ಉದಯೋನ್ಮುಖರು

ಪೌರಾಣಿಕ ಪಾತ್ರಕ್ಕಾಗಿ ಹಂಬಲಿಸುತ್ತಿರುವ ರಕ್ಷಿತ್
0

ಕಿರುತೆರೆ ವೀಕ್ಷಕರ ಮನಗೆದ್ದ ಧಾರಾವಾಹಿಗಳ ಪೈಕಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟ ಗೌರಿ ಮದುವೆಯೂ ಒಂದು. ಪುಟ್ಟ ಗೌರಿಯ ಮಹೇಶ ಆಗಿ ಮನೆ ಮಾತಾಗಿರುವ ಈ ಹುಡುಗನ ಹೆಸರು ರಕ್ಷಿತ್. ಗೌರಿಯನ್ನುಬಾಲ್ಯದಲ್ಲಿ ವಿವಾಹವಾಗಿದ್ದ ಮಹೇಶ ಅಜ್ಜಮ್ಮನ ಆಸೆಯಂತೆ ಮೆಡಿಕಲ್ ಓದಲು ಪೇಟೆಗೆ ಹೋಗುತ್ತಾನೆ. ಅಲ್ಲಿ ಆತನ ಕ್ಲಾಸ್ ಮೇಟ್ ಹಿಮ ಜೊತೆಗೆ ಪ್ರೇಮವಾಗುತ್ತದೆ. ಮುಂದೆ ಆಕೆಯನ್ನು ಮದುವೆಯಾಗುವುದಕ್ಕಾಗಿ ಗೌರಿಯನ್ನು ಡೈವೋರ್ಸ್ ಕೊಡುವಂತೆ ಒತ್ತಾಯಿಸುತ್ತಾನೆ. ಎಲ್ಲಿದ್ದರೂ ತನ್ನ ಮಹೇಶ ಸುಖದಿಂದಿರಲಿ ಎಂದು ಗೌರಿಯು ಡೈವೋರ್ಸ್ ನೀಡುತ್ತಾಳೆ. ಪ್ರತಿಯೊಂದು ವಸ್ತುವಿನ ಬೆಲೆ ಕಳೆದುಕೊಂಡ ನಂತರವೇ ತಿಳಿಯುವುದು ಎಂಬಂತೆ ಮಹೇಶನಿಗೆ ಗೌರಿಯ ಬೆಲೆ ಆಗ ತಿಇಯುತ್ತದೆ. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗುತ್ತದೆ. ಇತ್ತ ಹಿಮಳ ಅತ್ತೆ ಕುತಂತ್ರ ಬುದ್ಧಿಯಿಂದ ಮಹೇಶ ಗೌರಿಯನ್ನು ದೂರ ಮಾಡುವುದಕ್ಕಾಗಿ ಗೌರಿಗೆ ಕ್ಯಾನ್ಸರ್ ಎಂದು ಹೇಳುವಂತೆ ಸನ್ನಿವೇಶಗಳನ್ನು ಸೃಷ್ಟಿಮಾಡುತ್ತಾಳೆ. ಮತ್ತು ಇದನ್ನು ಗೌರಿ ಮತ್ತು ಮಹೇಶ ನಂಬುತ್ತಾರೆ. ಇದೀಗ ಗೌರಿ ತಾನು ಕೊನೆಯುಸಿರೆಳೆಯುವ ಮೊದಲು ಮಹೇಶನಿಗೂ ಹಿಮನಿಗೂ ಮದುವೆ ಮಾಡಬೇಕು ಎಂದು ಪಣತೊಡುತ್ತಾಳೆ. ಮಹೇಶ ಮನಸ್ಸಿಲ್ಲದಿದ್ದರೂ ಗೌರಿಯ ಆಸೆಯ ಪೂರೈಸ ಸಲುವಾಗಿ ಒಪ್ಪಿಕೊಳ್ಳುತ್ತಾನೆ. ಇದು ಪುಟ್ಟ ಗೌರಿಯ ಮಹೇಶ ಪಾತ್ರದ ಪರಿಚಯ. ಮುಂದೆ ಮಹೇಶ ಏನು ಮಾಡುತ್ತಾನೆ? ಅವನ ಜೀವನದಲ್ಲಿ ಶಾಶ್ವತವಾಗಿ ಯಾರಿಗೆ ಜಾಗ ಎನ್ನುವುದನ್ನೆಲ್ಲ ಧಾರಾವಾಹಿಯೇ ಹೇಳಬೇಕಷ್ಟೆ!

