ಉದಯೋನ್ಮುಖರು

ಬೆಳ್ಳಿತೆರೆಯಿಂದ ಕಿರುತೆರೆಗೆ ಜಿಗಿದ ಅನುಷಾ ಹೆಗ್ಡೆ
0

ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎಂಬ ಮಾತಿದೆ. ಹಾಗೆ ಆರಿಸಲ್ಪಟ್ಟವರು ಕಲಾರಾಧನೆಯನ್ನು ಶ್ರದ್ಧೆಯಿಂದ ಮಾಡಿದರೆ ಕಲಾ ಸರಸ್ವತಿ ಒಲಿಯುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಪ್ರಸಕ್ತ ಉದಾಹರಣೆ ಅನುಷಾ ಹೆಗ್ಡೆ ಎಂದರೆ ತಪ್ಪಾಗಲಾರದು. 

ಮೂಲತಃ ಭರತನಾಟ್ಯ ಕಲಾವಿದೆಯಾಗಿರುವ ಅನುಷಾ ಹೆಗ್ಡೆ ಇಂದು ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ರಮಣ ಧಾರಾವಾಹಿಯಲ್ಲಿ ದೀಪಿಕಾ ಪಾತ್ರದಲ್ಲಿ ನಟಿಸುವ ಅವರು ತನ್ನ ಮೊದಲ ಧಾರಾವಾಹಿಯಲ್ಲೇ ವಿಲನ್ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ. ನಾಯಕ ರಮಣ್ ನ ಅತ್ತೆ ಮಗಳು ದೀಪಿಕಾ ಓದಿದ್ದು ಆಸ್ಟ್ರೇಲಿಯಾದಲ್ಲಿ. ರಮಣ್ ಹಾಗೂ ದೀಪಿಕಾ ಗೆ ಮದುವೆ ಎಂದು ಮನೆಯವರು ಹೇಳಿದ್ದನ್ನ ಕೇಳುತ್ತಿದ್ದ ದೀಪಿಕಾ ಮನಸ್ಸಲ್ಲೇ ರಮಣ್ ನನ್ನ ಇಷ್ಟಪಡುತ್ತಾಳೆ. ಆದರೆ ಅದನ್ನ ಬಹಿರಂಗವಾಗಿ ಹೇಳಿರೋದಿಲ್ಲ. ಇತ್ತ ರಮಣ್ ತಂಗಿ ಅನ್ವಿತಾ ಮದುವೆಗೆ ಆಸ್ಟ್ರೇಲಿಯಾದಿಂದ ದೀಪಿಕಾ ಬರುವಾಗ ಅವಳಿಗೆ ಆಘಾತವಾಗುತ್ತದೆ. ರಮಣ್ ರಾಧಾಳನ್ನು ಮದುವೆಯಾಗಿ ಆಗಿರುತ್ತದೆ. ರಮಣ್ ನನ್ನವನು, ನಾನು ಬದುಕಿದ್ದರೆ ಅದು ಅವನ ಜೊತೆ, ರಮಣ್ ನನ್ನ ಪ್ರಪಂಚ, ಅದರ ಹೊರತು ಬೇರೇನಿಲ್ಲ ದೀಪಿಕಾಗೆ ರಮಣ್ ನನ್ನು ಪಡೆಯಬೇಕು ಎಂಬ ಹಠ. ಅದಕ್ಕೋಸ್ಕರ ಯಾವುದೇ ರಿಸ್ಕ್ ತೆಗೆದುಕೊಳ್ಳೋಕ  ದೀಪಿಕಾ ರೆಡಿ ಇರ್ತಾಳೆ. ಅವಳ ಕನಸನ್ನ ನನಸು ಮಾಡಿಯೇ ಸಿದ್ಧ ಎಂದು ಅಮ್ಮ ಸಿತಾರ ದೇವಿ ಮಾತುಕೊಟ್ಟಾಗಿದೆ. ಮುಂದೆ ಏನಾಗುತ್ತದೋ ಕಾದು ನೋಡಬೇಕು. ಇದು ಬ್ಯೂಟಿಫುಲ್ ವಿಲನ್ ದೀಪಿಕಾ ಪಾತ್ರದ ಪರಿಚಯ. 

