ಉದಯೋನ್ಮುಖರು

ಬಣ್ಣದ ಲೋಕದ ಸ್ಕಂದ ಪುರಾಣ
0

ಮುದ್ದು ಮುಖದ ತುಂಬಾ ಸದಾ ಮುಗುಳುನಗು ಹೊಂದಿರುವ ಈ ಚಾಕಲೇಟ್ ಬಾಯ್ ಹೆಸರು ಸ್ಕಂದ ಅಶೋಕ್. ಈಗಾಗಲೇ ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ಚಿಕ್ಕಮಗಳೂರಿನ ಚೆಲುವ ಇಂದು ರಮಣನೆಂದೇ ಚಿರಪರಿಚಿತ. ಕಲರ್ಸ್ ಕನ್ನಡ ವಾಹಿನಿಯ ರಾಧಾ ರಮಣ ಧಾರಾವಾಹಿಯ ರಮಣನಾಗಿ ಗಮನ ಸೆಳೆದಿರುವ ಸ್ಕಂದ ಅಶೋಕ್ ಸೀರಿಯಲ್ ಪ್ರಿಯರ ಮನದಲ್ಲಿ ಸ್ಥಾನ ಪಡೆದಾಗಿದೆ. 

ಬ್ಯುಸಿನೆಸ್ ಮ್ಯಾನ್ ಆಗಿರುವ ರಮಣ ಮಿಸ್ಟರ್ ಪರ್ಫೆಕ್ಟ್ ಎಂದು ಪ್ರಖ್ಯಾತ. ಅರಳು ಹುರಿದಂತೆ ಇಂಗ್ಲೀಷ್ ಭಾಷೆ ಮಾತನಾಡುವ ರಮಣನಿಗೆ ಎಲ್ಲವೂ ಅಚ್ಚುಕಟ್ಟಾಗಿರಬೇಕು. ಅದರ ಹೊರತಾಗಿ ನಾಯಕ ರಮಣನಿಗೆ ತಂಗಿ ಎಂದರೆ ಪ್ರಾಣ. ಹಾಗೆಯೇ ನಾಯಕಿ ಆರಾಧನಾಳಿಗೆ ಅಣ್ಣ ಎಂದರೆ ಪ್ರಾಣ. ರಮಣನ ತಂಗಿ ಮತ್ತು ರಾಧಾಳ ಅಣ್ಣ ಪ್ರೇಮಿಗಳು. ಇವರಿಬ್ಬರ ಪ್ರೇಮಕ್ಕೆ ಮನೆಯವರ ಒಪ್ಪಿಗೆಯೇನೋ ಇದೆ. ಆದರೆ ನಾಯಕಿ ಅಣ್ಣನಿಗೆ ತನ್ನ ತಂಗಿಯ ಮದುವೆ ಆಗಬೇಕು ಎಂದು, ನಾಯಕನ ತಂಗಿಗೆ ತನ್ನ ಅಣ್ಣನ ಮದುವೆ ಆಗಬೇಕು ಎಂಬ ಬಯಕೆ. ಹೀಗೆ ಮದುವೆ ನಿಶ್ಚಯವೇನೂ ಆಗುತ್ತದೆ. ಆ ಸಮಯದಲ್ಲಿ ಆರಾಧನಾಳನ್ನು ವರಿಸಲಿರುವ ವರ ಸಾಗರ್ ಕಣ್ಮರೆಯಾಗುತ್ತಾನೆ. ಆಗ ಕಾರಣಾಂತರಗಳಿಂದ ರಾಧಾ ಹಾಗೂ ರಮಣ್ ಮದುವೆಯೇನೋ ಆಗುತ್ತದೆ. ಅವರಿಬ್ಬರಿಗೂ ಪರಸ್ಪರ ಇಷ್ಟ ಇರುವುದಿಲ್ಲ. ಆದರ ಒಪ್ಪಲೇಬೇಕಾದ ಪರಿಸ್ಥಿತಿ. ಆಗ ಅವರಿಬ್ಬರೂ ಸೇರಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಅದುವೇ ಕಾಂಟ್ರಾಕ್ಟ್ ಮ್ಯಾರೇಜ್. ಆರು ತಿಂಗಳ ನಂತರ ಮದುವೆ ಮುರಿದುಕೊಳ್ಳುವ ಒಪ್ಪಂದ. ಆದರೆ ಇದೀಗ ರಮಣ  ಮತ್ತು ರಾಧಾಳ ನಡುವೆ ಸ್ನೇಹ ಆರಂಭವಾಗಿದೆ. ಮುಂದೆ ಕತೆ ಹೇಗೆ ಸಾಗುತ್ತದೆ ಎಂಬುದು ಕುತೂಹಲ.. ಇದು ರಾಧಾ ರಮಣದ ಸಾರಾಂಶ.  