ಬಾಲ್ಯದಿಂದಲೂ ನಟನಾಗಬೇಕು ಎಂಬ ಮಹದಾಸೆ ಹೊಂದಿದ್ದ ರಕ್ಷಿತ್ ಅವರ ಮೊದಲ ಆಯ್ಕೆ ಇದ್ದದ್ದು ಸಿನಿಮಾ. ಮೊದಲ ಬಾರಿಗೆ ಧಾರಾವಾಹಿಗೆ ಅದರಲ್ಲೂ ಲೀಡ್ ರೋಲ್ ಗೆ ಆಯ್ಕೆ ಆದಾಗ ಅವರಿಗೆ ಸಂತಸದಿಂದ ಬೇಸರವಾಗಿದ್ದೆ ಹೆಚ್ಚು. ಯಾಕೆಂದರೆ ಅವರು ಸಿನಿಮಾದಲ್ಲಿ ನಟಿಸಬೇಕು ಅಂತಲೇ ಅಂದುಕೊಂಡಿದ್ದರು. ತಾನು ನಟಿಸುವುದಿಲ್ಲ ಎಂದು ಹೇಳಿಯೂ ಆಗಿತ್ತು. ಆದರೆ ಕೊನೆ ಕ್ಷಣ ಅದೇನಾಯಿತು ಗೊತ್ತಿಲ್ಲ, ಆದದ್ದಾಗಲಿ ಎಂದು ಒಪ್ಪಿಕೊಂಡರು. ಆದರೆ ಈಗ ಅವರು ಅದೇ ಮಹೇಶ ಪಾತ್ರದಿಂದಲೇ ಗುರುತಿಸಿಕೊಂಡಿದ್ದಾರೆ. “ಮಹೇಶ ಪಾತ್ರ ನಿಜಕ್ಕೂ ತುಂಬಾ ಚಾಲೆಂಗಿಗ್ ಆದುದು. ಮೊದಲು ಪೂರ್ತಿ ನೆಗೆಟಿವ್ ಆಗಿತ್ತು. ವೀಕ್ಷಕರಿಗೆ ಹತ್ತಿರವಾಗುವುದು ಕನಸಿನ ಮಾತು. ಆದರೆ ಈಗ ಪಾತ್ರ ಕಂಪ್ಲೀಟ್ ಬದಲಾಗಿದೆ. ಮಹೇಶನ  ಇನ್ನೊಂದು ರೂಪ ಜನಕ್ಕೆ ಪರಿಚಯವಾಗುತ್ತಿದೆ. ಮತ್ತು ಈ ಮಹೇಶನನ್ನು ಜನ ಸ್ವೀಕರಿಸುತ್ತಿದ್ದಾರೆ ‘’ ಎಂದು ನಗುತ್ತಾ ಹೇಳುತ್ತಾರೆ ರಕ್ಷಿತ್. 