ನೃತ್ಯ ತನ್ನ ಆಸಕ್ತಿಯ ಕ್ಷೇತ್ರ ಎನ್ನುವ ಅನುಷಾ ಭರತನಾಟ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದಿದ್ದಾರೆ. “ನೃತ್ಯದಲ್ಲಿ ಮುಖದ ಭಾವನೆ ಮುಖ್ಯ. ನವರಸಗಳು ಅದರಲ್ಲಿ ಕೂಡಿರುತ್ತವೆ. ನೆಗೆಟಿವ್ ಪಾತ್ರಕ್ಕೂ ಅಷ್ಟೇ. ಮುಖದ ಭಾವನೆಯೇ ಮುಖ್ಯವಾಗುತ್ತದೆ. ಈಗಾಗಲೇ ಭರತನಾಟ್ಯ ಕಲಿತಿರುವ ನನಗೆ ನವರಸಗಳನ್ನು ಸಲೀಸಾಗಿ ಮುಖದಲ್ಲಿ ಮೂಡಿಸಲು ಸಾಧ್ಯವಾಗುತ್ತದೆ. ಹಾಗಾಗಿ ನಟಿಸಲು ಕಷ್ಟವಾಗಲಿಲ್ಲ ಎನ್ನುವ ಅನುಷಾ ಇಂದು ದೀಪಿಕಾ ಪಾತ್ರದ ಮೂಲಕ ಗುರುತಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ನಿರ್ದೇಶಕ ಶಿವು ಅವರು ಕಾರಣ. ಅವರ ಮಾರ್ಗದರ್ಶನದಿಂದ ಇದೆಲ್ಲಾ ಸಾಧ್ಯವಾಯಿತು ಎಂದು ಸಂತೋಷದಿಂದ ಹೇಳುತ್ತಾರೆ ಅನುಷಾ. 

ಈಗಾಗಲೇ ಸುಮಾರು 800ಕ್ಕೂ ಹೆಚ್ಚು ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿರುವ ಅನುಷಾ ಬಣ್ಣ ಬಣ್ಣದ ಬದುಕು ಚಿತ್ರದಲ್ಲಿ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಮಾತ್ರವಲ್ಲ ಅತಿಥಿ ಕಲಾವಿದೆಯಾಗಿಯೂ ಬಣ್ಣ ಹಚ್ಚಿದ್ದಾರೆ. ಎನ್. ಎಚ್ 37 ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಅವರು ಎಂದೂ ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳಬೇಕು ಎಂದು ಅಂದುಕೊಂಡವರೇ ಅಲ್ಲ. ಅದು ಅವರಿಗೆ ಆಕಸ್ಮಿಕವಾಗಿ ದೊರೆತ ಅವಕಾಶ. ಮೊದಲ ಸಂದರ್ಶನದಲ್ಲೇ ಎನ್ ಎಚ್ 37ನ ಚಿತ್ರಕ್ಕೆ ಆಯ್ಕೆಯಾದ ಅವರು ಸದ್ಯ ಕಿರುತರೆಯಲ್ಲಿ ಬ್ಯುಸಿ. 

ಭರತನಾಟ್ಯ ಕಲಾವಿದೆಯಾಗಿರುವ ಕಾರಣ ಧಾರಾವಾಹಿ ಮತ್ತು ಸಿನಿಮಾದಲ್ಲಿ ನಟಿಸಲು ಸಾಧ್ಯವಾಯಿತು. ಇನ್ನೂ ಅವಕಾಶಗಳು ಬರುತ್ತಿವೆ. ಸಿನಿಮಾ ಮತ್ತು ಕಿರುತೆರೆಯಲ್ಲಿ ಮುಂದುವರಿಯುತ್ತೇನೆ. ಆದರೆ ನೃತ್ಯವನ್ನು ಎಂದಿಗೂ ಬಿಡುವುದಿಲ್ಲ. ಅವಕಾಶ ಸಿಕ್ಕಾಗ ಕಾರ್ಯಕ್ರಮ ನೀಡುತ್ತೇನೆ ಎನ್ನುವ ಚೆಲುವೆ ಹಾಡುಗಾರ್ತಿಯೂ ಹೌದು. ಅದರ ಜೊತಗೆ ಯೋಗಭ‍್ಯಾಸದಲ್ಲೂ ಪರಿಣಿತಿ ಪಡೆದಿರುತ್ತಾರೆ. 

- ಅನಿತಾ ಬನಾರಿ  


8 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್