ಸ್ಕಂದ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಗತಿ ತುಂಬಾ ರೋಚಕವಾಗಿದೆ. ಕಾಲೇಜು ದಿನಗಳಲ್ಲಿ ಟಿವಿ ಮತ್ತು ಮುದ್ರಣ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿರುವ ಸ್ಕಂದಗೆ ಜನರ ಕೂಗು, ಅವರಾಡುವ ಪ್ರಶಂಸೆಯ ಮಾತು, ತುಂಬು ಮನಸ್ಸಿಸನಿಂದ ಜನ ಮೆಚ್ಚುಗೆ ವ್ಯಕ್ತ ಪಡಿಸುವ ರೀತಿ ಇಷ್ಟವಂತೆ. ತಾನು ಕೂಡಾ ಇದನ್ನು ಅನುಭವಿಸಬೇಕು, ಜನರ ಪ್ರಶಂಸೆಗೆ, ಅವರ ಕೂಗಿಗೆ ದನಿಯಾಗಬೇಕು ಎಂಬೆಲ್ಲ ಬಯಕೆ ಇತ್ತು. ಒಂದಲ್ಲ ಒಂದು ದಿನ ಜನ ನನ್ನನ್ನು ಗುರುತಿಸುವಂತೆ ಆಗಬೇಕು ಎಂದು ಅಂದುಕೊಂಡಿದ್ದರು. ಆ ಸಮಯಕ್ಕೆ ನಟನಾ ಕ್ಷೇತ್ರ ಅವರನ್ನು ಕೈ ಬೀಸಿ ಕರೆಯಿತು. ಒಲ್ಲೆ ಎನ್ನದ ಸ್ಕಂದ ಿದೀಗ ತಮ್ಮ ಕನಸು ನನಸಾದ ಸಂತೋಷದಲ್ಲಿದ್ದಾರೆ. 

ರಾಧಾ ರಮಣದ ಮೂಲಕ ಕಿರುತೆರೆಗೆ ಕಾಲಿಟ್ಟ ಈ ಚಾಕಲೇಟ್ ಬಾಯ್ ಈಗಾಗಲೇ ಹಿರಿತೆರೆಗೆ ಕಾಲಿಟ್ಟಾಗಿದೆ. ಮಲಯಾಳಂ ನ ನೋಟ್ ಬುಕ್ ಮೂಲಕ ಸಿನಿಲೋಕಕ್ಕೆ ಕಾಲಿಟ್ಟ ಸ್ಕಂದ ನೋಟ್ ಬುಕ್ ನ ಅಭಿನಯಕ್ಕೆ  ಏಷಿಯನೇಟ್ ಫಿಲ್ಮಂ ನೀಡುವ ಹೊಸ ಮುಖ ಪ್ರಶಸ್ತಿ ಪಡೆದಿರುತ್ತಾರೆ. ಮುಂದೆ ಪಾಸಿಟಿವ್ ಮತ್ತು ಎಲೆಕ್ಟ್ರಾ ಸಿನಿಮಾ ಮಾಡಿದರು. ಎಲೆಕ್ಟ್ರಾ ಸಿನಿಮಾದಲ್ಲಿ ಪ್ರಕಾಶ್ ರೈ, ಮನೀಷಾ ಕೊಯಿರಾಲ, ನಯನತಾರಾ ಅವರೊಂದಿಗೆ ನಟಿಸಿರುವ ಸ್ಕಂದ ತಮಿಳಿನ ಅಂಗುಸ್ಯಂ ಚಿತ್ರದಲ್ಲಿ ನಟಿಸಿದರು. ಅವರ ಅಭಿನಯದ ಮತ್ತೊಂದು ತಮಿಳು ಚಿತ್ರ ಮುಪ್ಪರಿಮಾನಂ ನ ಚಿತ್ರೀಕರಣ ಪೂರ್ಣಗೊಂಡಿದ್ದು ಚಿತ್ರ ಬಿಡುಗಡೆಯಾಗಬೇಕಿದೆ. ತೆಲುಗಿನ ಮಲ್ಲಿ ಮಲ್ಲಿ ಯಲ್ಲಿ ಅಭಿನಯಿಸಿರುವ ಇವರು ಸ್ಯಾಂಡಲ್ ವುಡ್ ನಲ್ಲಿ ಕೇಳಿ ಬರುತ್ತಿರುವ ಚಿರಪರಿಚಿತ ಹೆಸರು. ಚಾರುಲತಾ ಮತ್ತು ಯೂ ಟರ್ನ್ ಸಿನಿಮಾದ ಮೂಲಕ ಸ್ಕಂದ ಅಶೋಕ್ ಕನ್ನಡಕ್ಕೆ ಪರಿಚಿತರಾದರೂ ಸದ್ಯಕ್ಕೆ ಜನ ಅವರು ರಮಣ ಎಂದೇ ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ರಮಣ ನ ಪಾತ್ರ ಮೋಡಿ ಮಾಡಿಬಿಟ್ಟಿದೆ. 

- ಅನಿತಾ ಬನಾರಿ 


9 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್