ರಂಗಭೂಮಿ ಕಲಾವಿದರಾಗಿರುವ ರಕ್ಷಿತ್ ಕಿರುತೆರೆಗೆ ಕಾಲಿಡುವ ಮೊದಲು ತೆನಾಲಿ ರಾಮ, ಅಕ್ಬರ್ ಬೀರಬಲ್ ಮುಂತಾದ ನಾಟಕಗಳ ಮೂಲಕ ರಂಗಸ್ಥಳದಲ್ಲಿ ಕಾಣಿಸಿಕೊಂಡಿರುತ್ತಾರೆ. ‘’ಆಕ್ಟಿಂಗ್ ಎಂದರೆ ನನಗೆ ತುಂಬಾ ಇಷ್ಟ ಎನ್ನುವ ರಕ್ಷಿತ್ ಇದೀಗ ಅವರ ಬಾಲ್ಯದ ಆಸೆಯಂತೆ ಸಿನಿಮಾದಲ್ಲಿ ನಟಿಸಲು ತಯಾರಾಗಿದ್ದಾರೆ. ನನಗೂ ನಿನಗೂ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಲಿರುವ ರಕ್ಷಿತ್ ಗೆ ನಾಯಕಿ ನೇಹಾ ಪಾಟೀಲ್ ಜೋಡಿಯಾಗಿದ್ದಾರೆ. ಅಲ್ಲದೇ ಸೋನು ಗೌಡರೊಂದಿಗೆ ಇನ್ನೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಅಲ್ಲದೇ ಮುಂಗಾರುಮಳೆ ಕೃಷ್ಣ ರ ಗಂಗಾ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿ ಮರೆಯಾಗಿದ್ದರು. 

“ ನಟನೆ ನಿಜವಾಗಿಯೂ ಒಂದ ಜಾದು. ಸಂದರ್ಭಗಳಿಗೆ ಮತ್ತು ಸನ್ನಿವೇಶಗಳಿಗೆ ತಕ್ಕುದಾಗಿ ಅಭಿನಯಿಸುವುದೇ ಒಂದು ರೀತಿಯ ಮಜಾ’’ ಎನ್ನುವ ರಕ್ಷಿತ್ ನಟನೆಯ ಹೊರತಾಗಿ ವೆಹಿಕಲ್ ಮೊಡಿಫೀಕೇಶನ್ ನಲ್ಲಿ ಎಕ್ಸ್ ಪರ್ಟ್. ಅಟೋಮೊಬೈಲ್ ಹುಚ್ಚು ಇರುವ ಅವರು ರೇಸ್ ನಲ್ಲೂ ಭಾಗವಹಿಸುತ್ತಿದ್ದರು. “ ಅದು ಪುಟ್ಟ ಗೌರಿ ಧಾರಾವಾಹಿ ಆರಂಭವಾದ ಹೊಸತು. ಆಗ ಆದ ಕಾರು ಅಪಘಾತದಲ್ಲಿ ಬೆನ್ನಿಗೆ ತಾಗಿತ್ತು. ತುಂಬಾ ಕಷ್ಟವಾಗಿತ್ತು. ಒಂದು ವರ್ಷ ಜಿಮ್ ಗೆ ಹೋಗ್ಲಿಕ್ಕೆ ಆಗ್ಲಿಲ್ಲ. ಆಗ ರಾಮ್ ಜೀ ಸರ್ ಇದನ್ನೆಲ್ಲಾ ಬಿಡು ಎಂದರು “ ಎಂದು ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ. 

ನಟನಾ ಕ್ಷೇತ್ರದಿಂದ ನಾನು ತಾಳ್ಮೆಯನ್ನು ಕಲಿತೆ ಎನ್ನುವ ಅವರಿಗೆ ಶಾರುಖ್ ಖಾನ್ ಮೆಚ್ಚಿನ ನಟನಾದರೆ ಶಂರಕ್ ನಾಗ್ ರೋಲ್ ಮಾಡೆಲ್. ಈ ಕ್ಷೇತ್ರದಲ್ಲೇ ಮತ್ತಷ್ಟು ಸಾಧನೆ ಮಾಡುವ ಹುಮ್ಮಸ್ಸು ಹೊಂದಿರುವ ರಕ್ಷಿತ್ ಗೆ ಪೌರಾಣಿಕ ಪಾತ್ರಕ್ಕೆ ಜೀವ ತುಂಬುವ ಬಯಕೆ. 

- ಅನಿತಾ ಬನಾರಿ 


8 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್