ಉದಯೋನ್ಮುಖರು

ಕಿರುತೆರೆಯಲ್ಲಿ ಚಂದನ್ ಚಾರ್ಮಿಂಗ್
0

ಬಣ್ಣದ ಲೋಕದಲ್ಲಿ ಇದೀಗ ಹೊಸ ಪ್ರತಿಭೆಗಳದ್ದೇ ಹಂಗಾಮ. ತಮ್ಮದೇ ಆದ ನಟನಾ ಶೈಲಿಯ ಮೂಲಕ ಪ್ರೇಕ್ಷಕರ ಮನದಲ್ಲಿ ಸ್ಥಾನಗಿಟ್ಟಿಸಿಕೊಂಡವರು ಅನೇಕರು. ಅದರಲ್ಲಿ ಚಂದನ್ ವಿಜಯ್ ಕೂಡಾ ಒಬ್ಬರು. ಚಂದನ್ ವಿಜಯ್ ಹೆಸರು ಕಿರುತೆರೆ ಪ್ರಿಯರಿಗೆ ಹೊಸತೆನಿಸಬಹುದು. ಯಾಕೆಂದರೆ ಬಣ್ಣದ ಲೋಕದಲ್ಲಿ ನಿಜ ನಾಮಧೇಯಕ್ಕಿಂತ ತಾವು ಜೀವ ತುಂಬಿದ ಪಾತ್ರದ ಹೆಸರೇ ಜನರಿಗೆ ಹತ್ತಿರವಾಗುವುದು ಹೆಚ್ಚು. ಚಂದನ್ ವಿಜಯ್ ಎಂಬ ಹೆಸರು ಅಪರಿಚಿತ ಎಂದೆನಿಸಿದರೆ ಇಲ್ಲಿ ಕೇಳಿ. ಪತ್ತೇದಾರಿ ಪ್ರತಿಭಾ ಧಾರಾವಾಹಿಯಲ್ಲಿ ಖಡಕ್ ಪೋಲಿಸ್ ಪಾತ್ರ ಅಜಯ್ ನಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿ ಮಿಂಚುತ್ತಿರುವ ಚಂದನ್ ವಿಜಯ್ ಅವರೊಂದಿಗೆ ಮತ್ತಷ್ಟು ಮಾತುಕತೆ ಓದುಗರಿಗಾಗಿ...

ನಿಮ್ಮ ಪರಿಚಯ? 

ನನ್ನ ಹೆಸರು ಚಂದನ್ ವಿಜಯ್. ಮೂಲತಃ ನಾನು ಮಹಾನಗರಿಯವನು. 

ಬಣ್ಣದ ಲೋಕದ ಪಯಣವನ್ನು ವಿವರಿಸುತ್ತೀರಾ? 

ನನಗೆ ನಟನಾ ಕ್ಷೇತ್ರ ಹೊಸದೇನಲ್ಲ. ನನ್ನ ತಂದೆ ಗೆಜ್ಜೆನಾದ ವಿಜಯ್ ಕುಮಾರ್. ಗೆಜ್ಜೆನಾದ, ಮಧುರ ಮೈತ್ರಿ, ರಾಜಣ್ಣ, ಕನ್ನಡದ ಕಂದ, ನಂದ ಲವ್ಸ್ ನಂದಿತ, ಆಟ ದಂತಹ ಸಿನಿಮಾಗಳನ್ನು ನಿರ್ದೇಶಿಸಿದವರು. ನಟನಾಗಬೇಕು ಎಂಬ ಯಾವುದೇ ಹಂಬಲವಿಲ್ಲದೇ ಆಕಸ್ಮಾತ್ತಾಗಿ ಬಣ್ಣದ ಲೋಕಕ್ಕೆ ಬಂದವನು ನಾನು. ಪುನರ್ ವಿವಾಹ ನನ್ನ ಮೊದಲ ಧಾರಾವಾಹಿ. ಅದರಲ್ಲಿ ಆದಿತ್ಯನಾಗಿ ಅಭಿನಯಿಸಿದ್ದೇನೆ. 

ಮೊದಲ ಅನುಭವ ಹೇಗಿತ್ತು? 

ನನಗೆ ತುಂಬಾ ಕಷ್ಟ ಎಂದೆನಿಸಲಿಲ್ಲ. ಮುಂಬೈಯ ರೋಷನ್ ತನೇಜ ಆಕ್ಟಿಂಗ್ ಸ್ಕೂಲ್ ನಲ್ಲಿ ನಾನು ತರಬೇತಿಯನ್ನು ಪಡೆದಿದ್ದೇನೆ. ಆದ ಕಾರಣ ಕ್ಯಾಮೆರಾ ಕುರಿತು ಯಾವುದೇ ಭಯವಿರಲಿಲ್ಲ. 

ಜನ ನಿಮ್ಮನ್ನು ಇಂದು ಗುರುತಿಸುವ ಪಾತ್ರ? 

