ಉದಯೋನ್ಮುಖರು

ರಂಗಭೂಮಿ ತನ್ನ ತವರು ಮನೆ ಎಂದ ಚೆಂದಳ್ಳಿ ಚೆಲುವೆ
0

ಮಹಾನಗರಿಯ ಚೆಲುವೆ ವರ್ಷಿತಾಗೆ ನಟನೆಯೇ ಜೀವಾಳ. ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು ಇದ್ದುದ್ದರಿಂದ ಕಾಲೇಜು ದಿನಗಳಲ್ಲೇ ರಂಗ ಸೌರಭ ರಂಗ ತಂಡ ಸೇರಿಕೊಂಡರು. ರಾಜೇಂದ್ರ ಆಕೆಗೆ ನಟನೆ ಕರಗತವಾಯಿತು. ಮುಂದೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಬಂದಾಗ ಬಂದ ಅವಕಾಶವನ್ನು ಅಲ್ಲಗಳೆಯದೇ ಬಾಚಿ ತಬ್ಬಿಕೊಂಡರು. ಇದೀಗ ಕಲರ್ಸ್ ಕನ್ನಡ ವಾಹಿನಿಯ ಮನೆದೇವ್ರು ಧಾರಾವಾಹಿಯ ಅನು ಪಾತ್ರಧಾರಿಯಾಗಿ ನಟಿಸುತ್ತಿರುವ ವರ್ಷಿತಾ ಹೊಸದಾಗಿ ಕಿರುತೆರೆಗೆ ಪರಿಚಯವಾಗಿದ್ದರೂ ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮನದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. 

ನಾಯಕಿ ಜಾನಕಿಯ ಮುದ್ದು ತಂಗಿ ಅನು. ಜಾನಕಿಗೆ ಅನು ಎಂದರೆ ತುಂಬಾ ಪ್ರೀತಿ. ಅನುವಿಗೂ ಅಷ್ಟೇ. ಅಕ್ಕ ಜಾನಕಿ ಎಂದರೆ ವಿಶೇಷ ಅಕ್ಕರೆ, ಒಲವು. ಜಾನಕಿಯ ಪ್ರತಿ ಹೆಜ್ಜೆಗೂ ಸಪೋರ್ಟ್ ನೀಡುವ ಅನು ಕೊನೆಗೆ ತಾನೇ ಕಷ್ಟಪಡುವಂತಾಗುತ್ತದೆ. ಕಿರಣ್ ಎಂಬ ಹುಡುಗನೊಂದಿಗೆ ಅವಳ ಮದುವೆ ನಿಶ್ಚಯವಾಗಿದ್ದು ಆತನನ್ನು ಅನು ತುಂಬಾ ಪ್ರೀತಿಸುತ್ತಾಳೆ. ಮದುವೆಯ ಬಳಿಕ ಆತನ ನಿಜ ಬಣ್ಣ ಬಯಲಾಗುತ್ತದೆ. ಇದೀಗ ಆತನ ಕುತಂತ್ರಗಳು ಅನುವಿಗೆ ತಿಳಿದಿದ್ದೂ ಆಕೆಗೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಅನುವಿನ ಪಾತ್ರದಲ್ಲಿ ಸಾಕಷ್ಟು ಪ್ರಬುದ್ಧತೆಯಿದ್ದರೂ ತಾನು ನಂಬಿದವರಿಂದ ಮೋಸ ಹೋಗುತ್ತೇನೆ ಎಂದು ಅರಿಯದಷ್ಟು ಮುಗ್ಧತೆಯೂ ಇದೆ ಎಂದು ತನ್ನ ಪಾತ್ರವನ್ನು ವಿವರಿಸುವ ವರ್ಷಿತಾಗೆ ಮೊದ ಮೊದಲು ಸ್ವಲ್ಪ ಕಷ್ಟವಾಯಿತಂತೆ. ನಟನೆ ಅವರಿಗೆ ಹೊಸತಲ್ಲವಾದರೂ ತಂತ್ರಜ್ಞಾನದ ಅರಿವು ಅವರಿಗೆ ಅಷ್ಟೊಂದು ಇಲ್ಲದ ಕಾರಣ ಟೇಕ್, ಮಾನಿಟರ್, ಕಟ್ ಎನ್ನುವಾಗ ಕನ್ ಫ್ಯೂಸ್ ಆಗುತ್ತಿತ್ತಂತೆ. ಆದರೆ ಇದೀಗ ಅಭ್ಯಾಸವಾಯಿತು ಎಂದು ನಗುತ್ತಾ ಹೇಳುತ್ತಾರೆ. 

ಮನೆದೇವ್ರು ಧಾರಾವಾಹಿಯೂ ಕುಟುಂಬ ಪ್ರಧಾನವಾದುದು. ಇದರಿಂದ ನಾನು ಕುಟುಂಬ ಮಹತ್ವ ಏನೆಂಬುದನ್ನು ಕಲಿತೆ. ಅಷ್ಟೇ ಅಲ್ಲ ನಾನು ಬೆಳಗ್ಗೆ ಬೇಗ ಏಳುವವಳೇ ಅಲ್ಲ. ಆದರೆ ಇದೀಗ ಶೂಟಿಂಗ್ ನಿಂದ ಆಗಿ ಬೇಗ ಏಳುವುದು ಅಭ್ಯಾಸವಾಗಿದೆ. ಶೂಟಿಂಗ್ ಬೆಳಗ್ಗೆ 6 ಗಂಟೆಗೆ ಆರಂಭವಾಗುವ ಕಾರಣ ಬೇಗ ಎದ್ದು ಹೊರಡಬೇಕಾದುದು ಅನಿವಾರ್ಯ. ಅನು ಪಾತ್ರ ತನ್ನ ಜೀವನದಲ್ಲಿ ಅಷ್ಟು ಬದಲಾವಣೆ ಮಾಡಿದೆ ಎಂದು ತಮ್ಮ ಬಣ್ಣದ ಪಯಣವನ್ನು ವಿವರಿಸುತ್ತಾರೆ ಈ ಚೆಂದುಳ್ಳಿ ಚೆಲುವೆ. 

