ಉದಯೋನ್ಮುಖರು

ಕಿರುತೆರೆಯ ಚಾಕಲೇಟ್ ಬಾಯ್ ವಿಜಯ್ ಸೂರ್ಯ
0

ಬೇಡಿಕೆಯಲ್ಲಿ ಇರುವ ಧಾರಾವಾಹಿಗಳ ಪೈಕಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಾಗುತ್ತಿರುವ ಅಗ್ನಿಸಾಕ್ಷಿಯೂ ಒಂದು. ಜನ ಮನ್ನಣೆಗಳಿಸಿರುವ ಅಗ್ನಿಸಾಕ್ಷಿಯ ಪ್ರತಿ ಪಾತ್ರವೂ ತನ್ನದೇ ಆದ ಅಭಿಮಾನಿಗಳನ್ನು ಪಡೆದಿರುವುದೇ ಇದಕ್ಕೆ ಉತ್ತಮ ಉದಾಹರಣೆ. 

ಸದಾ ಮುಗುಳುನಗೆ, ಕೆನ್ನೆಯ ಮೇಲೊಂದು ಮುದ್ದಾದ ಮುಗುಳು ನಗೆ... ಚಾಕಲೇಟ್ ಬಾಯ್ ಎಂದೇ ಜನಜನಿತವಾಗಿರುವ ವಿಜಯ್ ಸೂರ್ಯ ಅವರನ್ನು ಗೊತ್ತಿಲ್ಲದವರಾರು ಹೇಳಿ? ಸಿದ್ಧಾರ್ಥ್ ಎಂದೇ ಪರಿಚಿತರಾಗಿರುವ ವಿಜಯ್ ಸೂರ್ಯ ಪಿಯುಸಿ ವಿದ್ಯಾಭ್ಯಾಸದ ಬಳಿಕ ಮುಂಬೈಯ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ವ್ಯಾಸಂಗ ಮಾಡಿದರು. ಕ್ರೇಜಿಲೋಕ ಸಿನಿಮಾದ ಮೂಲಕ ಬಣ್ಣದ ಪಯಣ ಆರಂಭಿಸಿದ ವಿಜಯ್ ಸೂರ್ಯ ಮುಂದೆ ಇಷ್ಟಕಾಮ್ಯ ಮತ್ತು ಸ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಷ್ಟಕಾಮ್ಯದಲ್ಲಿ ಡಾಕ್ಟರ್ ಪಾತ್ರದ ಮೂಲಕ ಮಗದೊಮ್ಮೆ ಜನಪ್ರಿಯತೆ ಗಳಿಸಿಕೊಂಡ ಮಹಾನಗರಿಯ ಚೆಲುವ ಅಭಿನಯದ ಮತ್ತೊಂದು ಸಿನಿಮಾ ಲಖನೌ ಟು ಬೆಂಗಳೂರು ಬಿಡುಗಡೆಯಾಗಬೇಕಿದೆ. ಇನ್ನು ಹೆಸರಿಡದ ಸಿನಿಮಾದಲ್ಲೂ ನಟಿಸುತ್ತಿರುವ ವಿಜಯ್ ಸೂರ್ಯ ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಮಿಂಚುತ್ತಿದ್ದಾರೆ. 

‘’ತಂದೆ ತಾಯಿ ಹೆಚ್ಚು ಸಿನಿಮಾಗಳನ್ನು ನೋಡುತ್ತಿದ್ದರು. ನಾನೂ ನೋಡುತ್ತಿದ್ದೆ. ಆಗೆಲ್ಲಾ ನನಗೆ ನಾನು ಕೂಡ ಈ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎಂದೆನಿಸುತ್ತಿತ್ತು’’ ಎನ್ನುವ ವಿಜಯ್ ಅವರು ಉತ್ತಮ ಡ್ಯಾನ್ಸರ್ ಹೌದು. ಶಾಲಾ, ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ವಿಜಯ್ ಸೂರ್ಯ ಅವರಿಗೆ ಪೌರಾಣಿಕ ಮತ್ತು ಗ್ಯಾಂಗ್ ಸ್ಟರ್ ಪಾತ್ರದಲ್ಲಿ ನಟಿಸುವ ಬಯಕೆ. ‘’ಅಗ್ನಿಸಾಕ್ಷಿಯ ನನ್ನ ಪಾತ್ರಕ್ಕೆ ಪ್ರಶಸ್ತಿ ಬಂದದ್ದು ನನ್ನ ಜೀವನದ ಮರೆಯಲಾರದ ಕ್ಷಣ. ಜನರ ಪ್ರೀತಿಯಿಂದಲೇ ಇದೆಲ್ಲಾ ಸಾಧ್ಯವಾದದ್ದು’’ ಎನ್ನುವ ಅವರು ತಮ್ಮ ಸ್ವಂತ ಪರಿಶ್ರಮದಿಂದಲೇ ಇಂದು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.

‘’ಮೊದಲ ಬಾರಿ ಕ್ಯಾಮೆರಾ ಎದುರಿಸುವಾಗ ನಾನು ತುಂಬಾ ಭಯಬೀತನಾಗಿದ್ದೆ. ಮುಂದೆ ಅಭ್ಯಾಸವಾಯಿತು ಎನ್ನುವ ಗುಳಿಕೆನ್ನೆಯ ಹುಡುಗ ಬಿಡುವಿನ ಸಮಯದಲ್ಲಿ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಾರೆ. ಓದುವುದು ಮತ್ತು ಟ್ರಾವೆಲ್ ಮಾಡುವುದು ನನ್ನ ಹವ್ಯಾಸ ಎನ್ನುವ ಅವರು ಫ್ಯಾಮಿಲಿ ಮತ್ತು ಗೆಳೆಯರೊಡನೆ ಕಾಲ ಕಳೆಯುವುದನ್ನು ಇಷ್ಟ ಪಡುತ್ತಾರೆ. 

ಅಗ್ನಿಸಾಕ್ಷಿಯ ಸಿದ್ಧಾರ್ಥ್ ಪಾತ್ರದ ನಂತರ ಸ ಚಿತ್ರದ ರಾಹುಲ್ ಪಾತ್ರ ನನಗೆ ತುಂಬಾ ಸಂತೋಷ ನೀಡಿತು ಎಂದೆನ್ನುವ ಚಾಕಲೇಟ್ ಹುಡುಗನಿಗೆ ನಿರೂಪಣೆ ಮಾಡುವ ಕನಸಿದೆ. ಉತ್ತಮ ಅವಕಾಶಕ್ಕಾಗಿ ಕಾಯುತ್ತಿರುವುದು ಸುಳ್ಳಲ್ಲ. 

ಕೇವಲ ಕರ್ನಾಟಕ ಮಾತ್ರವಲ್ಲದೇ ನಾಡಿನಾದ್ಯಂತ ಸಾವಿರಾರು ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿರುವ ಸಿದ್ಧು ಆಲಿಯಾಸ್ ವಿಜಯ್ ಸೂರ್ಯ ಅವರ ನಟನಾ ಪಯಣ ಕಲರ್ ಫುಲ್ ಆಗಿರಲಿ. 

-ಅನಿತಾ ಬನಾರಿ 


8 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್