ಉದಯೋನ್ಮುಖರು

ಮಂಜಿನ ನಗರಿಯ ಹುಡುಗನ ಬಣ್ಣದ ಪುರಾಣ
0

ಮನೋಜ್ಞ ಅಭಿನಯದಿಂದ ವೀಕ್ಷಕರ ಮನ ಕದ್ದಿರುವ ಈತ ಮಂಜಿನ ನಗರಿಯ ಹುಡುಗ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ಲಕ್ಕಿಯಾಗಿ ಹೆಣ್ ಮಕ್ಕಳ ಮನ ಸೆಳೆದಿರುವ ಈ ಚಾಕಲೇಟ್ ಹುಡುಗನ ಹೆಸರು ಭರತ್ ಬೋಪಣ್ಣ. 

ಲಕ್ಕಿಯಾಗಿ ಮನೆಮತಾಗಿರುವ ಕೊಡಗಿನ ಕುವರನಿಗೆ ಬ್ರಹ್ಮಗಂಟು ಎರಡನೇ ಧಾರಾವಾಹಿ. ಕಲರ್ಸ್ ಸೂಪರ್ ವಾಹಿನಿಯ ಗಿರಿಜಾ ಕಲ್ಯಾಣ ಧಾರಾವಾಹಿಯಲ್ಲಿ ರಾಜಕುಮಾರನ ಪಾತ್ರಕ್ಕೆ ಜೀವ ತುಂಬಿದ್ದ ಭರತ್ ಬೋಪಣ್ಣ ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. 

‘’ ಮೊದಲಿನಿಂದಲೂ ನನಗೆ ನಟನೆಯತ್ತ ವಿಶೇಷ ಆಸಕ್ತಿ ಇದ್ದುದ್ದೇನೂ ನಿಜ. ಆದರೆ ತಾನೊಬ್ಬ ನಟ ಆಗುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಈ ಕ್ಷೇತ್ರಕ್ಕೆ ನಾನು ಹೊಸಬ. ಮೊದಲ ಧಾರಾವಾಹಿಯಲ್ಲೇ ಪೌರಾಣಿಕ ಧಾರಾವಾಹಿ ಸಿಕ್ಕಿದ್ದು ನನಗೆ ತುಂಬಾ ಖುಷಿ ನೀಡಿದೆ. ಮುಂದೆ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡಬೇಕೆಂಬ ಬಯಕೆಯಿದೆ’’ ಎನ್ನುತ್ತಾ ಕಿರುತೆರೆ ಪಯಣವನ್ನು ಬಿಚ್ಚಿಡುತ್ತಾರೆ ಭರತ್. 

‘’ ಅಭಿನಯ ಎಂದರೆ ಪಾತ್ರವನ್ನು ಅರ್ಥಮಾಡಿಕೊಂಡು ಅಭಿನಯಿಸುವುದು ಮಾತ್ರವಲ್ಲ. ಆ ಪಾತ್ರಕ್ಕೆ ಜೀವ ತುಂಬುವುದು ಕೂಡ ನಟನ ಕೆಲಸ’’ ಎನ್ನುವ ಭರತ್ ಬೋಪಣ್ಣರಿಗೆ ನಟನೆ ಅವರಳೊಗಿನ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲದೇ ತಾಳ್ಮೆಯ ಜೊತೆಗೆ ಸಮಯಕ್ಕೆ ಬೆಲೆ ಕೊಡುವುದನ್ನು ಕಲಿತಿದ್ದಾರಂತೆ. ನನಗೆ ಸುದೀಪ್, ದರ್ಶನ್ ಮತ್ತು ಯಶ್ ಸ್ಫೂರ್ತಿ ಎನ್ನುವ ಭರತ್ ಬಿಡುವಿನ ಸಮಯವನ್ನು ಕುಟುಂಬ ಮತ್ತು ಸ್ನೇಹಿತರೊಡನೆ ಕಾಲ ಕಳೆಯುತ್ತಾರೆ. ಕುಟುಂಬ ಮತ್ತು ಗೆಳೆಯರ ಪ್ರೋತ್ಸಾಹದಿಂದ ನಾನಿಂದು ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು ಎನ್ನುವ ಭರತ್ ಬೋಪಣ್ಣರಿಗೆ ಶುಭ ಹಾರೈಕೆಗಳು. 

- ಅನಿತಾ ಬನಾರಿ 


7 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್