ನಾನು ಆದಿತ್ಯ ಮತ್ತು ಅಜಯ್ ಎಂಬ ಎರಡು ಭಿನ್ನ ಪಾತ್ರದಲ್ಲಿ ನಟಿಸಿದ್ದೇನೆ. ಜನ ಇಂದು ನನ್ನನ್ನು ಎರಡು ಪಾತ್ರದಲ್ಲೂ ಕರೆಯುತ್ತಾರೆ. ತುಂಬಾ ಖುಷಿಯಾಗುತ್ತದೆ.

ಸ್ಫೂರ್ತಿ? 

ನನಗೆ ಈ ಕ್ಷೇತ್ರದಲ್ಲಿ ತುಂಬಾ ಜನ ಸ್ಫೂರ್ತಿ ಆಗಿದ್ದಾರೆ. ಎಲ್ಲರಿಗೂ ಅವರದ್ದೇ ಆದ ಸ್ಟೈಲ್ ಗಳು ಇರುತ್ತದೆ. ನನಗೂ ಅಷ್ಟೇ. ನನ್ನದೇ ಆದ ಸ್ಟೈಲ್ ಕ್ರಿಯೇಟ್ ಮಾಡುವ ಬಯಕೆ. 

ಅಪ್ಪ ನಿರ್ದೇಶಕರು. ನಟನೆಯ ಬಗ್ಗೆ ನಿಮಗೆ ಅವರು ನೀಡುವ ಟಿಪ್ಸ್ ?

ಟಿಪ್ಸ್ ಅಂತ ಕೊಡೋದಿಲ್ಲ .ತಪ್ಪು ಮಾಡಿದಾಗ ಅದು ತಪ್ಪಾಗಿದೆ ಅಂಥ ಹೇಳ್ತಾರೆ. ಮತ್ತೆ ನೀನು ಅಭಿನಯಿಸಿದ ಸೀನ್ ನೋಡಿದಾಗ ನಿನಗೆ ಎಲ್ಲಿ ತಪ್ಪಾಗಿದೆ ಎಂದು ಗೊತ್ತಾಗುತ್ತದೆ ಎಂದು ಹೇಳುತ್ತಾರೆ. 

ಆದಿತ್ಯ ಅಥವಾ ಅಜಯ್ ಪಾತ್ರ ನಿಮ್ಮ ಮೇಲೆ ಬೀರಿದ ಪ್ರಭಾವ? 

ವಿಶೇಷ ಪ್ರಭಾವವೇನೂ ಬೀರಲಿಲ್ಲ. ನಾನು ಪಾತ್ರಗಳನ್ನು ಪಾತ್ರಗಳನ್ನಾಗಿ ಅಷ್ಟೇ ನೋಡುತ್ತೇನೆ. 

ನಟನೆಯ ಬಗ್ಗೆ ಅಭಿಪ್ರಾಯ? 

ತುಂಬಾ ಖುಷಿಯಾಗಿದೆ. ತೃಪ್ತಿಯನ್ನು ನೀಡಿದೆ. ಹೆಚ್ಚು ಹೇಳಬೇಕೆಂದರೆ ಕೆಲವು ವಿಷಯಗಳನ್ನು ವಿವರಿಸಲಾಗದು, ಬದಲಿಗೆ ಅನುಭವಿಸಬೇಕಷ್ಟೇ! ನಾನು ಅದನ್ನೇ ಮಾಡುತ್ತಿದ್ದೇನೆ. 

ಪ್ರೇರಣೆ? 

ಸುದೀಪ್. ಅವರು ಪಾತ್ರದೊಳಗೆ ಹೊಕ್ಕು ಪಾತ್ರಕ್ಕೆ ಜೀವ ತುಂಬುತ್ತಾರೆ. ಆ ಶೈಲಿ ನನಗೆ ತುಂಬಾ ಇಷ್ಟ. ಈ ಕ್ಷೇತ್ರಕ್ಕೆ ಬಂದ ಮೇಲೆ ನೀವು ಕಲಿತದ್ದು? 

ತಾಳ್ಮೆ. ನಟನೆಯ  ಹೊರತು? ನನಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಚಿಕ್ಕ ವಯಸ್ಸಿನಿಂದಲೂ ಡ್ಯಾನ್ಸ್ ಮಾಡ್ತಾ ಇದ್ದೆ. ಮುಂದಿನ ಯೋಜನೆ?  

ಸಿನಿಮಾದಲ್ಲಿ ನಟಿಸಬೇಕು ಎಂಬ ಅಭಿಲಾಷೆಯಿದೆ. 

- ಅನಿತಾ ಬನಾರಿ


2 weeks ago Udayonmukharu

Related Articles

ನಿಮ್ಮ ಅಭಿಪ್ರಾಯಗಳು


Balkani News Polls

ನಿಮ್ಮ ಇಷ್ಟ ಅದ ಚಿತ್ರಯಾವುದು .?
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್

A PHP Error was encountered

Severity: Notice

Message: Undefined variable: newpost

Filename: views/polls_page.php

Line Number: 286