ಉದಯೋನ್ಮುಖರು

ಚಂದನವನದಲ್ಲಿ ಕುಡ್ಲದ ಸುಂದರಿ
0

ಕಡಲತಡಿಯ ಸಾಕಷ್ಟು ಪ್ರತಿಭೆಗಳು ಇಂದು ಕಿರುತೆರೆ, ಹಿರಿತೆರೆ, ಮಾಡೆಲಿಂಗ್ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ವಿಶಿಷ್ಟ ಪ್ರತಿಭೆಯಿಂದ ಎಲ್ಲರ ಮನ ಸೆಳೆಯುತ್ತಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರ್ಪಡೆಯಾದವರು ಮಂಗಳೂರು ಬೆಡಗಿ ಅಮಿತಾ ಕುಲಾಲ್ .

ಚಿಕ್ಕಂದಿನಿಂದಲೂ ನೃತ್ಯದ ಬಗ್ಗೆ ಆಸಕ್ತಿ ಹೊಂದಿದ ಅಮಿತಾ ಮೊದಲ ಬಾರಿ ನೃತ್ಯ ಮಾಡಿದಾಗ ಐದರ ಹರೆಯ. ಭರತನಾಟ್ಯ ಕಲಿತಿರುವ ಅಮಿತಾರಿಗೆ ಎಳವೆಯಲ್ಲೇ ಮಾಡೆಲಿಂಗ್ ನತ್ತ ವಿಶೇಷ ಆಸಕ್ತಿ. ಫ್ಯಾಷನ್ ಗೆ ಸಂಬಂಧಿಸಿದ ಟಿವಿ ಶೋ ಗಳನ್ನು ಪ್ರೇರಣೆ ಗೊಂಡ ಆಕೆಗೆ ಮಾಡೆಲಿಂಗ್ ಮಾಡುವ ಕನಸು. ನಾನಾ ನಮೂನೆಯ ಡ್ರೆಸ್ ಹಾಕಿ ಮನೆಯಲ್ಲಿಯೇ ರಾಂಪ್ ವಾಕ್ ಮಾಡುತ್ತಿದ್ದರು. ಅಷ್ಟರ ಮಟ್ಟಿಗೆ ಸೆಳೆದಿತ್ತು ಮಾಡೆಲಿಂಗ್ ಮೋಹ. ಪದವಿ ಶಿಕ್ಷಣ ಮುಗಿದ ಕೂಡಲೇ ಸಂಪೂರ್ಣ ಮಾಡೆಲಿಂಗ್ ನಲ್ಲಿ ಮುಂದುವರೆಯುವ ನಿರ್ಧಾರ ಮಾಡಿದರು. ಮನಸಿನ ಆಳದಲ್ಲಿ ಅಡಗಿದ ಬಣ್ಣದ ಬದುಕಿನ ಆಸಕ್ತಿ ಅವರನ್ನು ಮುಂಬಯಿಗೆ ತೆರಳುವಂತೆ ಮಾಡಿತು. ರಾಂಪ್ ವಾಕ್, ಮಾಡೆಲಿಂಗ್ ಮೂಲಕ ಫ್ಯಾಷನ್ ಲೋಕದಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿರುವ ಅಮಿತಾ ಈಗಾಗಲೇ ಬಾಲಿವುಡ್ ಅಂಗಳದಲ್ಲೂ ಮಿಂಚಿದ ಪ್ರತಿಭೆ. 

ಹಿಂದಿ ವಿಡಿಯೋ ಆಲ್ಬಂಗಳಲ್ಲಿ ಅಭನಯಿಸಿವ ಮೂಲಕ ಬಣ್ಣದ ಕ್ಷೇತ್ರಕ್ಕೆ ಕಾಲಿಟ್ಟ ಅಮಿತಾ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಕೊರಿಯೋಗ್ರಫರ್ ಗಣೇಶ‍್ ಆಚಾರ್ಯ ಮತ್ತು ತಂಡ ಝಂಕಾರ್ ವಿಡಿಯೋ ಆಲ್ಬಂ ಅಮಿತಾಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತು. ಮುಂದೆ ರಾಕೇಶ್ ಕಪೂರ್ ಅವರ ವಿಡಿಯೋ ಆಲ್ಬಂಗಳಲ್ಲಿ ಅಭಿನಯಿಸಿರುವ ಅಮಿತಾ ಮಾಡೆಲಿಂಗ್ ಗೂ ಸೈ. ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಮಧುರೈ ಸಿಲ್ಕ್ಸ್, ಸೂರತ್ ಬ್ರಾಂಡ್, ಹೈದರಬಾದ್ ಸಾರೀಸ್ ಗಳಿಗೆ ರೂಪದರ್ಶಿಯಾಗಿ ಮಿಂಚಿದ್ದಾರೆ. 

ಕನ್ನಡದ ನಿರ್ದೇಶಕ ಶ್ಯಾಮ್ ಅವರ ಹ್ಯಾಪಿ ಜರ್ನಿ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ ಕುಡ್ಲದ ಬೆಡಗಿ. ನಟ ಸೃಜನ್ ಲೋಕೇಶ್ ಗೆ ನಾಯಕಿಯಾಗಿರುವ ಅಮಿತಾ ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ.

ತನ್ನ ಎಲ್ಲಾ ಸಾಧನೆಗೆ ಬೆನ್ನುಲುಬಾಗಿ ನಿಂತವರು ನನ್ನ ಹೆತ್ತವರು. ಅವರು ನನಗೆ ನೀಡಿದ ಪ್ರೋತ್ಸಾಹವನ್ನು ಮರೆಯಲು ಅಸಾಧ್ಯ ಎನ್ನುವ ಅಮಿತಾ ಮಂಗಳೂರಿನ ಸದಾಶಿವ ಬಂಗೇರ ಮತ್ತು ವೇದಾವತಿ ಎಸ್ ಬಂಗೇರ ದಂಪತಿಯ ಪುತ್ರಿ. ಅಮಿತಾ ಸಿನಿ ಜರ್ನಿ ಸದಾ ಹ್ಯಾಪಿಯಾಗಿ ಸಾಗಲಿ ಎಂದು ಹಾರೈಸೋಣ. 

- ಅನಿತಾ ಬನಾರಿ


9 months ago Udayonmukharu

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್