ಕೇವಲ ಒಂದು ಧಾರಾವಾಹಿಯಲ್ಲೇ ನಟಿಸಿದ್ದರೂ ವರ್ಷಿತಾ ಇಂದು ಮನೆ ಮಾತಾಗುವುದಕ್ಕೆ ರಂಗಭೂಮಿ ಹಿನ್ನಲೆಯೇ ಕಾರಣ. ರಂಗಭೂಮಿಯಲ್ಲಿ ಇದ್ದುದ್ದರಿಂದ ನಟನೆಯ ರೀತಿ ನೀತಿಗಳೂ ಅವರಿಗೆ ಸಲೀಸಾಗಿ ತಿಳಿದಿತ್ತು. “ಮನೆದೇವ್ರು ನನಗೆ ಮೊದಲ ಧಾರಾವಾಹಿ. ಜನ ನನ್ನನ್ನು ಇಂದು ಅನು ಎಂದು ಗುರುತಿಸುವಾಗ ತುಂಬಾ ಖುಷಿಯಾಗುತ್ತದೆ ಎನ್ನುವ ವರ್ಷಿತಾ ರಂಗಭೂಮಿಗೆ ನನ್ನ ಮೊದಲ ಆದ್ಯತೆ ಎನ್ನುತ್ತಾರೆ. ‘’ರಂಗಭೂಮಿಯಲ್ಲಿ ಕಿರುತೆರೆಯಂತೆ ರಿಟೇಕ್ ಗಳಿಲ್ಲ, ಸ್ಟೇಜ್ ಮೇಲೆ ಹೋಗಿ ನಟಿಸಬೇಕು. ಆದರೆ ಕಿರುತೆರೆಯಲ್ಲಿ ಹಾಗಲ್ಲ. ತಪ್ಪಾದರೆ ತಿದ್ದಲೂ ಅವಕಾಶವಿರುತ್ತದೆ. ಇನ್ನು ಉಳಿದ ಕಲಾವಿದರನ್ನು ನೋಡಿ ಅವರಂತೆ ಅನುಕರಣೆ ಮಾಡವುದಕ್ಕಿಂದ ಅವರಲ್ಲಿರುವ ಕಲೆಯನ್ನು ನಮ್ಮಲ್ಲಿ ಹೇಗೆ ಅಭಿವೃದ್ದಿ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಯಬೇಕು ಎನ್ನುವ ಚೆಂದುಳ್ಳಿ ಚೆಲುವೆ ನಾಟಕ ತಂಡದೊಂದಿಗೆ ಇಡೀ ರಾಜ್ಯ ಸುತ್ತಿದ್ದಾರೆ. ಮೈಸೂರು ಮಲ್ಲಿಗೆ ನಾಟಕ ಮಾಡುವಾಗ ಸಣ್ಣ ತಪ್ಪು ಮಾಡಿದ್ದಕ್ಕೆ ನಿರ್ದೇಶಕರಿಂದ ಬೈಸಿಕೊಂಡಿದ್ದೆ ಎಂದು ಕಳೆದುಹೋದ ಕ್ಷಣಗಳನ್ನು ಮೆಲುಕುಹಾಕುತ್ತಾರೆ. 

ನೆಗೆಟಿವ್ ಪಾತ್ರದಲ್ಲಿ ನಟಿಸುವ ಅಭಿಲಾಷೆ ನನ್ನದು ಎನ್ನುವ ವರ್ಷಿತಾಗೆ ಸುದೀಪ್ ಅವರ ಜೊತೆ ನಟಿಸುವ ಕನಸು. ಅವರಲ್ಲಿರುವ ವರ್ಸಿಟಾಲಿಟಿ ಎಲ್ಲರಲ್ಲೂ ಇಲ್ಲ. ಯಾವುದೇ ಪಾತ್ರವಾದರೂ ಸರಿ, ಅದಕ್ಕೆ ಅವರು ಬಹುಬೇಗನೇ ಹೊಂದಿಕೊಳ್ಳುತ್ತಾರೆ. ನಾನು ಕೂಡಾ ಅವರಂತೆ ಬೆಳೆಯಬೇಕು ಎನ್ನುಬವ ಬೆಂಗಳೂರು ಬೆಡಗಿಗೆ ಸುದೀಪ್ ಗೆ ನಾಯಕಿಯಾಗಿ ನಟಿಸುವ ಮಹದಾಸೆ. ಇನ್ನು ಮುಂದೆ ನಾಯಕಿ ಪ್ರಧಾನ ಪಾತ್ರಗಳನ್ನೇ ಒಪ್ಪಿಕೊಳ್ಳುತ್ತೇನೆ ಎನ್ನುವ ವರ್ಷಿತಾಗೆ ಸಿನಿಮಾ, ಕಿರುತೆರೆಯಲ್ಲಿ ಮುಂದುವರಿಯುವ ಬಯಕೆ. 

- ಅನಿತಾ ಬನಾರಿ 

8 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್