿಂದ ಆಫರ್ ಬಂತು. ಅದರಲ್ಲಿ ಅಭಿನಯಿಸುವ ಮೂಲಕ ಪರಭಾಷೆಗೂ ಕಾಲಿಟ್ಟೆ. ಎಲ್ಲಿಯೂ ಖಾಲಿ ಕುಳಿತುಕೊಳ್ಳುವ ಅವಕಾಶವೇ ಬರಲಿಲ್ಲ’’ ಎಂದು ಕಿರುತೆರೆಯ ಪಯಣವನ್ನು ವಿವರಿಸಿದರು ಮೇಘನ. 

‘’ ಮೇಘನ ಪಾತ್ರ ನಿಜಕ್ಕೂ ಸವಾಲಿನ ಪಾತ್ರ. ಅಭಿನಯಕ್ಕಿಂತ ಸಹಜವಾಗಿಯೇ ನಟಿಸಬೇಕಾಗುತ್ತದೆ’’ ಎನ್ನುವ ಚಿತ್ರದುರ್ಗದ ಚೆಲುವೆ ನಟನೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಗ್ಲಾಮರಸ್ ಆಗಿ ಕಾಣುವುದಕ್ಕಿಂತಲೂ ಒಳ್ಳೆಯ ತೂಕವಿರುವ ಪಾತ್ರದಲ್ಲಿ ನಟಿಸಬೇಕು. ಉತ್ತಮ ಸಂದೇಶ ಸಾರುವಂಥ ಪಾತ್ರವಾದರೆ ಚೆನ್ನ ಎಂದೆನ್ನುವ ಮೇಘನಗೆ ಪೌರಾಣಿಕ ಪಾತ್ರದಲ್ಲಿ ನಟಿಸುವ ಬಯಕೆ. 

ಕನ್ನಡದ ಜೊತೆಗೆ ತೆಲುಗು, ತಮಿಳು ಭಾಷೆಯಲ್ಲಿ ನಟಿಸಿರುವ ಮೇಘನ ನಟನಾ ರಂಗದಲ್ಲಿ ಇನ್ನಷ್ಟು ಯಶಸ್ಸು ಕಾಣಲಿ. 

- ಅನಿತಾ ಬನಾರಿ 


7 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್